ಬೆಂಗಳೂರು, ಸೆ.22: ನಗರದಲ್ಲಿರುವ ವಿಧಾನಸೌಧದ (Vidhana Soudha) ಪೂರ್ವದ್ವಾರ, ಪಶ್ಚಿಮ ದ್ವಾರಗಳಿಗೆ ಹೊರ ಮೆರುಗು ಬರಲಿದೆ. ಎರಡು ದ್ವಾರಗಳಲ್ಲಿ ವಿಶೇಷ ವಾಸ್ತುಶಿಲ್ಪ ಕೆತ್ತಿಸಲು ಸ್ಪೀಕರ್ ಯುಟಿ ಖಾದರ್ (U.T. Khader) ಮುಂದಾಗಿದ್ದು, ವಿಧಾನಸೌಧದ ಇತಿಹಾಸದ ವಾಸ್ತುಶಿಲ್ಪದ ಕೆತ್ತನೆಗೆ ಸಿದ್ಧತೆ ನಡೆಸಲಾಗುತ್ತಿದೆ.
ಸದ್ಯ ಯುಟಿ ಖಾದರ್ ಅವರು ವಾಸ್ತುಶಿಲ್ಪಿಗಳ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಐತಿಹಾಸಿಕ ಹಿನ್ನೆಲೆ ಉಳ್ಳ ವಿಧಾನಸೌದ ವೀಕ್ಷಣೆಗೆ ಲಕ್ಷಾಂತರ ಜನರು ಆಗಮಿಸುತ್ತಾರೆ. ಹೀಗಾಗಿ ವಿಧಾನಸೌಧದ ಕಬ್ಬಿಣಗಳಿಂದ ನಿರ್ಮಿಸಲಾಗಿರುವ ಪ್ರಮುಖ ಬಾಗಿಲುಗಳಾದ ಪೂರ್ವ ಮತ್ತು ಪಶ್ಚಿಮದ ಹೆಬ್ಬಾಗಿಲುಗಳನ್ನು ಮತ್ತಷ್ಟು ಸುಂದರವಾಗಿರಿಸಲು ಕಬ್ಬಿಣದ ಬದಲು ವಿಶೇಷ ವಾಸ್ತುಶಿಲ್ಪ ಕೆತ್ತನೆ ಮಾಡಲು ಚಿಂತಿಸಲಾಗಿದೆ.
ಇದನ್ನೂ ಓದಿ: ತಮಿಳುನಾಡಿಗೆ ನೀರು ಹರಿಸಲು ಕೋರ್ಟ್ ಆದೇಶ: ಮಂಡ್ಯದಲ್ಲಿ ಭುಗಿಲೆದ್ದ ಆಕ್ರೋಶ, ವಿಧಾನಸೌಧ ಮುತ್ತಿಗೆ ಹಾಕಲು ಕರವೇ ನಿರ್ಧಾರ
ಸಂವಿಧಾನದ ಪೀಠಿಕೆ, ವಿಧಾನಸೌಧದ ಇತಿಹಾಸ, ಸಂಸ್ಕೃತಿ, ನಾಡು, ನುಡಿ ಬಿಂಬಿಸುವ ವಾಸ್ತುಶಿಲ್ಪ ಕೆತ್ತಿಸಲು ಸಿದ್ಧತೆ ಮಾಡಲಾಗುತ್ತಿದೆ. ವಿವಿಧ ವಾಸ್ತುಶಿಲ್ಪಗಳನ್ನ ಕರೆಸಿ ಹೆಬ್ಬಾಗಿಲುಗಳನ್ನ ತೋರಿಸಲಾಗಿದೆ. ಶೀಘ್ರವೇ ಈ ಬಗ್ಗೆ ಅಂತಿಮ ನಿರ್ಧಾರ ಮಾಡಲಾಗುತ್ತದೆ.
ಯಾವ ವಾಸ್ತುಶಿಲ್ಪ ಕೆತ್ತಿಸಬೇಕು, ಯಾವ ಯಾವ ವಿಚಾರ ಇರಬೇಕು, ವಾಸ್ತುಶಿಲ್ಪದ ಮಾದರಿ ಹೇಗೆ ಇರಬೇಕು ಹೀಗೆ ಎಲ್ಲಾ ಅಂಶಗಳು ಸಿದ್ಧತೆ ಆದ ಮೇಲೆ ಕಾರ್ಯ ಪ್ರಾರಂಭ ಮಾಡಲು ನಿರ್ಧಾರ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ