ಬೆಂಗಳೂರು: ಮಾಜಿ ಸಂಸದರಾದ ಎಸ್.ಪಿ.ಮುದ್ದಹನುಮೇಗೌಡ, ನಟ ಶಶಿಕುಮಾರ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಬಿ.ಹೆಚ್. ಅನಿಲ್ ಕುಮಾರ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಬಿಜೆಪಿ ಶಾಲು ಹಾಕಿ ಬರಮಾಡಿಕೊಂಡರು.
ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವರಾದ ಡಾ. ಅಶ್ವಥ್ ನಾರಾಯಣ, ಗೋವಿಂದ ಕಾರಜೋಳ, ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜ, ರಾಜ್ಯಸಭಾ ಸದಸ್ಯ ಜಗ್ಗೇಶ್, ಶಾಸಕ ಮಸಾಲೆ ಜಯರಾಂ, ವಿಧಾನ ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ, ಸಿ.ಪಿ. ಯೋಗೇಶ್ವರ್, ಅ.ದೇವೇಗೌಡ ಉಪಸ್ಥಿತರಿದ್ದರು. ಕೇಸರಿ ಶಾಲು ಹಾಕಿ, ಬಿಜೆಪಿ ಬಾವುಟ ನೀಡಿ ಮೂವರನ್ನೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.
ಇನ್ನು ಬಿಜೆಪಿಗೆ ಸೇರಿದ ಬಳಿಕ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಮಾಜಿ ಸಂಸದ ಶಶಿಕುಮಾರ್, ಪ್ರಧಾನಿ ಮೋದಿ ಕಾರ್ಯ ವೈಖರಿ ಮೆಚ್ಚಿ ಬಿಜೆಪಿ ಸೇರಿದ್ದೇನೆ. ಟಿಕೆಟ್ ಕೊಡಿ ಎಂದು ನಾನು ಎಲ್ಲೂ ಕೇಳಿಲ್ಲ. ಪ್ರಧಾನಿ ಮೋದಿ ಕಾರ್ಯವೈಖರಿ ಬಗ್ಗೆ ಮೆಚ್ಚಿ ಬಂದಿದ್ದೇನೆ. ಎಸ್ಟಿ ಮೀಸಲಾತಿ ಹೆಚ್ಚಳ ಬೇಡಿಕೆಯನ್ನು ಈಡೇರಿಸಿದ್ದಾರೆ ಎಂದರು. ಮತ್ತೊಂದೆಡೆ ಚಳ್ಳಕೆರೆ ಕ್ಷೇತ್ರದಿಂದ ಶಶಿಕುಮಾರ್ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ. ನಾನು ಸನ್ಯಾಸಿ ಅಲ್ಲ, ಪಕ್ಷದ ತೀರ್ಮಾನವೇ ಅಂತಿಮ. ನಾನು ಸನ್ಯಾಸಿಯಲ್ಲ, ಪಕ್ಷದ ತೀರ್ಮಾನವೇ ಅಂತಿಮ ಎಂದರು.
ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ತೊರೆದವರಿಗೆ ಆಹ್ವಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಶಿಕುಮಾರ್, ಡಿ.ಕೆ. ಶಿವಕುಮಾರ್ ಆಹ್ವಾನ ನನಗೆ ಅನ್ವಯಿಸೋದಿಲ್ಲ. ಹೋಗುವವರು ಹೋಗಲಿ. ಬಂದವರು ತಿರಸ್ಕಾರ ಮಾಡಿಯೇ ಬಂದಿರೋದು ಅಲ್ವಾ ಎಂದರು.
ಇದನ್ನೂ ಓದಿ: ಹೊಸಪೇಟೆಯ ಕಳ್ಳನೊಬ್ಬ ತನ್ನ ಕಸುಬುಗಿಳಿದಾಗ ವಿಚಿತ್ರ ಹಾವಭಾವ ಪ್ರದರ್ಶಿಸುತ್ತಾನೆ!
ನಾವೆಲ್ಲರೂ ಒಟ್ಟಾಗಿ ಸೇರಿ ಪಕ್ಷವನ್ನು ಕಟ್ಟುವ ಕೆಲಸ ಮಾಡೋಣ
ಇನ್ನು ಮತ್ತೊಂದೆಡೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಎಸ್.ಪಿ.ಮುದ್ದಹನುಮೇಗೌಡ. ಬಿಜೆಪಿ ನಾಯಕರು ಗೌರವಯುತವಾಗಿ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಬಿಜೆಪಿ ಸೇರುವವರನ್ನು ಸ್ವಾಗತ ಮಾಡುವುದಾಗಿ ಡಿಕೆಶಿ ಹೇಳಿದ್ದಾರೆ. ಬಿಜೆಪಿಯಲ್ಲಿ ಕಾರ್ಯಕರ್ತನಾಗಿ ಇರುತ್ತೇನೆ. ನಾವೆಲ್ಲರೂ ಒಟ್ಟಾಗಿ ಸೇರಿ ಪಕ್ಷವನ್ನು ಕಟ್ಟುವ ಕೆಲಸ ಮಾಡೋಣ ಎಂದರು.
ರಾಜ್ಯಾಧ್ಯಕ್ಷರಾದ ಶ್ರೀ @nalinkateel & ಮುಖ್ಯಮಂತ್ರಿಗಳಾದ ಶ್ರೀ @BSBommai ಅವರ ಸಮ್ಮುಖದಲ್ಲಿ ಮಾಜಿ ಸಂಸದ ಶ್ರೀ ಮುದ್ದಹನುಮೇಗೌಡ, ಚಲನಚಿತ್ರ ನಟರು ಹಾಗೂ ಮಾಜಿ ಸಂಸದ ಶ್ರೀ ಶಶಿಕುಮಾರ್, ಮಾಜಿ ಐಎಎಸ್ ಅಧಿಕಾರಿ ಶ್ರೀ ಬಿ. ಎಚ್. ಅನಿಲ್ ಕುಮಾರ್, ಸೇವಾದಳದ ರಾಜ್ಯ ಉಪಾಧ್ಯಕ್ಷ ಶ್ರೀ ಹನುಮಂತರಾವ್ ಜವಳಿ, (1/2)#JoinBJP pic.twitter.com/TJkFdSf7t9
— BJP Karnataka (@BJP4Karnataka) November 3, 2022
ನಾನು ಕೂಡ ಟಿಕೆಟ್ ಆಕಾಂಕ್ಷಿ
ನಿವೃತ್ತ ಐಎಎಸ್ ಅಧಿಕಾರಿ ಬಿ.ಎಚ್. ಅನಿಲ್ ಕುಮಾರ್ ಮಾತನಾಡುತ್ತ, ನಾನು ಕೂಡ ಟಿಕೆಟ್ ಆಕಾಂಕ್ಷಿ ಎಂದರು. ಕೊರಟಗೆರೆಯಲ್ಲಿ ಪರಮೇಶ್ವರ್ ಎದುರಾಳಿಯಾಗಿ ಸ್ಫರ್ಧೆ ವಿಚಾರಕ್ಕೆ ಸಂಬಂಧಿಸಿ ಪಕ್ಷ ಯಾರನ್ನು ಆಯ್ಕೆ ಮಾಡಲಿದೆಯೋ ಅದೇ ಅಂತಿಮ. ಆದ್ರೆ ನಾನು ಕೂಡ ಟಿಕೆಟ್ ಆಕಾಂಕ್ಷಿ. ಪಕ್ಷ ಅದನ್ನು ಚುನಾವಣೆ ಸಂದರ್ಭದಲ್ಲಿ ಸ್ಪಷ್ಟ ಮಾಡಲಿದೆ. ನನಗೆ ಕೆಲಸ ಮಾಡಲು ಸೂಚಿಸಿದ್ದಾರೆ. ಕೊರಟಗೆರೆ ಕ್ಷೇತ್ರದಲ್ಲಿ ಸ್ಪರ್ಧಿಸಲು ನಾನು ಸಿದ್ದನಿದ್ದೇನೆ. 35 ವರ್ಷ ಕಾರ್ಯಾಂಗದಿಂದ ಕೆಲಸ ಮಾಡಿ ಅನುಭವ ಇದೆ. ಈಗ ನಿವೃತ್ತಿ ನಂತರ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದರು.
ಮುದ್ದಹನುಮೇಗೌಡರೇ, ಶಶಿಕುಮಾರ್ ಅವರೇ ನೀವು ವಿಶ್ವಾಸ ಇಡಬೇಕು. ಬಿಜೆಪಿ ಪಕ್ಷ ಬಂದವರಿಗೆ ಎಂದಿಗೂ ನಿರಾಸೆ ಮೂಡಿಸಿಲ್ಲ. ಬಿಜೆಪಿಗೆ ಬಂದವರೆಲ್ಲಾ ನಾಯಕರಾಗಿದ್ದಾರೆ. ಪಕ್ಷಕ್ಕೆ ಬಂದವರು ನಿಷ್ಠರಾಗಿರಬೇಕು ಅಷ್ಟೇ. ಅನಿಲ್ ಕುಮಾರ್ ಅವರೇ ಅಧಿಕಾರಿಗಳು ಕೂಡಾ ಮಂತ್ರಿಗಳಾಗಿದ್ದಾರೆ. ಹಿಂದೆ ನಾನು ಮುದ್ದಹನುಮೇಗೌಡ ಅವರನ್ನು ಪಕ್ಷಕ್ಕೆ ಕರೆದಿದ್ದೆ. ಆದರೆ ಆಗ ಅವರು ಬಂದಿರಲಿಲ್ಲ. ಕೊನೆಗೆ ಅವರನ್ನು ಕಾಂಗ್ರೆಸ್ ದೂರ ಮಾಡಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸ್ವಾಗತಿಸಿದರು.
Published On - 1:19 pm, Thu, 3 November 22