ಗೃಹ ಸಚಿವ ಆರಗ ಭಾಷಣದ ವೇಳೆ ಕುಸಿದು ಬಿದ್ದ ಕಾನ್ಸ್ಟೇಬಲ್; ಎತ್ತಿಕೊಂಡು ಹೋಗಿ ಮಾನವೀಯತೆ ಮೆರೆದ ಎಸ್ಪಿ ಅಕ್ಷಯ್
ಎಸ್ಪಿ ಅಕ್ಷಯ್ ಅವರ ಸಮಯ ಪ್ರಜ್ಞೆ ಹಾಗೂ ಮಾನವೀಯತೆಯನ್ನು ನೆರೆದಿದ್ದವರು ಶ್ಲಾಘಿಸಿದ್ದಾರೆ. ಇಲಾಖೆ ಸಿಬ್ಬಂದಿ ಅಸ್ವಸ್ಥಗೊಳ್ಳುತ್ತಿದ್ದಂತೆಯೇ ತಕ್ಷಣ ವೇದಿಕೆ ಮುಂಭಾಗ ಬಂದು ಅವರೆಡೆಗೆ ಗಮನ ಹರಿಸಿ ಆಸ್ಪತ್ರೆಗೆ ಸೇರಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು: ಗೃಹ ಸಚಿವ ಆರಗ ಜ್ಞಾನೆಂದ್ರ ಅವರು ಭಾಷಣ ಮಾಡುತ್ತಿದ್ದ ವೇಳೆ ಪೊಲೀಸ್ ಸಿಬ್ಬಂದಿ ಒಬ್ಬರು ಕುಸಿದುಬಿದ್ದ ಘಟನೆ ಕಡೂರಿನ ಪೊಲೀಸ್ ತರಬೇತಿ ಶಾಲೆಯಲ್ಲಿ ನಡೆದಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಭಾಷಣ ಮಾಡುತ್ತಿರುವಾಗ ವೇದಿಕೆಯ ಎಡ ಹಾಗೂ ಬಲ ಭಾಗದಲ್ಲಿ ಪೊಲೀಸ್ ಸಿಬ್ಬಂದಿ ನಿಂತಿದ್ದರು. ತರಬೇತಿ ಪೊಲೀಸರ ನಿರ್ಗಮನದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಈ ಸಿಬ್ಬಂದಿಯಲ್ಲಿ ಒಬ್ಬರಾದ ಮೈಲುದ್ದಿನ್ ಏಕಾಏಕಿ ತಲೆ ಸುತ್ತಿ ಬಂದು ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಮಾನವೀಯತೆ ಮೆರೆದ ಚಿಕ್ಕಮಗಳೂರು ಎಸ್ಪಿ ಅಕ್ಷಯ್, ಕುಸಿದು ಬಿದ್ದ ಪೊಲೀಸ್ ಸಿಬ್ಬಂದಿಯನ್ನು ಎತ್ತಿಕೊಂಡು ಹೋಗಿ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಎಸ್ಪಿ ಅಕ್ಷಯ್ ಅವರ ಸಮಯ ಪ್ರಜ್ಞೆ ಹಾಗೂ ಮಾನವೀಯತೆಯನ್ನು ನೆರೆದಿದ್ದವರು ಶ್ಲಾಘಿಸಿದ್ದಾರೆ. ಇಲಾಖೆ ಸಿಬ್ಬಂದಿ ಅಸ್ವಸ್ಥಗೊಳ್ಳುತ್ತಿದ್ದಂತೆಯೇ ತಕ್ಷಣ ವೇದಿಕೆ ಮುಂಭಾಗ ಬಂದು ಅವರೆಡೆಗೆ ಗಮನ ಹರಿಸಿ ಆಸ್ಪತ್ರೆಗೆ ಸೇರಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೊಡ್ಡ ಪ್ರಮಾಣದ ಗಾಂಜಾ ವಶ ಚಿಕ್ಕಮಗಳೂರು: ಕರ್ನಾಟಕದ ಕರಾವಳಿ, ಮಲೆನಾಡು ಜಿಲ್ಲೆಗಳ ಕಾಲೇಜು ಹುಡುಗರು, ಕೂಲಿ ಕಾರ್ಮಿಕರನ್ನ ಗುರಿಯಾಗಿಸಿ ಗಾಂಜಾ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವೊಂದರ ಮೇಲೆ ದಾಳಿ ನಡೆಸಿರುವ ಚಿಕ್ಕಮಗಳೂರು ಪೊಲೀಸರು ಒಂದು ಕ್ವಿಂಟಲ್ಗೂ ಹೆಚ್ಚು ತೂಕದ ಒಣ ಗಾಂಜಾ (Marijuana) ವಶಕ್ಕೆ ಪಡೆದಿದ್ದಾರೆ. ಚಿಕ್ಕಮಗಳೂರು ತಾಲ್ಲೂಕಿನ ಕರ್ತಿಕೆರೆ ಬಳಿ ಘಟನೆ ನಡೆದಿದ್ದು, ಗಾಂಜಾ ಸಾಗಿಸುತ್ತಿದ್ದ ವಾಹನದ ಮೇಲೆ CEN ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಮಲೆನಾಡು ಭಾಗದಲ್ಲಿ ಇಷ್ಟು ದೊಡ್ಡಮಟ್ಟದ ಕಾರ್ಯಾಚರಣೆ ನಡೆದ್ದು, ಒಟ್ಟು 102 ಕೆಜಿ ಒಣ ಗಾಂಜಾ ದಾಳಿ ವೇಳೆ ಲಭ್ಯವಾಗಿದೆ.
CEN ಇನ್ಸ್ಪೆಕ್ಟರ್ ರಕ್ಷಿತ್ ನೇತೃತ್ವದಲ್ಲಿ ಪೊಲೀಸರ ಕಾರ್ಯಾಚರಣೆ ನಡೆದಿದ್ದು, ಆರೋಪಿಗಳು ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಗಾಂಜಾ ಖರೀದಿ ಮಾಡಿ ಚಿಕ್ಕಮಗಳೂರು ಸೇರಿದಂತೆ ಮಂಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆಗಳಿಗೆ ತಮ್ಮ ತಂಡದ ಮೂಲಕ ಪೂರೈಕೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಈ ಗುಂಪು ತರಕಾರಿ ಗಾಡಿಯಲ್ಲಿ ಗಾಂಜಾ ಸಾಗಣೆ ಮಾಡುವ ಮೂಲಕ ಅಕ್ರಮ ಚಟುವಟಿಕೆಯನ್ನು ಎಗ್ಗಿಲ್ಲದೆ ನಡೆಸುತ್ತಿದ್ದರು, ಕಾಲೇಜು ಹುಡುಗರು, ಕೂಲಿ ಕಾರ್ಮಿಕರೇ ಇವರ ಗುರಿಯಾಗಿದ್ದರು ಎಂದು ಹೇಳಲಾಗಿದೆ.
ಈ ರೀತಿಯ ಗಾಂಜಾ ರೇಡ್ ಇದು ಮೊದಲೆನಲ್ಲ. ಈ ಹಿಂದೆಯೂ ಹಲವಾರು ದಾಳಿ ನಡೆಸಿ ಪೊಲೀಸರು ಗಾಂಜಾ ಮಾಲು ಸಮೇತ ಆರೋಪಿಗಳನ್ನ ಬಂಧಿಸಿದ್ದರು. ಆದರೆ ಇದು ದೊಡ್ಡಮಟ್ಟದ ಕಾರ್ಯಾಚರಣೆಯಾಗಿದ್ದು, ಈ ಹಿಂದೆ ಬಂಧನ ಮಾಡಿದ ಆರೋಪಿಗಳಿಂದ ಪಡೆದ ಮಾಹಿತಿ ಹಾಗೂ ಈ ಗಾಂಜಾ ಖರೀದಿಯಲ್ಲಿ ಯಾರ್ಯಾರು ಭಾಗಿಯಾಗುತ್ತಾರೆ ಅನ್ನೋ ಮಾಹಿತಿಯನ್ನ ಪಡೆದ ಪೊಲೀಸರು ಆ ವ್ಯಕ್ತಿಗಳ ಚಲನ ವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಚಿಕ್ಕಬಳ್ಳಾಪುರದ ಇಬ್ಬರು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಗಾಂಜಾವನ್ನ ದೊಡ್ಡ ಮಟ್ಟದಲ್ಲಿ ಡೀಲ್ ಮಾಡಿಕೊಂಡು ಅದನ್ನ ನಮ್ಮ ರಾಜ್ಯಕ್ಕೆ ಸಾಗಿಸುತ್ತಿದ್ದರು ಎಂಬ ಮಾಹಿತಿಯನ್ನ ಅರಿತ ಪೊಲೀಸರು ಆರೋಪಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ನಿನ್ನೆ ಕೂಡ ವಿಶಾಖಪಟ್ಣಣದಿಂದ ಗಾಂಜಾ ಲೋಡ್ ಆಗಿ ಬರುತ್ತಿದ್ದ ಮಾಹಿತಿಯನ್ನ ಖಚಿತ ಪಡಿಸಿಕೊಂಡು ಆರೋಪಿಗಳ ಸಮೇತ ಗಾಂಜಾವನ್ನ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಯಾರನ್ನೂ ಬಿಡುವುದಿಲ್ಲ; ಸುದ್ದಿಗೋಷ್ಠಿ ವೇಳೆ ಕಮಲ್ ಪಂತ್ ಹೇಳಿಕೆ
ಸಿಂದಗಿ ಅತ್ಯಾಚಾರ ಆರೋಪಿ ಪೊಲೀಸ್ ಠಾಣೆಯಲ್ಲಿ ನೇಣು ಪ್ರಕರಣ ಸಿಐಡಿ ತನಿಖೆಗೆ: ಗೃಹ ಸಚಿವ ಆರಗ ಜ್ಞಾನೇಂದ್ರ
Published On - 11:17 am, Tue, 31 August 21