ಬೆಂಗಳೂರು: ಕೆಎಸ್ಆರ್ಟಿಸಿ ಬಸ್ಗೆ ಬೈಕ್ ಸವಾರ ಬಲಿ, ಸ್ಥಳದಲ್ಲಿ ಮದ್ಯದ ಬಾಟಲಿಗಳು ಪತ್ತೆ
ಸ್ಥಳ ಪರಿಶೀಲನೆ ವೇಳೆ ಮದ್ಯದ ಬಾಟಲ್ಗಳು ಪತ್ತೆಯಾಗಿವೆ. ಈ ಹಿನ್ನೆಲೆ ಕುಡಿದ ಅಮಲಿನಲ್ಲಿ ಬೈಕ್ ಸವಾರ ಬೈಕ್ ಚಲಾಯಿಸುತ್ತಿದ್ದ ಎನ್ನಲಾಗಿದೆ. ಬೈಕ್ ಸವಾರ ರಮೇಶ್ ತಲೆಗೆ ಗಾಯಗಳಾಗಿ ರಕ್ತ ಸ್ರಾವವಾಗಿದೆ. ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಆದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಮೇಶ್ ಮೃತಪಟ್ಟಿದ್ದಾರೆ.
ಬೆಂಗಳೂರು: ರಾಜಾಜಿನಗರ ಠಾಣಾ ವ್ಯಾಪ್ತಿಯಲ್ಲಿ ಕೆಎಸ್ಆರ್ಟಿಸಿ ಬಸ್ಗೆ(KSRTC Bus Accident) ಬೈಕ್ ಸವಾರ ಬಲಿಯಾದ ಘಟನೆ ನಡೆದಿದೆ. ತಡರಾತ್ರಿ 12.30ರಲ್ಲಿ ರಾಜ್ಕುಮಾರ್ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು ಬೈಕ್ ಸವಾರ ರಮೇಶ್(39) ಮೃತಪಟ್ಟಿದ್ದಾರೆ. ಮೃತ ರಮೇಶ್ ಸ್ನೇಹಿತರು ಚಾಲಕ ಹಾಗೂ ಕಂಡಕ್ಟರ್ಗೆ ಹಿಗ್ಗಾ ಮುಗ್ಗ ಥಳಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ಬರುತ್ತಿದ್ದ KSRTC ಬಸ್ ಪಕ್ಕದಲ್ಲಿ ಬಂದ ಬೈಕ್ಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸವಾರ ರಮೇಶ್ ತಲೆಗೆ ಗಾಯಗಳಾಗಿ ರಕ್ತ ಸ್ರಾವವಾಗಿದೆ. ಸ್ಥಳೀಯರು ಕೂಡಲೇ ರಮೇಶ್ನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಮೇಶ್ ಮೃತಪಟ್ಟಿದ್ದಾರೆ. ಅಲ್ಲದೆ ಬೈಕ್ ಚಾಲಕನ ವಿರುದ್ಧ ಕೆಎಸ್ಆರ್ಟಿಸಿ ಬಸ್ ಚಾಲಕ, ಕಂಡಕ್ಟರ್ ಡ್ರಂಕ್ ಌಂಡ್ ಡ್ರೈವ್ ಆರೋಪ ಮಾಡಿದ್ದಾರೆ. ರಾಜಾಜಿನಗರ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.
ಮತ್ತೊಂದೆಡೆ ಸ್ಥಳ ಪರಿಶೀಲನೆ ವೇಳೆ ಮದ್ಯದ ಬಾಟಲ್ಗಳು ಪತ್ತೆಯಾಗಿವೆ. ಈ ಹಿನ್ನೆಲೆ ಕುಡಿದ ಅಮಲಿನಲ್ಲಿ ಬೈಕ್ ಸವಾರ ಬೈಕ್ ಚಲಾಯಿಸುತ್ತಿದ್ದ ಎನ್ನಲಾಗಿದೆ. ಮೂರು ಬೈಕ್ ಹಾಗೂ ಒಂದು ಕಾರ್ ನಲ್ಲಿ ರಮೇಶ್ ಹಾಗೂ ಸ್ನೇಹಿತರು ಬರುತ್ತಿದ್ದರು. ಅಪಘಾತದ ನಂತರ ಬಸ್ ಡ್ರೈವರ್ ಹಾಗೂ ಕಂಡಕ್ಟರ್ಗೆ ರಮೇಶ್ ಸ್ನೇಹಿತರು ಸುತ್ತುವರಿದು ಥಳಿಸಿದ್ದಾರೆ. ರಾಜಾಜಿನಗರ ಸಂಚಾರಿ ಠಾಣೆಯಲ್ಲಿ ಅಪಘಾತ ಸಂಬಂಧ ಮೃತನ ಕಡೆಯವರಿಂದ ದೂರು ದಾಖಲಾಗಿದ್ದು ಹಲ್ಲೆ ಸಂಬಂಧ ಕೆಎಸ್ಆರ್ಟಿಸಿ ಚಾಲಕ, ಕಂಟೆಕ್ಟರ್ ನಿಂದಲೂ ಪ್ರತಿದೂರು ದಾಖಲಾಗಿದೆ. ರಾಜಾಜಿನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: Bengaluru Power Cut ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಪವರ್ ಕಟ್; ಯಾವ ಪ್ರದೇಶದಲ್ಲಿ ಇರಲ್ಲ ವಿದ್ಯುತ್?
ಆರ್ಡಿ ಇಂಟರ್ನ್ಯಾಷನಲ್ ಶಾಲೆ ವಿರುದ್ಧ ದೂರು ದಾಖಲು
ಬೆಂಗಳೂರಿನಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿ ಆರ್ಡಿ ಇಂಟರ್ನ್ಯಾಷನಲ್ ಶಾಲೆ ವಿರುದ್ಧ ದೂರು ದಾಖಲಾಗಿದೆ. ಗಂಗಮ್ಮನ ಗುಡಿ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದಾರೆ. ಗಲಾಟೆ ಮಾಡಿದ್ದಕ್ಕೆ ಮಕ್ಕಳಿಗೆ ಶಿಕ್ಷಕ ಹೊಡೆದಿದ್ದಾರೆ. ಮಕ್ಕಳನ್ನು ಶಿಕ್ಷಕ ಹೊಡೆಯುತ್ತಿದ್ದ ವೇಳೆ ಬಾಲಕಿ ಕುಸಿದು ಬಿದ್ದುದ್ದಾಳೆ. ಈ ವೇಳೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಬಾಲಕಿ ಮೃತಪಟ್ಟಿದ್ದಾಳೆ ಎಂದು ಮೃತ ಬಾಲಕಿ ತಂದೆ ನಾಗೇಂದ್ರ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಆರ್ಪಿಸಿ 174ಸಿ ಅಡಿ ಯುಡಿಆರ್ ಪ್ರಕರಣ ದಾಖಲಾಗಿದೆ. ರಾಮಯ್ಯ ಆಸ್ಪತ್ರೆಯಲ್ಲಿಂದು ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಯಲಿದೆ.
Published On - 7:49 am, Sat, 5 November 22