ಬೆಂಗಳೂರು: ಮಹಾಮಾರಿ ಕೊರೊನಾ(Coronavirus) ಬಳಿಕ ಜನರ ಜೀವನದಲ್ಲಿ ಅನೇಕ ಬದಲಾವಣೆಗಳಾಗಿವೆ. ಆನ್ ಲೈನ್ ಕ್ಲಾಸ್(Online Class) ನೆಪದಲ್ಲಿ ಮಕ್ಕಳು ಫೋನ್ಗಳಿಗೆ ಅಡಿಕ್ಟ್ ಆಗುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ಅನೇಕ ರೀತಿಯ ದುಷ್ಪರಿಣಾಮಗಳು ಕಂಡು ಬರುತ್ತಿವೆ. ಕಳೆದ 7 ತಿಂಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಮಕ್ಕಳು ಕೆಸಿ ಜನರಲ್ ಆಸ್ಪತ್ರೆಯಲ್ಲಿ ಫೋನ್ ಅಡಿಕ್ಟ್ ಸಂಬಂಧ ಕೌನ್ಸಿಲಿಂಗ್ ಪಡೆದಿದ್ದಾರೆ. ಆದ್ರೆ ಮತ್ತೊಂದು ಅಚ್ಚರಿ ಎಂದರೆ ಇತ್ತೀಚೆಗೆ ಮಕ್ಕಳಲ್ಲಿ ಮೆಂಟಲ್ ಟೆನ್ಷನ್ ಹೆಚ್ಚಾಗಿದೆ ಎಂಬ ಬಗ್ಗೆ ಚೈಲ್ಡ್ ರೈಟ್ಸ್ ಸಂಸ್ಥೆಯಿಂದ ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ.
ಚೈಲ್ಡ್ ರೈಟ್ಸ್ ಸಂಸ್ಥೆಯು ಮಕ್ಕಳ ಕುರಿತಾಗಿ ಅಚ್ಚರಿಯ ಅಂಶಗಳ ಬಗ್ಗೆ ವರದಿ ಬಿಡುಗಡೆ ಮಾಡಿದೆ. ಕೊರೊನಾ ಬಳಿಕ ಶಾಲಾ ಮಕ್ಕಳಲ್ಲಿ ರೀಲ್ಸ್ ಹುಚ್ಚು ಹೆಚ್ಚಾಗಿದ್ದು ಮಕ್ಕಳ ರೀಲ್ಸ್ ಕ್ರೇಜ್ ಅಪಾಯದ ಹಂತಕ್ಕೆ ತಂದು ನಿಲ್ಲಿಸಿದೆ. ರೀಲ್ಸ್ ಮಾಡಲು ಪೋಷಕರು ಬಿಡದಿದ್ರೆ ಮನೆ ಬಿಟ್ಟು ಹೋಗುವುದಾಗಿ ಮಕ್ಕಳು ಬೆದರಿಕೆ ಹಾಕುತ್ತಿದ್ದಾರಂತೆ. ಮಕ್ಕಳು ಮನೆ ಬಿಟ್ಟು ಹೋಗುವ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. ಕೊರೊನಾ ಬಳಿಕ ಮಕ್ಕಳು ಮನೆ ಬಿಟ್ಟು ಹೋಗುವ ಪ್ರಕರಣಗಳು ಹೆಚ್ಚಾಗಿ ವರದಿಯಾಗ್ತೀವೆ.
ಇದನ್ನೂ ಓದಿ: ಕೊರೋನಾ ಬಿಟ್ರೂ ಮೊಬೈಲ್ ಬಿಡ್ತಿಲ್ಲ, ಮೊಬೈಲ್ ದಾಸರಾಗಿರೋ ಮಕ್ಕಳು
ಕೊರೊನಾ ಸಮಯದಲ್ಲಿ ಎರಡು ವರ್ಷಗಳ ಕಾಲ ಮಕ್ಕಳು ಮೊಬೈಲ್ ಮೂಲಕವೇ ಪಾಠ ಆಲಿಸುತ್ತಿದ್ದರು. ಇದರಿಂದಾಗಿ ಮಕ್ಕಳು ಮೊಬೈಲ್ಗೆ ಅಡಿಕ್ಟ್ ಆಗಿದ್ದಾರೆ. ವಿದ್ಯಾರ್ಥಿಗಳು ಸ್ನೇಹಿತರ ಜೊತೆ ವಾಟ್ಸ್ ಆಪ್ ಗ್ರೂಪ್ ಚಾಟಿಂಗ್ ಗೀಳು ಬೆಳಸಿಕೊಂಡಿದ್ದಾರೆ. ಆ ಟೈಮ್ನಲ್ಲಿಯೇ ಹೆಚ್ಚು ವಿದ್ಯಾರ್ಥಿಗಳು ರೀಲ್ಸ್ ಗೆ ಅಡಿಕ್ಟ್ ಆಗಿದ್ದಾರೆ. ಆದ್ರೆ ಪೋಷಕರು ಆಫ್ ಲೈನ್ ಕ್ಲಾಸ್ ಬಳಿಕ ಮೊಬೈಲ್ ಕೊಡೊದು ಕಡಿಮೆ ಮಾಡಿರುವ ಹಿನ್ನಲೆ ಮೊಬೈಲ್ ಕೊಡದೇ ಇದ್ರೆ ರೀಲ್ಸ್ ಮಾಡೋದಕ್ಕೆ ಬಿಡ್ದೆ ಇದ್ರೆ ವಿಚಿತ್ರ ವರ್ತನೆ ಮಾಡ್ತೀದ್ದಾರೆ. ಮನೆ ಬಿಟ್ಟು ಹೋಗುವುದು, ಪೋಷಕರ ಜೊತೆ ಜಗಳ ಮಾಡುವುದು, ಶಾಲೆಗೆ ಹೋಗಲು ಹಠ ಮಾಡುವುದು, ಕೊನೆಗೆ ಆತ್ಮಹತ್ಯೆ ಪ್ರಯತ್ನಕ್ಕೂ ಮುಂದಾಗಿರುವ ಬಗ್ಗೆ ಪೋಷಕರು ಚೈಲ್ಡ್ ರೈಟ್ಸ್ ಸಂಸ್ಥೆಗೆ ದೂರು ನೀಡುತ್ತಿದ್ದಾರಂತೆ. ಮೊಬೈಲ್ ನೀಡದೆ ಇದ್ರೆ ಊಟ ಬೀಡುವುದು, ಜಗಳ, ಅಳುವುದು ಪೋಷಕರಿಗೆ ನಿತ್ಯ ಕಿರಿಕಿರಿ ಆಗುತ್ತಿದೆ ಎಂದು ಪೋಷಕರು ಚೈಲ್ಡ್ ರೈಟ್ಸ್ ಸಂಸ್ಥೆ ಬಳಿ ಅಳಲು ತೋಡಿಕೊಂಡಿದ್ದಾರೆ.
Published On - 9:33 am, Sat, 5 November 22