ಬೆಂಗಳೂರು: ಕಾಂಗ್ರೆಸ್ನ ಫ್ಯೂಸ್ ಕಿತ್ತು ಹಾಕಿದ್ದೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿಕೆಗೆ ಜನರು ಯಾರು ಯಾರ ಫ್ಯೂಸ್ ಕಿತ್ತಾಕಿದ್ದಾರೆಂದು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೊತ್ತಾಗುತ್ತೆ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದ್ದಾರೆ. ನಂತರ ಮಾತನಾಡಿದ ಅವರು, ಕೆ.ಎಸ್.ಈಶ್ವರಪ್ಪ ಆರೋಪಗಳ ಬಗ್ಗೆ ನಾನು ಮಾತಾಡಲ್ಲ. ಅವನ ನಾಲಿಗೆಗೂ ಬ್ರೈನ್ಗೂ ಲಿಂಕೇ ಇಲ್ಲ ಅಂತ ಕಿಡಿ ಕಾರಿದರು.
ಬೆಂಗಳೂರು ಉತ್ತರ ತಾಲೂಕಿನ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಿಂದ ಸಿದ್ದರಾಮಯ್ಯ ವಾಪಸ್ ಆಗಿದ್ದಾರೆ. 10 ದಿನಗಳ ಪ್ರಕೃತಿ ಚಿಕಿತ್ಸೆಯ ಬಳಿಕ ಸಿದ್ದರಾಮಯ್ಯ ವಾಪಸ್ ಆಗಿದ್ದಾರೆ. ಆಗಸ್ಟ್ 21ರಂದು ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗಿದ್ದರು. ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ನಾನು ಪ್ರತಿ ಬಾರಿ ಧರ್ಮಸ್ಥಳ ಪ್ರಕೃತಿ ಚಿಕಿತ್ಸಾಲಯಕ್ಕೆ ಹೋಗುತ್ತಿದೆ. ಈ ಬಾರಿ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯಕ್ಕೆ ದಾಖಲಾಗಿದ್ದೆ. ಇಲ್ಲಿಯೂ ಉತ್ತಮ ಚಿಕಿತ್ಸೆ ನೀಡಿದ್ದಾರೆ ಅಂತ ತಿಳಿಸಿದರು.
ಇದೇ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಜಿ.ಟಿ.ದೇವೇಗೌಡ ನನ್ನ ಜತೆ ಮಾತಾಡಿರುವುದು ಸತ್ಯ. ಜಿ.ಟಿ.ದೇವೇಗೌಡ, ಮಗ ಹರೀಶನಿಗೂ ಟಿಕೆಟ್ ಕೇಳಿದ್ದಾರೆ. ಆದರೆ ಯಾವ ಕ್ಷೇತ್ರದಿಂದ ಟಿಕೆಟ್ ಬೇಕೆಂದು ಕೇಳಿಲ್ಲ. ಈ ಬಗ್ಗೆ ಸುರ್ಜೇವಾಲ ಜೊತೆ ಚರ್ಚಿಸುತ್ತೇನೆಂದು ಹೇಳಿದ್ದೇನೆ. ನಾನು ಈ ವಿಚಾರವಾಗಿ ಸುರ್ಜೇವಾಲ ಜತೆ ಇನ್ನೂ ಚರ್ಚಿಸಿಲ್ಲ ಎಂದರು.
ಕೊರೊನಾ ಪರಿಸ್ಥಿತಿ ನೋಡಿಕೊಂಡು ಶಾಲೆ ಆರಂಭಿಸಲಿ. ಶಾಲೆಗಳನ್ನು ಆರಂಭ ಮಾಡದಿದ್ದರೂ ಸಮಸ್ಯೆಯಾಗುತ್ತದೆ. ಬಾಲಕಾರ್ಮಿಕರು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಪರಿಸ್ಥಿತಿ ನೋಡಿಕೊಂಡು ಶಾಲೆ ಆರಂಭಿಸಲಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.
ಇದನ್ನೂ ಓದಿ
ಗೃಹ ಸಚಿವ ಆರಗ ಭಾಷಣದ ವೇಳೆ ಕುಸಿದು ಬಿದ್ದ ಕಾನ್ಸ್ಟೇಬಲ್; ಎತ್ತಿಕೊಂಡು ಹೋಗಿ ಮಾನವೀಯತೆ ಮೆರೆದ ಎಸ್ಪಿ ಅಕ್ಷಯ್
(Siddaramaiah react to HD Kumaraswamy Congress fuse statement in Bengaluru)
Published On - 12:12 pm, Tue, 31 August 21