Threat Call: ಗುರುವಾರ ರಾತ್ರಿ ಶ್ರೀ ರಾಮ ಸೇನೆಯ ಪ್ರಮೋದ್ ಮುತಾಲಿಕ್​ಗೆ 4 ಜೀವ ಬೆದರಿಕೆ ಕರೆಗಳು

Sri Rama Sene: ಗುರುವಾರ ರಾತ್ರಿ ಬಂದಿರುವ 4 ಕರೆಗಳಲ್ಲಿ ಎರಡು ಕರೆಯನ್ನ ನಾನೇ ರಿಸೀವ್ ಮಾಡಿದ್ದೆ. ಕೊಚ್ಚಿ ಕೊಲೆ ಮಾಡ್ತೀವಿ ಎಂದು ಬೆದರಿಕೆ ಹಾಕಿದ್ದಾರೆ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ - ಶ್ರೀ ರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್

Threat Call: ಗುರುವಾರ ರಾತ್ರಿ ಶ್ರೀ ರಾಮ ಸೇನೆಯ ಪ್ರಮೋದ್ ಮುತಾಲಿಕ್​ಗೆ 4 ಜೀವ ಬೆದರಿಕೆ ಕರೆಗಳು
ಶ್ರೀ ರಾಮ ಸೇನೆಯ ಪ್ರಮೋದ್ ಮುತಾಲಿಕ್​ಗೆ 4 ಜೀವ ಬೆದರಿಕೆ ಕರೆಗಳು
Edited By:

Updated on: Nov 04, 2022 | 2:27 PM

ಬೆಂಗಳೂರು: ಶ್ರೀ ರಾಮ ಸೇನೆ (Sri Rama Sene) ಸಂಸ್ಥಾಪಕ ಪ್ರಮೋದ್ ಮುತಾಲಿಕ್​ಗೆ (Pramod Muthalik) ಕೊಲೆ ಬೆದರಿಕೆ ಕರೆಗಳು ಬಂದಿವೆ. ಈ ಬಗ್ಗೆ ಬೆಂಗಳೂರಿನಲ್ಲಿ ಸ್ವತಃ ಮುತಾಲಿಕ್ ಮಾಹಿತಿ ನೀಡಿದ್ದು, ನಿನ್ನೆ ರಾತ್ರಿ 4 ನಂಬರ್​ಗಳಿಂದ ಜೀವ ಬೆದರಿಕೆ ಕರೆಗಳು (Life Threat Call) ಬಂದಿವೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿದ್ದಾಗ (Hukkeri) 4 ಬೇರೆ ಬೇರೆ ನಂಬರುಗಳಿಂದ ಬೆದರಿಕೆ ಕರೆಗಳು ಬಂದಿವೆ. ಉರ್ದು ಮಿಶ್ರಿತ ಮಂಗಳೂರು ಭಾಷೆಯಲ್ಲಿ ಬೆದರಿಕೆ ಕರೆ ಬಂದಿದೆ. ಇಂದು ಬೆಳಗ್ಗೆಯೂ ಕೊಲೆ ಬೆದರಿಕೆ ಕರೆ ಬಂದಿದೆ. ಈ ಸಂಬಂಧ ಹುಕ್ಕೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಕೊಲೆ ಬೆದರಿಕೆಗೆ ನಾನು ಹೆದರುವುದಿಲ್ಲ ಎಂದು ಗುಡುಗಿದ್ದಾರೆ.

ಗುರುವಾರ ರಾತ್ರಿ ಬಂದಿರುವ 4 ಕರೆಗಳಲ್ಲಿ ಎರಡು ಕರೆಯನ್ನ ನಾನೇ ರಿಸೀವ್ ಮಾಡಿದ್ದೆ. ಕೊಚ್ಚಿ ಕೊಲೆ ಮಾಡ್ತೀವಿ ಎಂದು ಬೆದರಿಕೆ ಹಾಕಿದ್ದಾರೆ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಇಂದು ಬೆಳಗ್ಗೆ ಸಹ ಬೆದರಿಕೆ ಕರೆ ಬಂದಿದೆ. ಹೀನಾಯ ಪದ ಬಳಕೆಗಳನ್ನ ಮಾಡಿದ್ದಾರೆ. ಹುಕ್ಕೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಇದು‌ ಮೊದಲ ಬೆದರಿಕೆಯಲ್ಲ. ಬೊಗಳುವ ನಾಯಿ ಕಚ್ಚಲ್ಲ. ಈ ರೀತಿಯ ಬೆದರಿಕೆ ಹಾಕುವ ನಾಟಕ‌ ಬಿಟ್ಟುಬಿಡಿ. ದೇಶದ ಹಿತದೃಷ್ಟಿಯಿಂದ ನಾನು ಸಂಘಟನೆ ಮಾಡ್ತಿದ್ದೀನಿ. ನನಗೆ ಬೆದರಿಕೆ ಹಾಕಲು ಬರಬೇಡಿ ಎಂದು ಮುತಾಲಿಕ್ ಗುಡುಗಿದ್ದಾರೆ.