Sign In

By signing in or creating an account, you agree with Associated Broadcasting Company's Terms & Conditions and Privacy Policy.

Singapura Kere: ಸಿಂಗಾಪುರ ಕೆರೆ ಹೆಸರು ಬದಲಾವಣೆ ವಿರೋಧಿಸಿ ಮನವಿ ಬಂದಿಲ್ಲ ಎಂದ ಬೆಂಗಳೂರು ಜಿಲ್ಲಾಧಿಕಾರಿ!

singapura lake: 1524 ರಲ್ಲಿ ಇತಿಹಾಸಕಾರರು ಇದನ್ನು ಕೋಟೆಯ ಪಟ್ಟಣ ಎಂದು ಕಂಡುಹಿಡಿದರು. ನೂರಾರು ವರ್ಷಗಳ ಸುದೀರ್ಘ ಅಸ್ತಿತ್ವ ಹೊಂದಿರುವ ಐತಿಹಾಸಿಕ ಸಿಂಗಾಪುರ ಪ್ರದೇಶವು 16 ನೇ ಶತಮಾನದ ಆರಂಭದಿಂದಲೂ ಜನವಸತಿ ಪ್ರದೇಶವಾಗಿದೆ.

Singapura Kere: ಸಿಂಗಾಪುರ ಕೆರೆ ಹೆಸರು ಬದಲಾವಣೆ ವಿರೋಧಿಸಿ ಮನವಿ ಬಂದಿಲ್ಲ ಎಂದ ಬೆಂಗಳೂರು ಜಿಲ್ಲಾಧಿಕಾರಿ!
ಸಿಂಗಾಪುರ ಕೆರೆ ಹೆಸರು ಬದಲಾವಣೆ ವಿವಾದ: ವಿರೋಧದ ಮನವಿ ಬಂದಿಲ್ಲ ಎಂದ ಬೆಂಗಳೂರು ಜಿಲ್ಲಾಧಿಕಾರಿ!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Nov 04, 2022 | 1:42 PM

ಬೆಂಗಳೂರು: ಸಿಂಗಾಪುರ ಕೆರೆ (Singapura Kere) ಹೆಸರು ಬದಲಾವಣೆ (Rechristening) ಬೇಡವೆಂದು ಸ್ಥಳೀಯರು ಸುಮಾತರು ದಿನಗಳಿಂದ ಆಕ್ರೋಶ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಈಗಾಗ್ಲೇ ಕೆರೆಯಲ್ಲಿ ಪಾರ್ಕ್ ನಿರ್ಮಾಣವಾಗಿದೆ. ಈಗ ಮತ್ತೊಮ್ಮೆ ಪಾರ್ಕ್ ಗೆ ಹೆಸರಿಡುವ ಅಗತ್ಯ ಇಲ್ಲ. ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಮರು ನಾಮಕರಣ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ದಿನಾಂಕ ನಿಗದಿಯಾದ ಕೂಡಲೇ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಕಾನೂನುಬಾಹಿರವಾಗಿ ಹೆಸರು ಬದಲಾವಣೆ ಕಾರ್ಯ ಬೇಡ ಎಂದಿದ್ದೇವೆ. ಈ ಕುರಿತು ಮರುಪರಿಶೀಲನೆ ನಡೆಸುವಂತೆ ಸಿಎಂ ಬೊಮ್ಮಾಯಿ ಕಚೇರಿಗೂ ಪತ್ರ ಬರೆಯಲಾಗಿದೆ. ಈಗ ಸ್ಥಳೀಯರ ಮಾತಿಗೆ ಮನ್ನಣೆ ಕೊಡದೆ ಹೆಸರು ಬದಲಾವಣೆಗೆ (Renaming) ಮುಂದಾಗಿದ್ದಾರೆ. ಹೆಸರು ಬದಲಾದ್ರೆ ಕಾನೂನಾತ್ಮಕವಾಗಿ ಹೋರಾಟ ಮಾಡ್ತೀವಿ ಎಂದು ಸಿಂಗಾಪುರ ನಿವಾಸಿಗಳು ಎಚ್ಚರಿಕೆಯ ದನಿಯಲ್ಲಿ ಸರ್ಕಾರದ ಗಮನ ಸೆಳೆದಿದ್ದಾರೆ.

ಸಿಂಗಾಪುರ (Singapura) ಕೆರೆಗೆ ಅಂಬೇಡ್ಕರ್ ಕೆರೆ (Ambedkar Kere) ಎಂದು ಮರುನಾಮಕರಣ ಮುನ್ನೆಲೆ ನ. 6ರಂದು ಸಿಎಂ ಬೊಮ್ಮಾಯಿಯಿಂದ ಕಾರ್ಯಕ್ರಮ ಉದ್ಘಾಟನೆ ಇರುವುದರಿಂದ ಸಿಂಗಾಪುರ ಕೆರೆ ಬಳಿ ಕಾರ್ಯಕ್ರಮಕ್ಕೆ ಭರದಿಂದ ಸಿದ್ದತೆ ಸಾಗುತ್ತಿದೆ. ಸಿದ್ದತೆಗಳ ಪರಿಶೀಲನೆಗೆ ಸ್ವತಃ ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀನಿವಾಸ್ ಆಗಮಿಸಿದ್ದಾರೆ.

ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರಿಡಲು ತೀರ್ಮಾನ:

ಇದೇ ವೇಳೆ, ಕೆರೆ ಹೆಸರು ಬದಲಾವಣೆ ಕುರಿತಾದ ವಿರೋಧದ ಮನವಿ ಬಂದಿಲ್ಲ. ಈ ಕುರಿತು ಜಿಲ್ಲಾಡಳಿತಕ್ಕೆ ಯಾವುದೇ ದೂರು ಬಂದಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರಿಡಲು ತೀರ್ಮಾನ ಆಗಿದೆ. ಭಾನುವಾರ ಸಿಎಂ ಬೊಮ್ಮಾಯಿ ಉದ್ಘಾಟನೆ ನೆರವೇರಿಸಲಿದ್ದಾರೆ. ಇದು ಕಂದಾಯ ಇಲಾಖೆಯ ಸ್ವತ್ತಾದ್ರೂ ಬಿಬಿಎಂಪಿ ನಿರ್ವಹಣೆ ಮಾಡ್ತಿದೆ. ಈ ಕೆರೆಗೆ ಹೆಸರಿಡುವ ಅಧಿಕಾರ ಬಿಬಿಎಂಪಿಗೆ ಇದೆ. ದೂರು ಬಂದ ಸಂದರ್ಭದಲ್ಲಿ ಪರಿಶೀಲನೆ ನಡೆಸಲಾಗುತ್ತೆ ಎಂದು ಟಿವಿ 9 ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀನಿವಾಸ್ ಹೇಳಿದ್ದಾರೆ.

16 ನೇ ಶತಮಾನದಿಂದಲೂ ಸಿಂಗಾಪುರ ಜನವಸತಿ ಪ್ರದೇಶ:

ಇನ್ನು, ಬೆಂಗಳೂರು ಉತ್ತರ ಭಾಗದಲ್ಲಿರುವ ಸಿಂಗಾಪುರದ ಇತಿಹಾಸವನ್ನು ಕೆದಕಿದಾಗ… 1524 ರಲ್ಲಿ ಇತಿಹಾಸಕಾರರು ಇದನ್ನು ಕೋಟೆಯ ಪಟ್ಟಣ ಎಂದು ಕಂಡುಹಿಡಿದರು. ನೂರಾರು ವರ್ಷಗಳ ಸುದೀರ್ಘ ಅಸ್ತಿತ್ವ ಹೊಂದಿರುವ ಐತಿಹಾಸಿಕ ಸಿಂಗಾಪುರ ಪ್ರದೇಶವು 16 ನೇ ಶತಮಾನದ ಆರಂಭದಿಂದಲೂ ಜನವಸತಿ ಪ್ರದೇಶವಾಗಿದೆ. ಸಿಂಗಾಪುರ ವರದರಾಜಸ್ವಾಮಿ ದೇವಸ್ಥಾನ ಇಲ್ಲಿದೆ.

Published On - 1:37 pm, Fri, 4 November 22

ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ
VIDEO: ಆಂಬ್ಯುಲೆನ್ಸ್​ಗೆ ಕರೆ ಮಾಡಿ, ಆದರೆ ಅದು ನನಗಲ್ಲ..!
VIDEO: ಆಂಬ್ಯುಲೆನ್ಸ್​ಗೆ ಕರೆ ಮಾಡಿ, ಆದರೆ ಅದು ನನಗಲ್ಲ..!