ಬೆಳಗಾವಿ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಸುರೇಶ್ ಅಂಗಡಿ ಬಗ್ಗೆ ಡಿಕೆ ಶಿವಕುಮಾರ್ ಶವಸಂಸ್ಕಾರದ ರಾಜಕಾರಣ ಮಾಡುತ್ತಿದ್ದಾರೆ: ಈಶ್ವರಪ್ಪ
ಸುರೇಶ್ ಅಂಗಡಿ ಅಂತ್ಯಸಂಸ್ಕಾರ ಬಿಜೆಪಿ ಹೀನಾಯವಾಗಿ ನಡೆದುಕೊಂಡಿತ್ತು ಎನ್ನುವ ಡಿಕೆಶಿ ಅವರ ಮಾತು ನನಗೆ ತುಂಬಾ ನೋವಾಯಿತು. ಶವಸಂಸ್ಕಾರದ ಬಗ್ಗೆ ರಾಜಕಾರಣ ಮಾಡುತ್ತಾರೆ ಅಂತಾ ನೋವಾಗಿದೆ.
ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ (BJP) ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿದೆ. ಕೇಂದ್ರ, ರಾಜ್ಯ ಸರ್ಕಾರ ಮಾಡಿದ ಕೆಲಸಗಳ ಮೇಲೆ ಜನರು ಬೆಂಬಲ ನೀಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಹೇಳಿದರು. ಇದೇ ವೇಳೆ ಸುರೇಶ್ ಅಂಗಡಿ (Suresh Angadi) ಅವರ ಅಂತ್ಯಸಂಸ್ಕಾರ ಬಿಜೆಪಿ ಹೀನಾಯವಾಗಿ ಮಾಡಿತು ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಬಂದ ಸಂದರ್ಭದಲ್ಲಿ ಡಿಕೆಶಿ ಕಾಂಗ್ರೆಸ್ ಪಕ್ಷ ಏನೂ ಮಾಡುತ್ತದೆ ಎನ್ನುವುದನ್ನು ಹೇಳಿದರೆ ಚೆನ್ನಾಗಿತ್ತು ಅಂತ ಅಭಿಪ್ರಾಯಪಟ್ಟರು.
ಅದನ್ನ ಬಿಟ್ಟು ಸುರೇಶ್ ಅಂಗಡಿ ಅಂತ್ಯಸಂಸ್ಕಾರ ಬಿಜೆಪಿ ಹೀನಾಯವಾಗಿ ನಡೆದುಕೊಂಡಿತ್ತು ಎನ್ನುವ ಡಿಕೆಶಿ ಅವರ ಮಾತು ನನಗೆ ತುಂಬಾ ನೋವಾಯಿತು. ಶವಸಂಸ್ಕಾರದ ಬಗ್ಗೆ ರಾಜಕಾರಣ ಮಾಡುತ್ತಾರೆ ಅಂತಾ ನೋವಾಗಿದೆ. ಸುರೇಶ್ ಅಂಗಡಿ ಕುಟುಂಬದವರ ಜತೆಗೆ ನಾಯಕರು ಮಾತಾಡಿ ತೀರ್ಮಾನ ತೆಗೆದುಕೊಂಡರು. ಕಾಂಗ್ರೆಸ್ಗೆ ಶವಸಂಸ್ಕಾರದ ಬಗ್ಗೆ ಆಸಕ್ತಿ ಬಹಳ ಜಾಸ್ತಿ. ಸತ್ತು ಹೋಗಿರುವ ಕಾಂಗ್ರೆಸ್ ಶವಸಂಸ್ಕಾರದ ಬಗ್ಗೆ ಮಾತಾಡದೇ ಇನ್ನು ಯಾರು ಬಗ್ಗೆ ಮಾತಾಡುತ್ತಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಇತ್ತು, ಅಲ್ಲಿ ಸತ್ತು ಹೋಗಿದೆ, ರಾಜ್ಯದಲ್ಲಿ ಕಾಂಗ್ರೆಸ್ ಇತ್ತು, ಇಲ್ಲೂ ಸತ್ತು ಹೋಗಿದೆ. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಬರಲ್ಲ. ಇಲ್ಲೂ ಕಾಂಗ್ರೆಸ್ ಸತ್ತು ಹೋಗಿದೆ. ಸತ್ತು ಹೋಗಿರುವ ಕಾಂಗ್ರೆಸ್ ದಿ.ಸುರೇಶ್ ಅಂಗಡಿ ಶವಸಂಸ್ಕಾರದ ಬಗ್ಗೆ ಹೀನಾಯವಾಗಿ ಮಾತಾಡುವುದು ನೋವಾಗಿದೆ. ಕಾಂಗ್ರೆಸ್ನವರು ಬಗ್ಗೆ ಕ್ಷಮೆ ಕೇಳಬೇಕು ಅಂತ ಈಶ್ವರಪ್ಪ ಒತ್ತಾಯಿಸಿದರು.
ಡಿ.ಕೆ.ಶಿವಕುಮಾರ್ಗೆ ಸ್ಮಾರ್ಟ್ ಸಿಟಿ ಬಗ್ಗೆ ಕಲ್ಪನೆ ಇಲ್ಲ. ಸಾಮಾನ್ಯ ಜನರಿಗೆ ಎನೂ ಬೇಕು ಅಂತಾ ಚರ್ಚೆಯಾಗಿ ಕಾಮಗಾರಿ ಆಗುತ್ತದೆ. ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಮಾಮೂಲಿ. ತಿಹಾರ್ ಜೈಲಿನಲ್ಲಿ ಇದ್ದು ಬಂದವರು ಭ್ರಷ್ಟಾಚಾರ ಹೇಗೆ ಮಾಡಬೇಕು ಅಂತಾ ಅವರಿಗೆ ಗೊತ್ತು. ಕಾಂಗ್ರೆಸ್ ಸರ್ಕಾರ ಇದ್ದಾಗ ದೇಶದಲ್ಲಿ ಯಾರು ಸತ್ತೆ ಇಲ್ಲ, ಶವಸಂಸ್ಕಾರ ಮಾಡೇ ಇಲ್ಲ. ಬಿಜೆಪಿ ಸರ್ಕಾರದಲ್ಲಿ ಸಾವು ಖಚಿತ ಅಂತಾ ಡಿಕೆಶಿ ಟೀಕೆ ಮಾಡಿದ್ದಾರೆ. ಕಾಂಗ್ರೆಸ್ ಆಡಳಿತ ಮಾಡುವಾಗ ಜನರು ಚಿರಂಜೀವಿಗಳಾ? ಅಂತ ಪ್ರಶ್ನಿಸಿದ ಈಶ್ವರಪ್ಪ, ಕಾಂಗ್ರೆಸ್ನ ಇಂತಹ ಹೇಳಿಕೆಯಿಂದಲೇ ಜನರು ಸೋಲಿಸಿದ್ದಾರೆ ಎಂದು ಹೇಳಿದರು.
ಡಿಕೆಶಿ ಮಾತು ಯಾರು ಕೇಳಲ್ಲ. ಸೋಲುತ್ತೇವೆ ಎಂದು ಬೆಳಗಾವಿಗೆ ಯಾವ ನಾಯಕರು ಬರುತ್ತಿಲ್ಲ. ಚುನಾವಣೆ ಬಂದ ಸಂದರ್ಭದಲ್ಲಿ ನಾವೇ ಅಧಿಕಾರಕ್ಕೆ ಬರುತ್ತೀವಿ ಅಂತ ಕಾಂಗ್ರೆಸ್ನವರು ಹೇಳುತ್ತಾರೆ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ತಮ್ಮ ಕ್ಷೇತ್ರದಲ್ಲಿ ಸೋತರು. ಕಾಂಗ್ರೆಸ್ನವರು ಚುನಾವಣೆ ಗೆಲ್ಲುತ್ತೀವಿ ಅಂತಾರೆ. ಆದರೆ ಬಿಜೆಪಿಯವರು ಅಲ್ಲಿ ಗೆದ್ದಿರುತ್ತಾರೆ. ಮೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಹುಮತದಿಂದ ಬಿಜೆಪಿ ಗೆಲ್ಲುತ್ತದೆ ಅಂತ ಸಚಿವರು ಅಭಿಪ್ರಾಯಪಟ್ಟರು.
ಇದನ್ನೂ ಓದಿ
ಹೊಸೂರು ಶಾಸಕ ಪ್ರಕಾಶ್ ಪತ್ನಿ ಇತ್ತೀಚೆಗೆ ಮೃತಪಟ್ಟಿದ್ರು; ಅತ್ತೆ ಮಗಳನ್ನ ವಿವಾಹವಾಗಬೇಕಿದ್ದ ಮಗ-ಭಾವೀ ಪತ್ನಿ ಸಹ ಸಾವು
ಜೆಡಿಎಸ್ ಮುಳುಗುತ್ತಿದೆ, ಬಿಜೆಪಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳಲ್ಲ: ಮೈಸೂರಿನಲ್ಲಿ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್
(KS Eshwarappa react to DK Shivakumar statement of Suresh Angadi funeral)
Published On - 10:50 am, Tue, 31 August 21