ನನ್ನಣ್ಣನ ಮಗ ಬೇಗ ಮನೆಗೆ ವಾಪಸ್ಸಾಗುತ್ತಾನೆ ಎಂಬ ನಂಬಿಕೆ ನನಗಿದೆ: ಎಮ್ ಪಿ ರೇಣುಕಾಚಾರ್ಯ
ಶಾಸಕರು ಸೇರಿದಂತೆ ಕುಟುಂಬದವರೆಲ್ಲ ಅನ್ನ-ನೀರು-ನಿದ್ರೆ ಬಿಟ್ಟು ಚಂದ್ರಶೇಖರ್ ಬರುವಿಕೆಗಾಗಿ ಕಾಯುತ್ತಿದ್ದಾರೆ.
ಹೊನ್ನಾಳಿ ಶಾಸಕ ಎಮ್ ಪಿ ಶಾಸಕ ಎಮ್ ಪಿ ರೇಣುಕಾಚಾರ್ಯ (MP Renukacharya) ತುಂಬಾ ಸಂಟಕದಲ್ಲಿದ್ದಾರೆ, ಯಾತನೆ ಪಡುತ್ತಿದ್ದಾರೆ. ಅವರ ಅಣ್ಣನ ಮಗ ಚಂದ್ರಶೇಖರ್ (Chandrashekar) ನಾಪತ್ತೆಯಾಗಿ ಇಂದಿಗೆ 5 ದಿನಗಳಾಯಿತು. ಎಲ್ಲಿದ್ದಾನೆ ಅನ್ನೋದು ಇದುವರೆಗೆ ಪತ್ತೆಯಾಗಿಲ್ಲ. ಶಾಸಕರು ಸೇರಿದಂತೆ ಕುಟುಂಬದವರೆಲ್ಲ ಅನ್ನ-ನೀರು-ನಿದ್ರೆ ಬಿಟ್ಟು ಚಂದ್ರಶೇಖರ್ ಬರುವಿಕೆಗಾಗಿ ಕಾಯುತ್ತಿದ್ದಾರೆ. ಅವನನ್ನು ಅತ್ಯಂತ ಯೋಜಿತವಾದ ರೀತಿಯಲ್ಲಿ ಕಿಡ್ನ್ಯಾಪ್ (kidnap) ಮಾಡಲಾಗಿದೆ ಎಂದು ದಾವಣಗೆರೆ ಟಿವಿ9 ಪ್ರತಿನಿಧಿಗೆ ಹೇಳಿದ ಅವರು ಜನರ ಪ್ರೀತಿ-ವಿಶ್ವಾಸ, ಪ್ರಾರ್ಥನೆ ಮತ್ತು ಭಗವಂತನ ಅನುಗ್ರಹದಿಂದ ಚಂದ್ರಶೇಖರ್ ಬೇಗ ವಾಪಸ್ಸು ಬರುತ್ತಾನೆ ಅಂತ ಶಾಸಕರು ಹೇಳಿದರು.
Published on: Nov 03, 2022 02:01 PM
Latest Videos