Mobile Eye Health Van: ಬೆಂಗಳೂರಿನಲ್ಲಿ ಸಂಚರಿಸಲಿದೆ ಸಂಚಾರಿ ನೇತ್ರ ಚಿಕಿತ್ಸಾ ವಾಹನ

|

Updated on: Aug 07, 2024 | 10:51 AM

ಬೆಂಗಳೂರಿನಲ್ಲಿ ಮೂಲಸೌಕರ್ಯವಿಲ್ಲದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸುಮಾರು 7,000 ಜನರಿಗೆ ಕಣ್ಣಿನ ಆರೈಕೆ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಸಂಚಾರಿ ನೇತ್ರ ಚಿಕಿತ್ಸಾ ವಾಹನವನ್ನು ಪರಿಚಯಿಸಲಾಗಿದೆ. ಆಲ್ಕಾನ್‌ ಇಂಡಿಯಾದ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಯೋಜನೆಯ ಭಾಗವಾಗಿ ಈ ವಾಹನವನ್ನು ದೇಣಿಗೆಯಾಗಿ ನೀಡಲಾಗಿದೆ.

Mobile Eye Health Van: ಬೆಂಗಳೂರಿನಲ್ಲಿ ಸಂಚರಿಸಲಿದೆ ಸಂಚಾರಿ ನೇತ್ರ ಚಿಕಿತ್ಸಾ ವಾಹನ
ಬೆಂಗಳೂರಿನಲ್ಲಿ ಸಂಚರಿಸಲಿದೆ ಸಂಚಾರಿ ನೇತ್ರ ಚಿಕಿತ್ಸಾ ವಾಹನ
Follow us on

ಬೆಂಗಳೂರು, ಆಗಸ್ಟ್.07: ಸೈಟ್ ಸೇವರ್ಸ್ ಇಂಡಿಯಾ ಮತ್ತು ಅಲ್ಕಾನ್ ಇಂಡಿಯಾ ಎಂಬ ಎರಡು ಸಂಸ್ಥೆಗಳು ಬೆಂಗಳೂರಿನಲ್ಲಿ ಮೂಲಸೌಕರ್ಯವಿಲ್ಲದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸುಮಾರು 7,000 ಜನರಿಗೆ ಕಣ್ಣಿನ ಆರೈಕೆ ಸೇವೆಗಳನ್ನು ಒದಗಿಸಲು ಸಂಚಾರಿ ನೇತ್ರ ಚಿಕಿತ್ಸಾ ವ್ಯಾನ್ ಅನ್ನು (Mobile Eye Health Van) ಪರಿಚಯಿಸಿವೆ. ಈ ವ್ಯಾನ್ ಅನ್ನು ಅಲ್ಕಾನ್ ಇಂಡಿಯಾ ಸಂಸ್ಥೆ ಕೊಡುಗೆಯಾಗಿ ನೀಡಿದ್ದು ಕಣ್ಣಿನ ಆರೈಕೆಗಾಗಿ ಈ ಸಂಸ್ಥೆಗಳು ದುಡಿಯುತ್ತಿವೆ.

ಜಯನಗರದ ಬೆಂಗಳೂರು ಮಧುಮೇಹ ಮತ್ತು ಕಣ್ಣಿನ ಆಸ್ಪತ್ರೆಯಲ್ಲಿ ಸೋಮವಾರ ಈ ವಾಹನ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಆಲ್ಕಾನ್‌ ಇಂಡಿಯಾದ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಯೋಜನೆಯ ಭಾಗವಾಗಿ ಈ ವಾಹನವನ್ನು ದೇಣಿಗೆಯಾಗಿ ನೀಡಲಾಗಿದೆ.

ಈ ವಾಹನದಲ್ಲಿ ಅತ್ಯಾಧುನಿಕ ಕಣ್ಣಿನ ಸಮಗ್ರ ಪರೀಕ್ಷೆ ನಡೆಸಬಹುದಾಗಿದೆ. ದೃಷ್ಟಿ ದೋಷಗಳನ್ನು ಪತ್ತೆ ಮಾಡುವುದರ ಜೊತೆಗೆ ಸಾಮಾನ್ಯ ಕಣ್ಣಿನ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ಸಮಸ್ಯೆಗಳಿದ್ದಲ್ಲಿ ಚಿಕಿತ್ಸೆಗೆ ರೋಗಿಗಳನ್ನು ಶ್ರದ್ಧಾ ಐ ಕ್ಲಿನಿಕ್ ಟ್ರಸ್ಟ್‌ಗೆ ಶಿಫಾರಸು ಮಾಡಲಾಗುತ್ತದೆ. ಅಲ್ಲಿ ರೋಗಿಯ ಸಾಮಾಜಿಕ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಉಚಿತ ಚಿಕಿತ್ಸೆ ಅಥವಾ ಸಹಾಯಧನ ನೀಡಲಾಗುತ್ತದೆ.

ಇದನ್ನೂ ಓದಿ: ಕಾರವಾರ: ಕಾಳಿ ನದಿಗೆ ಬಿದ್ದ ಕೋಡಿಭಾಗ್ ಸೇತುವೆ, ಶೋಧಕಾರ್ಯ ಮುಂದುವರಿಕೆ

ಈ ವೇಳೆ ಮಾತನಾಡಿದ ಆಲ್ಕಾನ್ ಇಂಡಿಯಾದ ಮುಖ್ಯಸ್ಥ ಅಮರ್ ವ್ಯಾಸ್, ಮೊಬೈಲ್ ಐ ಹೆಲ್ತ್ ವ್ಯಾನ್ ಅನ್ನು ಅನಾವರಣಗೊಳಿಸಲು ನಾವು ಹೆಮ್ಮೆಪಡುತ್ತೇವೆ, ಇದು ಬೆಂಗಳೂರಿನ ಎಲ್ಲಾ ಮೂಲೆಗಳಿಗೆ, ವಿಶೇಷವಾಗಿ ಚಿಕಿತ್ಸಾ ಸೌಲಭ್ಯಗಳಿಂದ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಉತ್ತಮ ಗುಣಮಟ್ಟದ ನೇತ್ರ ಆರೈಕೆಯನ್ನು ನೀಡುವಲ್ಲಿ ಸಹಾಯಕವಾಗಲಿದೆ. ಜನರಿಗೆ ಉತ್ತಮ ಗುಣಮಟ್ಟದ ಸೇವೆ ನೀಡುವುದೇ ನಮ್ಮ ಧ್ಯೇಯವಾಗಿದೆ ಎಂದರು.

ಇನ್ನು ಮತ್ತೊಂದೆಡೆ ಸೈಟ್‌ಸೇವರ್ಸ್ ಇಂಡಿಯಾದ ಸಿಇಒ ಆರ್‌ಎನ್ ಮೊಹಾಂತಿ ಮಾತನಾಡಿದ್ದು, ನಮ್ಮ ಅರ್ಬನ್ ಐ ಹೆಲ್ತ್ ಪ್ರೋಗ್ರಾಂ ಬೆಂಗಳೂರಿನಲ್ಲಿ ಮೊಬೈಲ್ ಐ ಹೆಲ್ತ್ ವ್ಯಾನ್ ಅನ್ನು ಪ್ರಾರಂಭಿಸಲು ಹೆಮ್ಮೆ ಇದೆ. ತಪ್ಪಿಸಬಹುದಾದ ಅಂಧತ್ವವನ್ನು ತೊಡೆದುಹಾಕುವುದು ಮತ್ತು ಎಲ್ಲರಿಗೂ ಗುಣಮಟ್ಟದ ಕಣ್ಣಿನ ಆರೈಕೆ ನೀಡುವುದೇ ನಮ್ಮ ಧ್ಯೇಯವಾಗಿದೆ ಎಂದು ತಿಳಿಸಿದ್ದಾರೆ.

ಈ ವಾಹನ ಎಚ್‌ಎಸ್‌ಆರ್ ಲೇಔಟ್, ಮಡಿವಾಳ, ಕೋರಮಂಗಲ, ಕುಮಾರಸ್ವಾಮಿ ಲೇಔಟ್ ಮತ್ತು ಜಯನಗರ, ಅಬ್ಬಿಗೆರೆ, ಅಮೃತಹಳ್ಳಿ, ದಾಸರಹಳ್ಳಿ, ಯಲಹಂಕ, ಹೆಬ್ಬಾಳ, ಆವಲಹಳ್ಳಿ, ದೊಮ್ಮಸಂದ್ರ, ಬಿದರಹಳ್ಳಿ, ಬಸವೇಶ್ವರನಗರ, ಚಂದ್ರಾ ಲೇಔಟ್, ಕೆಂಗೇರಿ, ಮಹಾಲಕ್ಷ್ಮಿ ಲೇಔಟ್, ಮತ್ತಿಕೆರೆ ಪ್ರದೇಶದಲ್ಲಿ ಸಂಚರಿಸಿ ಸೇವೆ ನೀಡಲಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ