ಸಿಗ್ನಲಿಂಗ್ ವ್ಯವಸ್ಥೆ ಪರೀಕ್ಷೆ: ಆ 17, 20, 23, 24 ಮತ್ತು 29ರಂದು ನೇರಳೆ ಮಾರ್ಗದ ಮೆಟ್ರೋ ಸಂಚಾರ ಸಮಯದಲ್ಲಿ ಬದಲಾವಣೆ

| Updated By: Ganapathi Sharma

Updated on: Aug 14, 2023 | 10:24 PM

Namma Metro Purple Line Timings Change: ಸಿಗ್ನಲಿಂಗ್ ವ್ಯವಸ್ಥೆಗಳ ಪರೀಕ್ಷೆಯನ್ನು ನಡೆಸುವ ಸಲುವಾಗಿ ಆಗಸ್ಟ್​ 17, 20, 23, 24 ಮತ್ತು 29ರಂದು ನೇರಳೆ ಮಾರ್ಗದ ಮೆಟ್ರೋ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಸಿಗ್ನಲಿಂಗ್ ವ್ಯವಸ್ಥೆ ಪರೀಕ್ಷೆ: ಆ 17, 20, 23, 24 ಮತ್ತು 29ರಂದು ನೇರಳೆ ಮಾರ್ಗದ ಮೆಟ್ರೋ ಸಂಚಾರ ಸಮಯದಲ್ಲಿ ಬದಲಾವಣೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಆಗಸ್ಟ್​ 14: ಸಿಗ್ನಲಿಂಗ್ ವ್ಯವಸ್ಥೆಗಳ ಪರೀಕ್ಷೆಯನ್ನು ನಡೆಸುವ ಸಲುವಾಗಿ ಆಗಸ್ಟ್​ 17, 20, 23, 24 ಮತ್ತು 29ರಂದು ನೇರಳೆ ಮಾರ್ಗದ ಮೆಟ್ರೋ (Namma Metro) ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಆಗಸ್ಟ್ ತಿಂಗಳಲ್ಲಿ ಮೆಟ್ರೋ ರೈಲು ಕಾರ್ಯಾಚರಣೆಯ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು, ನೇರಳೆ ಮಾರ್ಗದ ಕೆಂಗೇರಿ, ಚಲ್ಲಘಟ್ಟ ಹಾಗೂ ಬೈಯಪ್ಪನಹಳ್ಳಿ ಮತ್ತು ಕೃಷ್ಣರಾಜಪುರ ಮೆಟ್ರೋ ನಿಲ್ದಾಣಗಳ ನಡುವೆ ಸಿಗ್ನಲಿಂಗ್ ವ್ಯವಸ್ಥೆಗಳ ಪರೀಕ್ಷೆಯನ್ನು ನಡೆಸುವ ಸಲುವಾಗಿ ಮೆಟ್ರೋ ವಾಣಿಜ್ಯ ಸೇವೆಯ ಸಮಯದಲ್ಲಿ ಮಾರ್ಪಾಡು ಮಾಡಿದೆ.

ನೇರಳೆ ಮಾರ್ಗದ ಕಾರ್ಯಾಚರಣೆಯ ಸಮಯದಲ್ಲಿ ವ್ಯತ್ಯಯದ ವಿವರ

  • ಆಗಸ್ಟ್​ 17, (ಗುರುವಾರ): ಕೆಂಗೇರಿ ಮತ್ತು ಮೈಸೂರು ರಸ್ತೆಯ ಮೆಟ್ರೋ ನಿಲ್ದಾಣಗಳ ನಡುವೆ ಸದರಿ ದಿನದಂದು ಯಾವುದೇ ರೈಲು ಸೇವೆ ಲಭ್ಯವಿರುವುದಿಲ್ಲ. ಮೈಸೂರು ರಸ್ತೆ ಮತ್ತು ಬೈಯಪ್ಪನಹಳ್ಳಿ, ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ಬೆಳಿಗ್ಗೆ 5.00 ರಿಂದ ರಾತ್ರಿ 11 ರವರೆಗೆ ರೈಲು ಸೇವೆಗಳು ಲಭ್ಯವಿರುತ್ತದೆ
  • ಆಗಸ್ಟ್​ 23, 24 (ಬುಧವಾರ ಮತ್ತು ಗುರುವಾರ): ಕೆಂಗೇರಿ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಬೆಳಿಗ್ಗೆ, 7 ಗಂಟೆಯವರೆಗೆ ಯಾವುದೇ ರೈಲು ಸೇವೆ ಲಭ್ಯವಿರುವುದಿಲ್ಲ. ಈ ಅವಧಿಯಲ್ಲಿ ಮೈಸೂರು ರಸ್ತೆ ಮತ್ತು ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ರೈಲು ‌ಸೇವೆ ಲಭ್ಯವಿರುತ್ತದೆ. ಬೆಳಗ್ಗೆ 7.00 ಗಂಟೆಯ ನಂತರ ಕೆಂಗೇರಿಯಿಂದ ಬೈಯಪ್ಪನಹಳ್ಳಿ ನಿಲ್ದಾಣಗಳ ನಡುವೆ ಎಂದಿನಂತೆ ಸೇವೆ ಲಭ್ಯವಿರುತ್ತದೆ. ಬೆಳಿಗ್ಗೆ 5 ಗಂಟೆಯಿಂದ 7 ಗಂಟೆಯವರೆಗೆ ಮೈಸೂರು ರಸ್ತೆ ನಿಲ್ದಾಣದಲ್ಲಿ ರೈಲುಗಳ ಸೇವೆ ಕೊನೆಗೊಳ್ಳುತ್ತದೆ. ಇತರೆ ದಿನಗಳಲ್ಲಿ ರೈಲುಗಳು ಕೆಂಗೇರಿ ನಿಲ್ದಾಣದ ವರೆಗೆ ರೈಲು ಸೇವೆ ಲಭ್ಯವಿರುತ್ತದೆ. ಬೆಳಿಗ್ಗೆ 7 ಗಂಟೆಯ ನಂತರ ಬೈಯಪ್ಪನಹಳ್ಳಿಯಿಂದ ಕಂಗೇರಿ ನಿಲ್ದಾಣದ ಮಾರ್ಗಗಳ ನಡುವೆ ಎಂದಿನಂತೆ ಸೇವೆಗಳು ಲಭ್ಯವಿರುತ್ತದೆ.
  • ಆಗಸ್ಟ್​ 20, 29 (ಭಾನುವಾರ ದಿಂದ ಮಂಗಳವಾರ): ಬೈಯಪ್ಪನಹಳ್ಳಿ ಟರ್ಮಿನಲ್ ಮತ್ತು ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣ ಹಾಗೂ ಕೃಷ್ಣರಾಜಪುರ ಮತ್ತು ವೈಟ್‌ ಫೀಲ್ಡ್ (ಕಾಡುಗೋಡಿ) ಮಾರ್ಗಗಳ ನಡುವೆ ಬೆಳಿಗ್ಗೆ 7 ಗಂಟೆಯವರೆಗೆ ಯಾವುದೇ ರೈಲು ಸೇವೆ ಲಭ್ಯವಿರುವುದಿಲ್ಲ. ಈ ಅವಧಿಯಲ್ಲಿ ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣದಿಂದ ಮಾತ್ರ ರೈಲು ಸೇವೆ ಲಭ್ಯವಿರುತ್ತದೆ.

ಇದನ್ನೂ ಓದಿ: Video: ವಿಧಾನಸೌಧಕ್ಕೆ ವಿಶೇಷ ದೀಪಾಲಂಕಾರ: ಕೇಸರಿ, ಬಿಳಿ, ಹಸಿರು ಬಣ್ಣದಲ್ಲಿ ಅರಳಿದ ತ್ರಿವರ್ಣ ಧ್ವಜ

ಹಸಿರು ಮಾರ್ಗದ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ನಮ್ಮ ಮೆಟ್ರೋ ಪ್ರಯಾಣಿಕರು ಸದರಿ ಬದಲಾವಣೆಯನ್ನು ಗಮನಿಸಿ ಹಾಗೂ ಸಹಕರಿಸುವಂತೆ ಕೋರಲಾಗಿದ್ದು, ಪ್ರಯಾಣಿಕರಿಗೆ ಇದರಿಂದಾಗುವ ಅನಾನುಕೂಲತೆಗಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ವಿಷಾದಿಸಿದೆ.

ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್: ಲಾಲ್​ಬಾಗ್​​ ಮೆಟ್ರೋ ನಿಲ್ದಾಣದಿಂದ ಎಲ್ಲಿಗೆ ಹೋದ್ರೂ 30 ರೂ. ಚಾರ್ಜ್

ನಾಳೆ ಫ್ಲವರ್ ಶೋ ನೋಡಲು ತೆರಳುವವರಿಗೆ ಮೆಟ್ರೋದಿಂದ ಗುಡ್​ನ್ಯೂಸ್ ನೀಡಿದ್ದು, ಲಾಲ್​ಬಾಗ್​​ ಮೆಟ್ರೋ ನಿಲ್ದಾಣದಿಂದ ಎಲ್ಲಿಗೆ ಹೋದರೂ 30 ರೂ. ಚಾರ್ಜ್ ಮಾಡಲಾಗುತ್ತಿದೆ. ನಾಳೆ ಫ್ಲವರ್ ಶೋ ವೀಕ್ಷಿಸಲು ಬರುವವರಿಗೆ ಪೇಪರ್ ಟಿಕೆಟ್ ವಿತರಣೆ ಮಾಡಲಾಗುತ್ತಿದ್ದು, ಎಲ್ಲಿಗೆ ಪ್ರಯಾಣಿಸಿದರೂ 30 ರೂ. ಅನ್ನು ಬಿಎಂಆರ್​ಸಿಎಲ್​ ನಿಗದಿ ಮಾಡಿದೆ. ಬೆಳಗ್ಗೆ 8ರಿಂದ ಸಂಜೆ 6ರವರೆಗೆ ಪೇಪರ್​ ಟಿಕೆಟ್​​ ಖರೀದಿಸಲು ಅವಕಾಶವಿದ್ದು, ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಪೇಪರ್​ ಟಿಕೆಟ್​ ನೀಡಲಾಗುತ್ತಿದೆ. ಬೆಳಗ್ಗೆ 10 ಗಂಟೆಯಿಂದ ರಾತ್ರಿ 8ರವರೆಗೆ ಮಾತ್ರ ಪ್ರಯಾಣಿಸಲು ಅವಕಾಶವಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:16 pm, Mon, 14 August 23