ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವ ಬಗ್ಗೆ ರಮೇಶ್ ಕುಮಾರ ಮತ್ತು ಮುನಿಯಪ್ಪ ಬಣಗಳ ನಡುವೆ ವಾಗ್ವಾದ
ಕೊನೆಗೆ ಮುನಿಯಪ್ಪನವರೇ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರ ಸಲುವಾಗಿ ಶ್ರಮಿಸಿ ಗೆಲ್ಲಿಸೋಣ ಅಂತ ಹೇಳಿದರು.
ಕೋಲಾರ: ಸಿದ್ದರಾಮಯ್ಯನವರೇನೋ (Siddaramaiah) ಕೋಲಾರದ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮನ್ನು ಜಿಲ್ಲೆಯ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಕಳೆದ ತಿಂಗಳು ದೊಡ್ಡದಾಗಿ ಹೇಳಿದರು. ಆದರೆ, ಪರಿಸ್ಥಿತಿ ಹೇಗಿದೆ ಅಂತ ನೀವೇ ನೋಡಿ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಂಸದ ಕೆ ಎಚ್ ಮುನಿಯಪ್ಪ (KH Muniyappa) ಅವರು ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯೊಂದರಲ್ಲಿ ಅವರ ಮತ್ತು ಮತ್ತೊಬ್ಬ ಹಿರಿಯ ನಾಯಕ ರಮೇಶ ಕುಮಾರ್ (Ramesh Kumar) ಅವರ ಬೆಂಬಲಿಗರ ಬಣಗಳ ನಡುವೆ ಸಿದ್ದರಾಮಯ್ಯ ಬೇಕು-ಬೇಡ ಅಂತ ಗಲಾಟೆ ನಡೆದಿದೆ. ಕೊನೆಗೆ ಮುನಿಯಪ್ಪನವರೇ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರ ಸಲುವಾಗಿ ಶ್ರಮಿಸಿ ಗೆಲ್ಲಿಸೋಣ ಅಂತ ಹೇಳಿದರು.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos