ಕಾರವಾರ: ಜನರ ಎಚ್ಚರಿಕೆ ಕಡೆಗಣಿಸಿ ಈಜಲು ಕಾಳಿ ನದಿಗಿಳಿದವನನ್ನು ನರಭಕ್ಷಕ ಮೊಸಳೆ ನೀರಿನಾಳಕ್ಕೆ ಎಳೆದೊಯ್ಯಿತು!
ಬೇಡ ಅಂತ ದಡದ ಮೇಲಿದ್ದ ಜನರು ಹೇಳಿದರೂ ಅವನು ಈಜುತ್ತಾ ದೂರದವರೆಗೆ ಹೋಗಿ ಮೊಸಳೆ ಬಾಯಿಗೆ ಸಿಕ್ಕಿದ್ದಾನೆ. ಮೊಸಳೆ ನೀರಿನಾಳಕ್ಕೆ ಅವನನ್ನು ಎಳೆದೊಯ್ಯುವುದನ್ನು ಜನ ನೋಡಿದ್ದಾರೆ.
ಉತ್ತರ ಕನ್ನಡ: ಅಪಾಯದೊಂದಿಗೆ ಸರಸವಾಡುವುದೆಂದರೆ ಕೆಲವರಿಗೆ ಎಲ್ಲಿಲ್ಲದ ಖುಷಿ, ಅಪಾಯವನ್ನು ಕಡೆಗಣಿಸಿ ದುಸ್ಸಾಹಸಕ್ಕೆ ಮುಂದಾಗಿ ಸಾವನ್ನು ಆಹ್ವಾನಿಸುತ್ತಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಳಿ ನದಿಯು (Kali River) ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಪಕ್ಕದಿಂದ ಹರಿಯುತ್ತದೆ. ನದಿಯ ಈ ಭಾಗದಲ್ಲೇ ನರಭಕ್ಷಕ ಮೊಸಳೆಯೊಂದು (crocodile) ವಾಸವಾಗಿದೆ. ದೇವಸ್ಥಾನಕ್ಕೆ ಪೂಜೆಗೆಂದು ಬಂದು ವ್ಯಕ್ತಿಯೊಬ್ಬ ಈಜಾಡುವ ಉದ್ದೇಶದಿಂದ ನದಿಗಿಳಿದಿದ್ದಾನೆ. ಮೊಸಳೆಯಿದೆ ಬೇಡ ಅಂತ ದಡದ ಮೇಲಿದ್ದ ಜನರು ಹೇಳಿದರೂ ಅವನು ಈಜುತ್ತಾ ದೂರದವರೆಗೆ ಹೋಗಿ ಮೊಸಳೆ ಬಾಯಿಗೆ ಸಿಕ್ಕಿದ್ದಾನೆ. ಮೊಸಳೆ ನೀರಿನಾಳಕ್ಕೆ (deep waters) ಅವನನ್ನು ಎಳೆದೊಯ್ಯುವುದನ್ನು ಜನ ನೋಡಿದ್ದಾರೆ. ಪೊಲೀಸ್ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿ ನೆರೆದಿರುವುದನ್ನು ನೋಡಬಹುದು.
Latest Videos