ಬೆಂಗಳೂರು: ಪ್ರೀ ಮೆಟ್ರಿಕ್ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್(Pre Matric Students Scholarship) ನಿಲ್ಲಿಸಲಾಗಿದೆ. ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡದಿದ್ರೆ ಎಲ್ಲಿ ಹೋಗಬೇಕು. ಕೂಡಲೇ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡಬೇಕು ಎಂದು ಬೆಂಗಳೂರಿನಲ್ಲಿ ನಡೆದ ಡಾಕ್ಟರ್ ಬಾಬ ಸಾಹೇಬ್ ಅವರ ಪರಿ ನಿರ್ವಾಣ ದಿನ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah ) ಆಕ್ರೋಶ ಹೊರ ಹಾಕಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ಪುಣ್ಯಸ್ಮರಣೆ ಹಿನ್ನಲೆ ವಿಧಾನ ಸೌಧದ ಪೂರ್ವ ದಿಕ್ಕಿನಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಡಾಕ್ಟರ್ ಬಾಬ ಸಾಹೇಬ್ ಅವರ ಪರಿ ನಿರ್ವಾಣ ದಿನ ಇಂದು. ಇಡೀ ದೇಶ ಈ ದಿನವನ್ನು ಬಹಳ ಗೌರವದಿಂದ ಆಚರಿಸುತ್ತಾರೆ. ಇಂದು ನಾನು ಅವರಿಗೆ ಪುಷ್ಪ ನಮನ ಸಲ್ಲಿಸಿದ್ದೀನಿ ಎಂದು ಸಿದ್ದರಾಮಯ್ಯ ಮಾತು ಶುರು ಮಾಡಿದರು. ದೇಶ ಕಂಡಂತಹ ಅಪ್ರತಿಮ ಮೇಧಾವಿ. ಅವರ ತಂದೆ ಸುಬೇದಾರ್ ಆಗಿದ್ದವರು.
ಇದನ್ನೂ ಓದಿ: ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವ ಬಗ್ಗೆ ರಮೇಶ್ ಕುಮಾರ ಮತ್ತು ಮುನಿಯಪ್ಪ ಬಣಗಳ ನಡುವೆ ವಾಗ್ವಾದ
ಶೋಷಿತ ವರ್ಗಗಳ ಜನ ನಾನು ಅನುಭವಿಸಿದ್ದ ರೀತಿ ಯಾರು ಅನುಭವಿಸಬಾರದು ಅಂತಾ ಹೋರಾಡಿದರು. ಅವರು ಈ ದೇಶಕ್ಕೆ ಕೊಟ್ಟಂತಹ ಸಂವಿಧಾನ ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠ ಸಂವಿಧಾನ. ಅವರು ಅತ್ಯಂತ ಅವಶ್ಯಕ ಸಂವಿಧಾನವನ್ನು ರಚನೆ ಮಾಡಿದ್ರು. ಬಾಬ ಸಾಹೇಬ್ ಅಂಬೇಡ್ಕರ್ ಇಲ್ಲದೇ ಇದಿದ್ರೆ ಇಂತಹ ಸಂವಿಧಾನ ರಚನೆ ಆಗುತ್ತಿರಲಿಲ್ಲ. ನರೇಂದ್ರ ಮೋದಿ ಸರಕಾರ ಪ್ರೀ ಮೆಟ್ರಿಕ್ ಸ್ಕಾಲರ್ ಶಿಪ್ ಅನ್ನು ನಿಲ್ಲಿಸಿದ್ದಾರೆ. ಒಂದು ಕಡೆ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡೋದು. ಇನ್ನೊಂದು ಕಡೆ ದಲಿತರಿಗೆ ವಂಚನೆ ಮಾಡೋದು. ನಾನು ಒತ್ತಾಯ ಮಾಡುತ್ತೇನೆ ಕೂಡಲೇ ಪ್ರೀ ಮೆಟ್ರಿಕ್ ವಿಧ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಕೊಡ್ಬೇಕು. ಸ್ಕಾಲರ್ ಶಿಪ್ ಕೊಡಲಿಲ್ಲ ಅಂದ್ರೇ ಎಲ್ಲಿ ಹೋಗ್ತಾರೆ ವಿದ್ಯಾರ್ಥಿಗಳು. ಬೆಂಗಳೂರು ವಿವಿ ಹೊರಡಿಸಿರುವ ಸುತ್ತೋಲೆ ವಾಪಸ್ ಪಡೆಯಲಿ. ಅಂಬೇಡ್ಕರ್ ಸಂವಿಧಾನ ನೀಡದಿದ್ರೆ ನಾನು ಸಿಎಂ ಆಗ್ತಿರಲಿಲ್ಲ. ನರೇಂದ್ರ ಮೋದಿ ಇಂದು ಪ್ರಧಾನಮಂತ್ರಿ ಆಗುತ್ತಿರಲಿಲ್ಲ. ಹಾಗಾಗಿ ನಾವೆಲ್ಲ ಸಂವಿಧಾನ ರಕ್ಷಣೆಗೆ ಬದ್ಧರಾಗಿರಬೇಕು ಎಂದರು.
ಗಡಿ ವಿವಾದದಲ್ಲಿ ಮಹಾಜನ್ ವರದಿ ಅಂತಿಮ
ಇನ್ನು ಇದೇ ವೇಳೆ ಬೆಳಗಾವಿ ಗಡಿ ವಿವಾದ ಸಂಬಂಧ ಮಾತನಾಡಿದ ಸಿದ್ದರಾಮಯ್ಯ, ಗಡಿ ಭಾಗದ ವಿವಾದ ಜೀವಂತವಾಗಿಡಲು ಹೀಗೆ ಮಾಡ್ತಿದ್ದಾರೆ. ಗಡಿ ವಿವಾದದಲ್ಲಿ ಮಹಾಜನ್ ವರದಿ ಅಂತಿಮ. ಈಗಾಗಲೇ ಮಹಾಜನ್ ವರದಿ ಬಂದಿದೆ, ಅದೇ ಅಂತಿಮ. ಮಹಾರಾಷ್ಟ್ರದವರು ಮಹಾಜನ್ ವರದಿ ಒಪ್ಪಲ್ಲ ಅಂದರೆ ಹೇಗೆ? ವರದಿಯನ್ನು ಒಪ್ಪಿಲ್ಲದಿದ್ರೆ ಅದು ಮಹಾರಾಷ್ಟ್ರದವರ ಪುಂಡಾಟಿಕೆ. ಉತ್ತಮ ಲಾಯರ್ಗಳನ್ನು ಇಟ್ಟು ನಾವು ವಾದ ಮಾಡಬೇಕು. ಮುಖ್ಯಮಂತ್ರಿ ಬೊಮ್ಮಾಯಿ ಸರ್ವಪಕ್ಷ ಸಭೆ ಇನ್ನೂ ಕರೆದಿಲ್ಲ ಎಂದರು.
ಇದನ್ನೂ ಓದಿ: ಪ್ರಧಾನಿ ಕಚೇರಿ ಸೂಚನೆಗೂ ಡೋಂಟ್ ಕೇರ್: ದಾಬಸಪೇಟೆಯಿಂದ ದೇವನಹಳ್ಳಿ ಹೆದ್ದಾರಿ ನಿರ್ಮಾಣ ಅಪಘಾತಗಳ ತಾಣವಾಗುತ್ತಿದೆ!
ಒಂದು ರಾಜ್ಯದ ಚುನಾವಣೆ ಇನ್ನೊಂದು ರಾಜ್ಯಕ್ಕೆ ಸಂಬಂಧವಿಲ್ಲ
ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ಮುನ್ನಡೆ ವಿಚಾರಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಹಿ.ಪ್ರದೇಶದಲ್ಲಿ ಕಾಂಗ್ರೆಸ್ ಮುಂದಿದೆ ಎಂಬ ಮಾಹಿತಿ ಇದೆ. ಹಿಮಾಚಲ ಪ್ರದೇಶದಲ್ಲಿ ತುರುಸಿನ ಪೈಪೋಟಿ ಇದೆ. ಗುಜರಾತ್ನಲ್ಲಿ ಬಿಜೆಪಿ ಮುಂದಿದೆ ಎಂದು ಹೇಳಲಾಗುತ್ತಿದೆ. ಜನರು ಕೊಟ್ಟ ತೀರ್ಪು ನಾವು ತಲೆಬಾಗಿ ಒಪ್ಪಿಕೊಳ್ಳಬೇಕು. ಒಂದು ರಾಜ್ಯದ ಚುನಾವಣೆ ಇನ್ನೊಂದು ರಾಜ್ಯಕ್ಕೆ ಸಂಬಂಧವಿಲ್ಲ. ಅಲ್ಲಿನ ಸಮಸ್ಯೆ, ರಾಜಕೀಯ, ಆಡಳಿತ, ಜನರ ಭಾವನೆ ಬೇರೆ. ಆಪ್ ಕಾಂಗ್ರೆಸ್ ಮತಗಳನ್ನು ಪಡೆಯುತ್ತಿದೆ ಎಂಬುದು ನಿಜ. ಆಮ್ ಆದ್ಮಿ ಪಕ್ಷ ಕಾಂಗ್ರೆಸ್ನ ವೋಟ್ಗಳನ್ನು ಕಬಳಿಸಿದೆ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:50 pm, Tue, 6 December 22