ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ವಿಚಾರ: ಅನುಮತಿ ಪಡೆದು ಕಟೌಟ್ ಹಾಕಿದ್ದರೂ FIR ದಾಖಲು

ರಾಜ್ಯದ ಜಿಲ್ಲೆ ಜಿಲ್ಲೆಯಲ್ಲೂ ರಾಮಜಪ ನಡೆಯುತ್ತಿದೆ. ಇದರ ನಡುವೆ ಕೋಲಾರದಲ್ಲಿ ಕಿಡಿಗೇಡಿಗಳು  ಶ್ರೀರಾಮನ ಫ್ಲೆಕ್ಸ್‌ ಹರಿದು ಶಾಂತಿ ಕದಡುವ ಪ್ರಯತ್ನ ಮಾಡಿದ್ದರು. ಇದರ ಮುಂದುವರೆದ ಭಾಗವಾಗಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅನುಮತಿ ಪಡೆದು ಕಟೌಟ್ ಹಾಕಿದ್ದರೂ ಪೊಲೀಸರಿಂದ FIR ದಾಖಲು ಮಾಡಲಾಗಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ವಿಚಾರ: ಅನುಮತಿ ಪಡೆದು ಕಟೌಟ್ ಹಾಕಿದ್ದರೂ FIR ದಾಖಲು
ಕಟೌಟ್
Follow us
Shivaprasad
| Updated By: ಗಂಗಾಧರ​ ಬ. ಸಾಬೋಜಿ

Updated on: Jan 17, 2024 | 7:41 PM

ಬೆಂಗಳೂರು, ಜನವರಿ 17: ಜ.22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳಲಿದೆ. ಅನುಮತಿ ಪಡೆದು ಕಟೌಟ್ ಹಾಕಿದ್ದರೂ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲು ಮಾಡಲಾಗಿದೆ. ಶಿವನಗರ ಯುವಕರ ಸಂಘದಿಂದ ಬೆಸ್ಕಾಂಗೆ ಹಣ ಪಾವತಿಸಿ, ಅನುಮತಿ ಪಡೆದು ಕಾರ್ಡ್‌ ರಸ್ತೆಯ ವಾರಿಯರ್ ಬೇಕರಿ ಬಳಿ ಬೃಹತ್ ಕಟೌಟ್ ಅಳವಡಿಸಲಾಗಿದೆ. ರಾಜಾಜಿನಗರ ಪೊಲೀಸರ ನಡೆಗೆ ಶಿವನಗರ ಯುವಕರ ಸಂಘ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಜಿಲ್ಲೆ ಜಿಲ್ಲೆಯಲ್ಲೂ ರಾಮಜಪ ನಡೆಯುತ್ತಿದೆ. ಇದರ ನಡುವೆ ಕೋಲಾರದಲ್ಲಿ ಕಿಡಿಗೇಡಿಗಳು  ಶ್ರೀರಾಮನ ಫ್ಲೆಕ್ಸ್‌ ಹರಿದು ಶಾಂತಿ ಕದಡುವ ಪ್ರಯತ್ನ ಮಾಡಿದ್ದರು. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲೂ ಶ್ರೀರಾಮ ಮಂದಿರ ಉದ್ಘಾಟನೆ ಹಾಗೂ ಸಂಕ್ರಾಂತಿ ಸಂಬಂಧ ಶುಭ ಕೋರಿ ಫ್ಲೆೇಕ್ಸ್ ಅಳವಡಿಸಲಾಗಿತ್ತು.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಧರ್ಮಸ್ಥಳದಿಂದ ಪೂಜಾ ಪರಿಕರಗಳು ರವಾನೆ: ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಿಷ್ಟು

ರಾತ್ರಿ 10:40 ರ ಸುಮಾರಿಗೆ ಬಂದ ದುಷ್ಕರ್ಮಿ, ಕೈಯಲ್ಲಿದ್ದ ಚಾಕುವಿನಿಂದ ಫ್ಲೆಕ್ಸ್‌ ಹರಿದಿದ್ದಾನೆ. ಮುಂದೆ ಹೋದವನು ಮತ್ತೆ ವಾಪಸ್ ಆಗಿ ಇನ್ನೊಮ್ಮೆ ಚಾಕು ಹಾಕಿ ಅಲ್ಲಿಂದ ಕಾಲ್ಕಿತ್ತಿದ್ದ. ಇನ್ನೊಂದು ಸ್ಪಾಟ್‌ನಲ್ಲೂ ಇದೇ ರೀತಿ ಪ್ಲೆಕ್ಸ್‌ ಹರಿದು ಹಾಕಲಾಗಿತ್ತು. ವಿಠಲೇಶ್ವರಪಾಳ್ಯ ಮತ್ತು ಗುನುಗುಂಟೆಪಾಳ್ಯದಲ್ಲಿ ಹಾಕಲಾಗಿದ್ದ ಫ್ಲೆಕ್ಸ್​ಗಳನ್ನು ಹರಿದಿದ್ದಾರೆ.

ಬೆಳಗ್ಗೆ ವಿಷ್ಯ ಗೊತ್ತಾಗುತ್ತಿದ್ದಂತೆ ಬಿಜೆಪಿ ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು ಆಕ್ರೋಶಗೊಂಡಿದ್ದರು. ಸ್ಥಳಕ್ಕಾಗಿಮಿಸಿದ ಸಂಸದ ಮುನಿಸ್ವಾಮಿ ಪ್ರತಿಭಟನೆ ಆರಂಭಿಸಿದ್ದರು. ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದರು. ಈ ವೇಳೆ ಜೆಡಿಎಸ್‌ ಶಾಸಕ ಸಮೃದ್ಧಿ ಮಂಜುನಾಥ್‌ ಸ್ಪಾಟ್‌ಗೆ ಬರ್ತಿದ್ದಂತೆ ಇಬ್ಬರ ನಡುವೆ ಮಾತಿನಚಕಮಕಿ ಉಂಟಾಗಿತ್ತು.

ಇದನ್ನೂ ಓದಿ: ಕೋಲಾರ: ಶ್ರೀರಾಮನ ಕಟೌಟ್, ಪ್ಲೆಕ್ಸ್​​ನ್ನು ಬ್ಲೇಡ್​​ನಿಂದ ಹರಿದ ದುಷ್ಕರ್ಮಿಗಳು, ಇಬ್ಬರ ಬಂಧನ

ಬಿಜೆಪಿ ಹೋರಾಟ ಜೋರಾಗುತ್ತಿದ್ದಂತೆ ಜಾಹೀರ್‌ ಹಾಗೂ ಮತ್ತೊಬ್ಬ ಆರೋಪಿಯನ್ನ ಅರೆಸ್ಟ್‌ ಮಾಡಲಾಗಿದೆ. ಹರಿದಿದ್ದ ಫ್ಲೆಕ್ಸ್‌ ತೆರವುಗೊಳಿಸಿ ಹೊಸ ಫ್ಲೆಕ್ಸ್ ಅಳವಡಿಸಲಾಗಿದೆ. ಹೊಸ ಫ್ಲೆಕ್ಸ್ ಹಾಕ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಸಂಭ್ರಮದ ಹೊತ್ತಲ್ಲೇ ಕೆಲ ಕಿಡಿಗೇಡಿಗಳು ದುಷ್ಕೃತ್ಯ ಎಸಗಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಸದ್ಯ ಮುಳಬಾಗಿಲು ಬೂದಿಮುಚ್ಚಿದ ಕೆಂಡದಂತಿದ್ದು ಪೊಲೀಸರು ನಿಗಾವಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ