
ಬೆಂಗಳೂರು, ಜ.31: ಶ್ರೀರಾಮನ ಕಟೌಟ್ ಬಿದ್ದು ಪಾದಚಾರಿಗೆ ಗಾಯವಾದ ಘಟನೆ ಬೆಂಗಳೂರಿನ HAL ರಸ್ತೆಯಲ್ಲಿ ನಡೆದಿದೆ. ಶ್ರೀರಾಮ ಮಂದಿರ ಉದ್ಘಾಟನೆ ದಿನದಂದು ಹೆಚ್ಎಎಲ್ ವಿಮಾನ ನಿಲ್ದಾಣದ ಪಕ್ಕದಲ್ಲೆ ಶ್ರೀರಾಮನ ಬೃಹತ್ ಕಟೌಟ್ ಹಾಕಲಾಗಿತ್ತು. ಆದರೆ, ಕಾರ್ಯಕ್ರಮ ಮುಗಿದು 10 ದಿನಗಳಾದರೂ ಕಟೌಟ್ ತೆರವು ಗೊಳಿಸದ ಹಿನ್ನೆಲೆ ಪಾದಚಾರಿ ಮಾರ್ಗದಲ್ಲಿ ಸಾಗುತ್ತಿದ್ದವರ ಮೇಲೆ ಕಟೌಟ್ ಬಿದ್ದಿದೆ. ಇದರಿಂದ ಮೂರು ಜನ ಪಾದಚಾರಿಗಳಿಗೆ ಗಂಭೀರ ಗಾಯವಾಗಿದ್ದು, ಕೂಡಲೇ ಗಾಯಾಳುಗಳನ್ನು ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಟೌಟ್ ಬಿದ್ದ ಸ್ಥಳದಲ್ಲೇ ಖಾಸಗಿ ಶಾಲೆ ಇದ್ದು, ಲಂಚ್ ಬ್ರೇಕ್ ಆರಂಭ ಆಗುವ ಕೆಲವೇ ನಿಮಿಷಗಳ ಹಿಂದಷ್ಟೇ ಬೃಹತ್ ಕಟೌಟ್ ನೆಲಕ್ಕುರುಳಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಇನ್ನು ಈ ಕಟೌಟ್ನ್ನು ಖಾಸಗಿ ಶಾಲೆ ಗೋಡೆಗೆ ಸೇರಿದ ಹಾಗೇ ಕಟ್ಟಲಾಗಿತ್ತು. ಇಂದು ಹೋಗುತ್ತಿದ್ದವರ ಮೇಲೆ ಧಿಡೀರ್ ಬಿದ್ದಿದ್ದು, ಕೂಡಲೇ ಕಟೌಟ್ ಅಡಿ ಸಿಲುಕಿದ ಪಾದಚಾರಿಗಳನ್ನು ಸ್ಥಳೀಯರು ಹೊರ ಎಳೆದು, ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಗಾಯಾಳುಗಳನ್ನು ಶಿಫ್ಟ್ ಮಾಡಿದ್ದಾರೆ. ಅಳವಡಿಕೆ ವೇಳೆ ಸರಿಯಾದ ಸುರಕ್ಷತಾ ಕ್ರಮ ಕೈಗೊಳ್ಳದ ಹಿನ್ನೆಲೆ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನೂ ಓದಿ:ಕೋಲಾರ: ಶ್ರೀರಾಮನ ಕಟೌಟ್, ಪ್ಲೆಕ್ಸ್ನ್ನು ಬ್ಲೇಡ್ನಿಂದ ಹರಿದ ದುಷ್ಕರ್ಮಿಗಳು, ಇಬ್ಬರ ಬಂಧನ
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೇವನಹಳ್ಳಿ – ದೊಡ್ಡಬಳ್ಳಾಪುರದ ರಾಷ್ಟ್ರೀಯ ಹೆದ್ದಾರಿಯ ಬೀರಸಂದ್ರ ಬಳಿ ಸ್ವಿಫ್ಟ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಾಂಪೌಂಡ್ಗೆ ಗುದ್ದಿದ ಘಟನೆ ನಡೆದಿದೆ. ಕಾರಿನಲ್ಲಿದ್ದ ಐವರಿಗೆ ಗಂಭೀರ ಗಾಯವಾಗಿದ್ದು, ಸ್ಥಳಿಯ ಆಸ್ವತ್ರೆಗೆ ದಾಖಲು ಮಾಡಲಾಗಿದೆ. ಮದುವೆಗೆಂದು ಯುವಕರು ಹೊಸಕೋಟೆಯಿಂದ ತಿಪಟೂರಿಗೆ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ನಡೆದಿದೆ. ಈ ಘಟನೆ ವಿಶ್ವನಾಥಪುರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:59 pm, Wed, 31 January 24