ಹೊಸಪೇಟೆಯ ಕಳ್ಳನೊಬ್ಬ ತನ್ನ ಕಸುಬುಗಿಳಿದಾಗ ವಿಚಿತ್ರ ಹಾವಭಾವ ಪ್ರದರ್ಶಿಸುತ್ತಾನೆ!
ಅವನ ಯತ್ನ ವಿಫಲವಾಗೋದೇನೋ ನಿಜ, ಆದರೆ ಕಳುವು ಪ್ರಯತ್ನಕ್ಕೆ ಮುಂಚೆ ಅವನು ಪ್ರದರ್ಶಿಸುವ ಹಾವಭಾವ ಮಾತ್ರ ಅರ್ಥವಾಗುವುದಿಲ್ಲ.
ವಿಜಯನಗರ: ಕಳ್ಳರು ಕಳ್ಳತನ ಮಾಡುವ ಮೊದಲು ಕುಚೇಷ್ಟೆಗಳನ್ನು ಮಾಡುತ್ತಾರೆಯೇ? ವಿಜಯನಗರ ಜಿಲ್ಲೆ ಹೊಸಪೇಟೆ ನಗರದ ಹಸನ್ ರಾಜಾಬಕ್ಷ್ (Hasan Rajabaksh) ಮಾಡಿದ್ದನ್ನು ನೋಡಿದರೆ ಇರಬಹುದೇನೋ ಅನಿಸುತ್ತದೆ. ಅಕ್ಟೋಬರ್ 30 ರ ಬೆಳಗಿನ ಜಾವ ಇವನು ನಗರದ ಕೌಲ್ ಬಜಾರ್ ನಲ್ಲಿರುವ (Kaul Bazar) ಎಟಿಎಮ್ ಕಿಯಾಸ್ಕ್ ಇರುವ ಕೇಂದ್ರವೊಂದಕ್ಕೆ ನುಗ್ಗಿ ಶಟರ್ ಗಳನ್ನು ಕೆಳಗೆಳೆದು ಹಣ ಕದಿಯುವ ಪ್ರಯತ್ನ ಮಾಡುತ್ತಾನೆ. ಅವನ ಯತ್ನ ವಿಫಲವಾಗೋದೇನೋ ನಿಜ, ಆದರೆ ಕಳುವು (theft) ಪ್ರಯತ್ನಕ್ಕೆ ಮುಂಚೆ ಅವನು ಪ್ರದರ್ಶಿಸುವ ಹಾವಭಾವ ಮಾತ್ರ ಅರ್ಥವಾಗುವುದಿಲ್ಲ.
Published on: Nov 03, 2022 12:41 PM
Latest Videos