ಸುಭಾಷ್ ಚಂದ್ರ ಬೋಸ್ ಅವರನ್ನು ಕಾಂಗ್ರೆಸ್​ನವರೇ ಹತ್ಯೆ ಮಾಡಿದ್ದಾರೆ; ಬಸನಗೌಡ ಪಾಟೀಲ್ ಯತ್ನಾಳ್ ಆರೋಪ

ಸುಭಾಷ್ ಚಂದ್ರ ಬೋಸ್ ಸಾವು ಇಂದಿಗೂ ಪ್ರಶ್ನಾರ್ಥಕ ಚಿಹ್ನೆ. ಇದು ಕೊಲೆಯೋ ಅಥವಾ ವಿಮಾನ ಅಪಘಾತವೋ ಎಂಬುದನ್ನು ಕಾಂಗ್ರೆಸ್ ನಾಯಕರು ಮರೆಮಾಚಿದ್ದಾರೆ. ದೇಶದ ಮೊದಲ ಪ್ರಧಾನಿ ನೆಹರೂ ಅವರ ಕಾರಣದಿಂದಲೇ ಬೋಸ್ ಅವರ ಹತ್ಯೆಯಾಯಿತು ಎಂದು ಅನೇಕ ಜನರು ಹೇಳುತ್ತಾರೆ ಎಂದು ಯತ್ನಾಳ್ ಹೇಳಿದ್ದಾರೆ.

ಸುಭಾಷ್ ಚಂದ್ರ ಬೋಸ್ ಅವರನ್ನು ಕಾಂಗ್ರೆಸ್​ನವರೇ ಹತ್ಯೆ ಮಾಡಿದ್ದಾರೆ; ಬಸನಗೌಡ ಪಾಟೀಲ್ ಯತ್ನಾಳ್ ಆರೋಪ
ಬಸನಗೌಡ ಪಾಟೀಲ್ ಯತ್ನಾಳ್
Follow us
Ganapathi Sharma
|

Updated on: Sep 09, 2023 | 5:51 PM

ರಾಯಚೂರು, ಸೆಪ್ಟೆಂಬರ್ 9: ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ (Subhas Chandra Bose) ಅವರನ್ನು ಹತ್ಯೆ ಮಾಡಿರುವುದು ಕಾಂಗ್ರೆಸ್​ನವರೇ ಎಂದು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಆರೋಪಿಸಿದ್ದಾರೆ. ಮಹಾತ್ಮಾ ಗಾಂಧಿಯನ್ನು ಕೊಂದ ಗೋಡ್ಸೆಗೆ ಬಿಜೆಪಿ ಬೆಂಬಲ ನೀಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿರುವ ಕುರಿತು ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯತ್ನಾಳ್, ಕಾಂಗ್ರೆಸ್ ಪಕ್ಷದವರೇ ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನು ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಸುಭಾಷ್ ಚಂದ್ರ ಬೋಸ್ ಸಾವು ಇಂದಿಗೂ ಪ್ರಶ್ನಾರ್ಥಕ ಚಿಹ್ನೆ. ಇದು ಕೊಲೆಯೋ ಅಥವಾ ವಿಮಾನ ಅಪಘಾತವೋ ಎಂಬುದನ್ನು ಕಾಂಗ್ರೆಸ್ ನಾಯಕರು ಮರೆಮಾಚಿದ್ದಾರೆ. ದೇಶದ ಮೊದಲ ಪ್ರಧಾನಿ ನೆಹರೂ ಅವರ ಕಾರಣದಿಂದಲೇ ಬೋಸ್ ಅವರ ಹತ್ಯೆಯಾಯಿತು ಎಂದು ಅನೇಕ ಜನರು ಹೇಳುತ್ತಾರೆ ಎಂದು ಯತ್ನಾಳ್ ಹೇಳಿರುವುದಾಗಿ ‘ಐಎಎನ್​ಎಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.

ಸನಾತನ ಧರ್ಮದ ಬಗ್ಗೆ ಮಾತನಾಡುವವರಿಗೆ ಎಚ್‌ಐವಿ ಏಡ್ಸ್ ಮತ್ತು ಕುಷ್ಠರೋಗಗಳು ಬಂದಿವೆ ಎಂದು ಅವರು ವಾಗ್ದಾಳಿ ನಡೆಸಿದರು.

ಸನಾತನ ಧರ್ಮ ಯಾವಾಗ ಹುಟ್ಟಿತು ಎಂದು ಅವರಲ್ಲಿ (ಕಾಂಗ್ರೆಸ್) ಒಬ್ಬರು ಕೇಳಿದರು. ಇಂಥ ಪ್ರಶ್ನೆ ಕೇಳುವ ಮಂತ್ರಿಗೆ ತನ್ನ ಜನ್ಮದ ಬಗ್ಗೆಯೇ ಗೊತ್ತಿಲ್ಲ. ನಮ್ಮ ಸನಾತನ ಧರ್ಮವನ್ನು ಹೇಗೆ ಪ್ರಶ್ನಿಸುತ್ತಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಅವರ ಹೆಸರು ಹೇಳದೆಯೇ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್​​ ಜತೆ ಮೈತ್ರಿ ಬಗ್ಗೆ ಮಾಹಿತಿ ಇಲ್ಲ

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್​​ ಜತೆ ಮೈತ್ರಿ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಕೊಪ್ಪಳದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ 25ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು. ಏನೇ ಇದ್ರೂ ದೆಹಲಿ ಮಟ್ಟದಲ್ಲಿ ನಡೆಯುತ್ತೆ, ನಮ್ಮ ವ್ಯಾಪ್ತಿಯಲ್ಲಿಲ್ಲ. ಕೆಲವೊಂದು ಕಡೆ ಹೊಂದಾಣಿಕೆಯಾದ್ರೆ ಬಿಜೆಪಿ ವೀಕ್ ಅಂತಾ ಅಲ್ಲ. ಮೈತ್ರಿ ಬಗ್ಗೆ ಯಡಿಯೂರಪ್ಪಗೆ ಮಾಹಿತಿ ಇರಬೇಕು, ಅದಕ್ಕೆ ಹೇಳಿದ್ದಾರೆ. ಪಕ್ಷ ಕೈಗೊಳ್ಳುವ ನಿರ್ಣಯಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ಅವರು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಬಿ.ಕೆ.ಹರಿಪ್ರಸಾದ್​ ವಾಗ್ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್​ನವರು ನಮ್ಮ ಪಾರ್ಟಿಯನ್ನು ಒಡೆಯಬೇಕು ಅಂತಿದ್ದಾರೆ. ಇನ್ನು 3 ತಿಂಗಳು ತಡೆಯಿರಿ ಇವರದ್ದೇ ಪಾರ್ಟಿ ಒಡೆದು ಹೋಗುತ್ತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸನಾತನ ಧರ್ಮದ ಬಗ್ಗೆ ಮಾತಾಡಿದವರಿಗೆ ಕುಷ್ಠರೋಗ ಮತ್ತು ಏಡ್ಸ್ ಹತ್ತಿದೆ: ಬಸನಗೌಡ ಪಾಟೀಲ್​ ಯತ್ನಾಳ್​

ಕಾಂಗ್ರೆಸ್​ನಲ್ಲೇ 50 ಅತೃಪ್ತ ಆತ್ಮಗಳಿವೆ. ಏನು ಮಾಡುತ್ತವೋ ಗೊತ್ತಿಲ್ಲ. ಬಸವರಾಜ ರಾಯರೆಡ್ಡಿ, ಬಿಆರ್ ಪಾಟೀಲ್ ಸೇರಿ ಹಲವು ಅತೃಪ್ತ ಆತ್ಮಗಳಿವೆ. ಜ್ಯೋತಿಷ್ಯ ಹೇಳ್ತಿಲ್ಲ, ಅವರ ನಡವಳಿಕೆ ನೋಡಿದ್ರೆ ತಾವೇ ಕುಸಿದು ಹೋಗ್ತವೆ ಎಂದು ಯತ್ನಾಳ್ ಟೀಕಿಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ