ಇಂಡಿಯಾ-ಭಾರತ ಎರಡು ಒಂದೇ ತಾನೆ? ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ದ ಬೇಸರ ವ್ಯಕ್ತಪಡಿಸಿದ ಸ್ಪೀಕರ್ ಯುಟಿ ಖಾದರ್
ದೇಶದ ಹೆಸರನ್ನ ಇಂಡಿಯಾ ಬದಲಿಗೆ ಭಾರತ ಅಂತಾ ಬದಲಾಯಿಸುತ್ತಾರೆ ಎನ್ನುವ ವಿಚಾರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸದ್ಯ ಈ ವಿಚಾರವಾಗಿ ಹಾಸದಲ್ಲಿ ಪ್ರತಿಕ್ರಿಯೆ ನೀಡಿರುವ ವಿಧಾನಸಭೆ ಸ್ಪೀಕರ್ ಯುಟಿ ಖಾದರ್, ಬಿರ್.ಆರ್ ಅಂಬೇಡ್ಕರ್ ಅವರು ಸಂವಿಧಾನ ಸಭೆಯಲ್ಲಿ ಚರ್ಚೆ ಮಾಡಿಯೇ ಹೆಸರು ಇಟ್ಟಿದಾರೆ ಇಂಡಿಯಾ-ಭಾರತ ಎರಡು ಒಂದೇ ಅಲ್ವಾ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹಾಸನ, ಸೆಪ್ಟೆಂಬರ್ 9: ಈ ದೇಶದ ಸಣ್ಣ ಮಕ್ಕಳಿಗೂ ಗೊತ್ತಿದೆ ಭಾರತ ಎಂದರೆ ಇಂಡಿಯಾ ಅಂತ. ಇದನ್ನೆಲ್ಲಾ ಸಂವಿಧಾನ ಶಿಲ್ಪಿ ಬಿರ್.ಆರ್ ಅಂಬೇಡ್ಕರ್ ಅವರು ಸಂವಿಧಾನ ಸಭೆಯಲ್ಲಿ ಚರ್ಚೆ ಮಾಡಿಯೇ ಹೆಸರು ಇಟ್ಟಿದಾರೆ. ಸಂವಿಧಾನ ಬದ್ದವಾಗಿ ನಮ್ಮ ದೇಶಕ್ಕೆ, ರಾಜ್ಯಕ್ಕೆ ಉತ್ತಮ ಹೆಸರು ಬರುವ ಕೆಲಸ ಮಾಡಬೇಕು. ಇಂಡಿಯಾ-ಭಾರತ ಎರಡು ಒಂದೇ ಅಲ್ವಾ ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ (UT Khader) ಬೇಸರ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆ ಬಂದಾಗ ಬೇರೆ ಬೇರೆ ವಿಚಾರ ಬರುತ್ತೆ. ಸಮಾಜದಲ್ಲಿ ಸಮಸ್ಯೆ ತರುವ ಕೆಲಸ ಮಾಡಬಾರದು. ಇದನ್ನ ಹೆಚ್ಚಿಗೆ ತಲೆಕೆಡಿಸಿಕೊಳ್ಳದೆ ನಿರ್ಲಕ್ಷ್ಯ ಮಾಡಬೇಕು ಎಂದು ಹೇಳಿದ್ದಾರೆ.
ನಮ್ಮ ರಾಜಕೀಯಕ್ಕಾಗಿ ನಾವು ಯಾಕೆ ಅದನ್ನು ಬೇರೆ ಬೇರೆ ಮಾಡಬೇಕು ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರದ ನಡೆ ವಿರುದ್ದ ಬೇಸರ ವ್ಯಕ್ತಪಡಿಸಿದರು. ಇದೆ ವೇಳೆ ಜೋಡೋ ಭಾರತ್ ಜೀತೇಂಗೇ ಇಂಡಿಯಾ ಎಂದು ಘೋಷಣೆ ಕೂಗಿದ್ದಾರೆ.
ಇದನ್ನೂ ಓದಿ: ಸುಭಾಷ್ ಚಂದ್ರ ಬೋಸ್ ಅವರನ್ನು ಕಾಂಗ್ರೆಸ್ನವರೇ ಹತ್ಯೆ ಮಾಡಿದ್ದಾರೆ; ಬಸನಗೌಡ ಪಾಟೀಲ್ ಯತ್ನಾಳ್ ಆರೋಪ
ಭಾರತ ಒಗ್ಗಟ್ಟಾದರೆ ಇಂಡಿಯಾ ಗೆಲುವು ಸಾಧಿಸುತ್ತದೆ. ನಾನು ಹೇಳಿದ್ದು ಭಾರತ್ ಜೋಡೋ ಬಗ್ಗೆ ಅಲ್ಲ, ಹಿಂದಿಯಲ್ಲಿ ಭಾರತ ಒಗ್ಗಟ್ಟಿದ್ದರೆ ಇಂಡಿಯಾ ಜಯಿಸುತ್ತದೆ ಎಂಬ ಮಾತಿದೆ ಅದನ್ನ ಹೇಳಿದ್ದೇನೆ. ಇವೆರಡೂ ಒಂದೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.
ನಾವು ಭಾರತ ರತ್ನ ಇಟ್ಟಿದ್ದೇವೆ, ಭಾರತ್ ಎಲೆಕ್ಟ್ರಿಕಲ್ ಲಿಮಿಟೆಡ್ ಇಟ್ಟಿದ್ದೇವೆ, ಭಾರತ್ ಮೋಟರ್ಸ್ ಇಟ್ಟಿದ್ದೇವೆ. ಕೇಂದ್ರ ಸರ್ಕಾರ ಈ ರೀತಿ ಭಾರತ ಹೆಸರಿನಲ್ಲಿ ಹಲವು ಹೆಸರು ಇಟ್ಟಿದಾರೆ. ಈಗಿನ ಸರ್ಕಾರ ಬಂದಾಗ ಖೇಲೋ ಇಂಡಿಯಾ, ಡಿಜಿಟಲ್ ಇಂಡಿಯಾ ಎಂದು ಇಟ್ಟಿದಾರೆ. ಇವೆರಡೂ ಒಂದೆ ಅಲ್ಲವೇ ಬೇರೆ ಬೇರೆ ಏನಿದೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಜಾತ್ಯತೀತ ಹೆಸರಿಟ್ಟುಕೊಂಡು ಕೋಮುವಾದಿಗಳ ಜೊತೆ ಮೈತ್ರಿ: ಜೆಡಿಎಸ್ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಸಂವಿಧಾನ ಬದ್ಧವಾಗಿ ನಾವು ದೇಶ ನಡೆಸಿ ದೇಶಕ್ಕೆ ಗೌರವ ತರುವ ಕೆಲಸ ಮಾಡಬೇಕು. ಭಾರತ ಮತ್ತು ಇಂಡಿಯಾ ಒಂದೇ. ಕೆಲವೊಂದು ರಾಜಕೀಯಕ್ಕಾಗಿ ನಾವು ಭಾರತ ಇಂಡಿಯಾ ಬೇರ್ಪಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದು ಸಂವಿಧಾನಕ್ಕೆ ಪೂರಕವು ಅಲ್ಲಾ, ದೇಶಕ್ಕೆ ಪೂರಕವು ಅಲ್ಲ. ಭಾರತ-ಇಂಡಿಯಾ ಎರಡು ಒಂದೇ ನಾವೆಲ್ಲಾ ಒಂದಾಗಿ ಇರಬೇಕು ಅಷ್ಟೇ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:49 pm, Sat, 9 September 23