ದಂಧೆ, ಭ್ರಷ್ಟಾಚಾರ ಆರೋಪ: ಕೊಡಿಗೇಹಳ್ಳಿ ಠಾಣೆ ಇನ್​ಸ್ಪೆಕ್ಟರ್ ವಿರುದ್ಧ ದೂರು ನೀಡಿದ ಠಾಣೆ ಸಿಬ್ಬಂದಿ

ತನ್ನ ವಿರುದ್ಧ ಡಿಸಿಪಿಗೆ ದೂರು ನೀಡಿದ ಠಾಣೆ ಸಿಬ್ಬಂದಿಗಳ ಬಳಿ ಕೊಡಿಗೆಹಳ್ಳಿ ಇನ್​ಸ್ಪೆಕ್ಟರ್, ಡಿಸಿಪಿಯನ್ನೇ ಎತ್ತಂಗಡಿ ಮಾಡಿಸುವುದಾಗಿ ಸವಾಲು ಹಾಕಿದ್ದಾರೆ.

ದಂಧೆ, ಭ್ರಷ್ಟಾಚಾರ ಆರೋಪ: ಕೊಡಿಗೇಹಳ್ಳಿ ಠಾಣೆ ಇನ್​ಸ್ಪೆಕ್ಟರ್ ವಿರುದ್ಧ ದೂರು ನೀಡಿದ ಠಾಣೆ ಸಿಬ್ಬಂದಿ
ಇಸ್ಪೀಟ್​ ಅಡ್ಡೆ ನಡೆಸುತ್ತಿದ್ದವನಿಂದ 2 ಲಕ್ಷ ವಸೂಲಿ ಕೊಡಿಗೆಹಳ್ಳಿ ಠಾಣೆ ಇನ್​ಸ್ಪೆಕ್ಟರ್ ವಿರುದ್ಧ ದೂರು ನೀಡಿದ ಸಿಬ್ಬಂದಿ
Follow us
TV9 Web
| Updated By: Rakesh Nayak Manchi

Updated on: Nov 04, 2022 | 12:43 PM

ಬೆಂಗಳೂರು: ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಇನ್​ಸ್ಪೆಕ್ಟರ್​ ರಾಜಣ್ಣನವರು ನಡೆಸುತ್ತಿರುವ ದಂಧೆಗಳು ಮತ್ತು ಭ್ರಷ್ಟಾಚಾರದ ಬಗ್ಗೆ ಅದೇ ಠಾಣೆಯ ಸಿಬ್ಬಂದಿಯೊಬ್ಬರು ಡಿಸಿಪಿಗೆ ದೂರು ನೀಡಿದ್ದಾರೆ. ಈ ವಿಚಾರ ತಿಳಿದ ರಾಜಣ್ಣ, ಡಿಸಿಪಿಯನ್ನೇ ಎತ್ತಂಗಡಿ ಮಾಡಿಸುವುದಾಗಿ ಸವಾಲು ಹಾಕಿದ್ದಾರೆ. ಡಿಸಿಪಿ ಅನೂಪ್ ಶೆಟ್ಟಿ ಎತ್ತಂಗಡಿ ಮಾಡಿಸಿ ಅವರ ಸ್ಥಾನಕ್ಕೆ ಸಾರಾ ಫಾತಿಮಾ ಅವರನ್ನು ಕೂರಿಸುವುದಾಗಿ ಸವಾಲು ಹಾಕಿದ್ದಾರೆ. ಸದ್ಯದಲ್ಲೇ ಡಿಸಿಪಿ ಅನೂಪ್ ಶೆಟ್ಟಿ ವರ್ಗಾವಣೆ ಆಗುತ್ತದೆ, ನಂತರ ನಾನು ಹೇಗೆ ಬೇಕಾದರೂ ಇರಬಹುದು, ಡಿಸಿಪಿ ವರ್ಗಾವಣೆ ಮಾಡಿಸುತ್ತಿರುವುದು ನಾನೇ ಎಂದು ರಾಜಣ್ಣ ಹೇಳಿರುವುದಾಗಿ ಹೆಸರು ಹೇಳಲಿಚ್ಚಿಸದ ಪೊಲೀಸ್ ಠಾಣಾ ಸಿಬ್ಬಂದಿಗಳಿಂದಲೇ ಮಾಹಿತಿ ಹೊರಬಿದ್ದಿದೆ.

ಬೆಂಗಳೂರಿನ ಕೆನರಾ ಬ್ಯಾಂಕ್​ ಲೇಔಟ್​ನಲ್ಲಿರುವ ಇಸ್ಪೀಟ್​ ಅಡ್ಡೆ ನಡೆಸುತ್ತಿದ್ದ ವೆಂಕಟೇಶ್​ನಿಂದ ರಾಜಣ್ಣ 2ಲಕ್ಷ ಪಡೆದ ಆರೋಪವಿದೆ. ಅಲ್ಲದೆ ಕೇಬಲ್ ತಗುಲಿ ವ್ಯಕ್ತಿ ಮೃತಪಟ್ಟಿದ್ದ ಪ್ರಕರಣದಲ್ಲಿ ಏರ್​ಟೆಲ್​ ಬ್ರಾಡ್​ಬ್ಯಾಂಡ್​ ಉಸ್ತುವಾರಿ ಸುರೇಶ್​ಗೆ ಬೆದರಿಕೆ ಹಾಕಿದ್ದಲ್ಲದೆ 15 ಲಕ್ಷ ಹಣ ಕೊಡದಿದ್ದರೆ ಕೊಲೆ ಕೇಸ್ ದಾಖಲಿಸುವುದಾಗಿ ಧಮ್ಕಿ ಹಾಕಿದ್ದಾರೆ. ಈ ವೇಳೆ ಮೃತನ ಕುಟುಂಬಕ್ಕೆ 10 ಲಕ್ಷ, ನಿಮಗೆ 5 ಲಕ್ಷ ಕೊಡುವೆ ಎಂದು ಸುರೇಶ್ ಹೇಳಿದ್ದಾರೆ. ಇದಕ್ಕೆ ನನಗೆ 10 ಲಕ್ಷ, ಮೃತನ ಕುಟುಂಬಕ್ಕೆ 5 ಲಕ್ಷ ಕೊಡು ಎಂದು ರಾಜಣ್ಣ ಹೇಳಿದ್ದಾನೆ. ಇದರಿಂದ ಬೇಸತ್ತ ಸುರೇಶ್, ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ದಾಳಿ ನಡೆಸುವ ದಿನ ಲೋಕಾಯುಕ್ತ ಸಂಸ್ಥೆಯಿಂದ ಯಾರೋ ಒಬ್ಬರು ಕರೆ ಮಾಡಿ ಮಾಹಿತಿ ನೀಡುತ್ತಿದ್ದಂತೆ ರಾಜಣ್ಣ, ಸುರೇಶ್​ನನ್ನು ಯಾರು ಕೂಡ ಮಾತನಾಡಿಸಬಾರದು ಎಂದು ಠಾಣೆ ಸಿಬ್ಬಂದಿಗೆ ಸೂಚಿಸಿದ್ದಾರೆ. ಈ ವಿಚಾರವಾಗಿ ಠಾಣೆ ಸಿಬ್ಬಂದಿಯೊಬ್ಬರು ಡಿಸಿಪಿ ಅನೂಪ್​ ಶೆಟ್ಟಿಗೆ ದೂರು ನೀಡಿದ್ದಾರೆ.

ದೂರು ನೀಡಿದ ವಿಚಾರ ತಿಳಿದ ರಾಜಣ್ಣ, ಡಿಸಿಪಿ ಅನೂಪ್​ ಶೆಟ್ಟಿಯನ್ನು ಎತ್ತಂಗಡಿ ಮಾಡಿಸುತ್ತೇನೆ, ಅವರ ಜಾಗಕ್ಕೆ ಸಾರಾ ಫಾತಿಮಾರನ್ನು ಕೂರಿಸುತ್ತೇವೆ. ಸದ್ಯದಲ್ಲೇ ಡಿಸಿಪಿ ಅನೂಪ್ ಶೆಟ್ಟಿ ವರ್ಗಾವಣೆ ಆಗುತ್ತದೆ. ವರ್ಗಾವಣೆ ಮಾಡಿಸುವುದೇ ನಾನು, ನಂತರ ನಾನು ಹೇಗೆ ಬೇಕಾದರೂ ಇರಬಹುದು ಎಂದು ರಾಜಣ್ಣ ಹೇಳಿದ್ದಾರೆ. ಸದ್ಯ ರಾಜಣ್ಣ ವಿರುದ್ಧ ದೂರು ಡಿಸಿಪಿ ಅನೂಪ್ ಶೆಟ್ಟಿ ಕೈ ಸೇರಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್