AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಪಾದಯಾತ್ರೆಗೆ ಸೆಡ್ಡು ಹೊಡೆಯಲು ಬಿಜೆಪಿ ಪ್ಲ್ಯಾನ್, ರಾಮನಗರದಲ್ಲಿ ಅದ್ದೂರಿ‌ ಕಾರ್ಯಕ್ರಮ; ಸಿಎಂ ಇಂದು ಜಿಲ್ಲಾ ಪ್ರವಾಸ

ರಾಮನಗರ ಜಿಲ್ಲೆಯ ಸಂಗಮದಿಂದ ಜನವರಿ 9 ರಂದು ಕಾಂಗ್ರೆಸ್ ಪಾದಯಾತ್ರೆ ಆರಂಭಗೊಳ್ಳಲಿದೆ. ಹೀಗಾಗಿ ಕಾಂಗ್ರೆಸ್ ಪಾದಯಾತ್ರೆ ಆರಂಭಗೊಳ್ಳುವ ಆರು ದಿನ ಮೊದಲು ಬಿಜೆಪಿ ರಾಮನಗರದಲ್ಲಿ ಕಾರ್ಯಕ್ರಮ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ.

ಕಾಂಗ್ರೆಸ್ ಪಾದಯಾತ್ರೆಗೆ ಸೆಡ್ಡು ಹೊಡೆಯಲು ಬಿಜೆಪಿ ಪ್ಲ್ಯಾನ್, ರಾಮನಗರದಲ್ಲಿ ಅದ್ದೂರಿ‌ ಕಾರ್ಯಕ್ರಮ; ಸಿಎಂ ಇಂದು ಜಿಲ್ಲಾ ಪ್ರವಾಸ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
TV9 Web
| Updated By: ಆಯೇಷಾ ಬಾನು|

Updated on:Jan 03, 2022 | 9:02 AM

Share

ರಾಮನಗರ: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆಗೆ ಮುಂದಾಗಿದ್ದು ಇದಕ್ಕೆ ಸೆಡ್ಡು ಹೊಡೆಯಲು ಬಿಜೆಪಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತವರು ಜಿಲ್ಲೆಯಲ್ಲೇ ಅದ್ದೂರಿ‌ ಕಾರ್ಯಕ್ರಮ ಆಯೋಜಿಸಿದೆ. ಬಿಜೆಪಿ ಶಾಸಕರು ಇಲ್ಲದ ಜಿಲ್ಲೆಯಲ್ಲಿ ಕಾರ್ಯಕ್ರಮ ಮಾಡಲು ಮುಂದಾಗಿದೆ.

ಕಾಂಗ್ರೆಸ್ ಪಾದಯಾತ್ರೆಗೆ ಟಕ್ಕರ್ ಕೊಡಲು ಮುಂದಾದ ಬಿಜೆಪಿ ರಾಮನಗರ ಜಿಲ್ಲೆಯ ಸಂಗಮದಿಂದ ಜನವರಿ 9 ರಂದು ಕಾಂಗ್ರೆಸ್ ಪಾದಯಾತ್ರೆ ಆರಂಭಗೊಳ್ಳಲಿದೆ. ಹೀಗಾಗಿ ಕಾಂಗ್ರೆಸ್ ಪಾದಯಾತ್ರೆ ಆರಂಭಗೊಳ್ಳುವ ಆರು ದಿನ ಮೊದಲು ಬಿಜೆಪಿ ರಾಮನಗರದಲ್ಲಿ ಕಾರ್ಯಕ್ರಮ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಬಿಜೆಪಿ ಕಾಂಗ್ರೆಸ್ಗೆ ಟಕ್ಕರ್ ಕೊಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇಂದು ಸಿಎಂ ಬೊಮ್ಮಾಯಿ ರಾಮನಗರ ಜಿಲ್ಲಾ ಪ್ರವಾಸ ಇಂದು ಸಿಎಂ ಬಸವರಾಜ ಬೊಮ್ಮಾಯಿ ರಾಮನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಬೆಳಗ್ಗೆ 10 ಗಂಟೆಗೆ ರಸ್ತೆ ಮಾರ್ಗವಾಗಿ ಸಿಎಂ ಪ್ರಯಾಣ ಬೆಳೆಸಲಿದ್ದು ಬೆಂಗಳೂರಿನಿಂದ ರಾಮನಗರಕ್ಕೆ ತೆರಳಲಿದ್ದಾರೆ. ರಾಮನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ, ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ ಮಾಡಲಿದ್ದಾರೆ. ಹಾಗೂ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆಯಲ್ಲಿ ಭಾಗಿಯಾಗಲಿದ್ದಾರೆ.

ರಾಮನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕಾರ್ಯಕ್ರಮ ನಡೆಯಲಿದ್ದು ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ, ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ, ಮಾಗಡಿ ತಾಲೂಕಿನ ಚಿಕ್ಕಕಲ್ಯಾದಲ್ಲಿ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ನಂತರ ಕೆಂಪೇಗೌಡರ ಸಮಾಧಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಕೊನೆಗೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸಂಜೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಸಿಎಂಗೆ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ ಸಿ.ಎನ್. ಅಶ್ವತ್ಥ್ ನಾರಾಯಣ್ ಸಾಥ್ ನೀಡಲಿದ್ದಾರೆ.

ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್‌ ಪಕ್ಷದಿಂದ ಸಿದ್ಧತೆ ಇನ್ನು ಮತ್ತೊಂದೆಡೆ ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್‌ ಪಕ್ಷ ಸಿದ್ಧತೆ ಆರಂಭಿಸಿದೆ. ಪಾದಯಾತ್ರೆ ಸಂಬಂಧ ಮೈಸೂರಿನ ದೇವರಾಜ ಮೊಹಲ್ಲಾದ ಕಾಂಗ್ರೆಸ್ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಲಿದ್ದು ಸಭೆಯಲ್ಲಿ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಭಾಗಿಯಾಗಲಿದ್ದಾರೆ. ಪೂರ್ವಭಾವಿ ಸಭೆಗೂ ಮುನ್ನ ಮೈಸೂರಲ್ಲಿ ಬೆಳಗ್ಗೆ 10 ಗಂಟೆಗೆ ಬೃಹತ್ ಮೆರವಣಿಗೆ ನಡೆಯಲಿದೆ. ಗನ್‌ಹೌಸ್ ವೃತ್ತದಿಂದ ಕಾಂಗ್ರೆಸ್ ಕಚೇರಿವರೆಗೆ ಮೆರವಣಿಗೆ ನಡೆಯಲಿದೆ.

ಇದನ್ನೂ ಓದಿ: Food Allergy: ಫುಡ್ ಅಲರ್ಜಿಗೆ ಈ ಆಹಾರಗಳೇ ಕಾರಣ

Published On - 8:51 am, Mon, 3 January 22

ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ
ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ
ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
ಕಾನ್ಪುರದಲ್ಲಿ 2 ಸ್ಕೂಟರ್‌ಗಳಲ್ಲಿ ಸ್ಫೋಟ; 6 ಜನರಿಗೆ ಗಾಯ
ಕಾನ್ಪುರದಲ್ಲಿ 2 ಸ್ಕೂಟರ್‌ಗಳಲ್ಲಿ ಸ್ಫೋಟ; 6 ಜನರಿಗೆ ಗಾಯ
ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಪತಿ: ಅಪ್ಪನ ಅಸಲಿ ಬಣ್ಣ ಬಿಚ್ಚಿಟ್ಟ ಮಗ
ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಪತಿ: ಅಪ್ಪನ ಅಸಲಿ ಬಣ್ಣ ಬಿಚ್ಚಿಟ್ಟ ಮಗ
ಅಮಿತ್ ಶಾ ಅವರನ್ನು ನಂಬಬೇಡಿ; ಮೋದಿಗೆ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ
ಅಮಿತ್ ಶಾ ಅವರನ್ನು ನಂಬಬೇಡಿ; ಮೋದಿಗೆ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ
ಬಿಗ್ ಬಾಸ್ ಸ್ಥಗಿತ ಆಗಲು ಜಾಲಿವುಡ್ ಸ್ಟುಡಿಯೋ ಮಾಡಿದ ಮುಖ್ಯ ತಪ್ಪು ಏನು?
ಬಿಗ್ ಬಾಸ್ ಸ್ಥಗಿತ ಆಗಲು ಜಾಲಿವುಡ್ ಸ್ಟುಡಿಯೋ ಮಾಡಿದ ಮುಖ್ಯ ತಪ್ಪು ಏನು?
ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ಸಚಿವ ದರ್ಶನಾಪುರ ಏನಂದ್ರು?
ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ಸಚಿವ ದರ್ಶನಾಪುರ ಏನಂದ್ರು?
ಸಿಸಿ , ಓಸಿ ಪಡೆಯದೇ ಮನೆ ಕಟ್ಟಿದವರಿಗೆ ಗುಡ್ ನ್ಯೂಸ್
ಸಿಸಿ , ಓಸಿ ಪಡೆಯದೇ ಮನೆ ಕಟ್ಟಿದವರಿಗೆ ಗುಡ್ ನ್ಯೂಸ್
BBK: ಕನ್ನಡಪರ ಹೋರಾಟಗಾರರಿಂದ 15 ಲಕ್ಷ ರೂ. ಡಿಮ್ಯಾಂಡ್; ಸಂಬರಗಿ ಆರೋಪ
BBK: ಕನ್ನಡಪರ ಹೋರಾಟಗಾರರಿಂದ 15 ಲಕ್ಷ ರೂ. ಡಿಮ್ಯಾಂಡ್; ಸಂಬರಗಿ ಆರೋಪ
ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ
ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ