Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Power Cut ಬೆಂಗಳೂರಿನಲ್ಲಿ ಈ ವಾರಾಂತ್ಯ ಯಾವೆಲ್ಲ ಪ್ರದೇಶದಲ್ಲಿ ಪವರ್ ಕಟ್? ಇಲ್ಲಿದೆ ಪಟ್ಟಿ

ಇವುಗಳಲ್ಲಿ ಹೆಚ್ಚಿನ ಕಾರ್ಯ ಬೆಳಿಗ್ಗೆ 10 ರಿಂದ ಸಂಜೆ 4 ರ ನಡುವೆ ನಡೆಯಲಿದೆ. ಹಾಗಾಗಿ ಶನಿವಾರ ಮತ್ತು ಭಾನುವಾರದಂದು ಬೆಂಗಳೂರಿನ ಕೆಲವು ಭಾಗಗಳಲ್ಲಿ ವಿದ್ಯುತ್ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.

Bengaluru Power Cut ಬೆಂಗಳೂರಿನಲ್ಲಿ ಈ ವಾರಾಂತ್ಯ ಯಾವೆಲ್ಲ ಪ್ರದೇಶದಲ್ಲಿ ಪವರ್ ಕಟ್? ಇಲ್ಲಿದೆ ಪಟ್ಟಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Nov 04, 2022 | 12:42 PM

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM), ನವೆಂಬರ್‌ನಲ್ಲಿ ನಿಗದಿತ ವಿದ್ಯುತ್ ಕಡಿತವನ್ನು ಸೂಚಿಸುವ ಹೊಸ ಡೇಟಾ ಬಿಡುಗಡೆ ಮಾಡಿದೆ. ಪೂರ್ತಿಯಾಗದ ಕೆಲವು ಯೋಜನೆಗಳು, ದುರಸ್ತಿ ಮತ್ತು ನಿರ್ವಹಣೆ ಕಾರ್ಯಗಳನ್ನು ಬೆಸ್ಕಾಂ ಮತ್ತು ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (KTPCL) ನಡೆಸುತ್ತಿರುವುದರಿಂದ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಈ ಕೆಲಸಗಳು ಹಳೇ ಟವರ್ ಮತ್ತು ಕಂಡಕ್ಟರ್‌ಗಳನ್ನು ಬಿಡುಗಡೆ ಮಾಡುವುದು ಮತ್ತು ಹೊಸದನ್ನು ಸ್ಟ್ರಿಂಗ್ ಮಾಡುವುದು ಸೇರಿವೆ. ಭವಿಷ್ಯದಲ್ಲಿ ಅಡೆತಡೆಗಳನ್ನು ತಪ್ಪಿಸಲು ಟ್ರೀ ಟ್ರಿಮ್ಮಿಂಗ್, ಜಂಪ್ ವರ್ಕ್‌ಗಳಂತಹ ನಿರ್ವಹಣೆ ಕೆಲಸಗಳನ್ನು ‘ಲೈನ್ ಕ್ಲಿಯರ್’ ಅವಧಿಯಲ್ಲಿ ತೆಗೆದುಕೊಳ್ಳಲಾಗುವುದು. ಇವುಗಳಲ್ಲಿ ಹೆಚ್ಚಿನ ಕಾರ್ಯ ಬೆಳಿಗ್ಗೆ 10 ರಿಂದ ಸಂಜೆ 4 ರ ನಡುವೆ ನಡೆಯಲಿದೆ. ಹಾಗಾಗಿ ಶನಿವಾರ ಮತ್ತು ಭಾನುವಾರದಂದು ಬೆಂಗಳೂರಿನ ಕೆಲವು ಭಾಗಗಳಲ್ಲಿ ವಿದ್ಯುತ್ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.

ಯಾವೆಲ್ಲ ಪ್ರದೇಶಗಳಲ್ಲಿ ಯಾವಾಗ ಪವರ್ ಕಟ್?

ನವೆಂಬರ್ 5, ಶನಿವಾರ ಬೆಸ್ಕಾಂ ವೃತ್ತ: ಉತ್ತರ ಮತ್ತು ರಾಮನಗರ ಬೆಸ್ಕಾಂ ವಿಭಾಗ: ಜಾಲಹಳ್ಳಿ, ಮಲ್ಲೇಶ್ವರಂ, ಹೆಬ್ಬಾಳ ಮತ್ತು ಕನಕಪುರ

ಇಲ್ಲಿ ಇರಲ್ಲ ವಿದ್ಯುತ್

ಹಾರೋಹಳ್ಳಿಯ ಕೆಲವು ಭಾಗಗಳು, ಸೋಮನಹಳ್ಳಿ – ಟಿ ಕೆ ಹಳ್ಳಿ ಲೈನ್‌ನ 220/66 ಕೆವಿ ಎಸ್‌ಸಿ, ತುಗಣಿ ಮತ್ತು ಅಗ್ರಹಾರ ಫೀಡರ್‌ಗಳು, ಮಲ್ಲೇಶ್ವರಂ, ಡಾಲರ್ಸ್ ಕಾಲೋನಿ, ನಾಗಶೀಟಿ ಹಳ್ಳಿ, ನ್ಯೂ ಬಿಇಎಲ್ ರಸ್ತೆ, ದೇವಿ ನಗರ, ಎಂಎಸ್ ಆರ್ ಎಲ್/ಓ, ಬಿಎಸ್‌ಎನ್‌ಎಲ್, ಇಸ್ರೋ ಮತ್ತು ಎಲ್ ಜಿ ಹಳ್ಳಿ, ಇಂಡಸ್ಟ್ರಿಯಲ್ ಎಸ್ಟೇಟ್, ಸಂಜಯ್ ನಗರ, ಲಿಸ್ಕ್ ಕೋಲ್ಟ್ಜೆ ಪಟೇಲ್ ಬಿ ಅಪಾರ್ಟ್‌ಮೆಂಟ್, ಆಧಾರ್ ಬಿಲ್ಡಿಂಗ್ ಮತ್ತು ಚಿಕ್ಕಮಾರನ ಹಳ್ಳಿ. ಬೆಸ್ಕಾಂ ಕಡೆಯಿಂದ ಇತರೆ ಕೇಂದ್ರಗಳಿಂದ ಪರ್ಯಾಯ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಬಹುದು ಎಂದು ಬೆಸ್ಕಾಂ ತಿಳಿಸಿದೆ.

ನವೆಂಬರ್ 6, ಭಾನುವಾರ

ಬೆಸ್ಕಾಂ ವೃತ್ತ: ರಾಮನಗರ ಮತ್ತು ಕೋಲಾರ ಬೆಸ್ಕಾಂ ವಿಭಾಗ: ಚಿಕ್ಕಬಳ್ಳಾಪುರ ಉಪವಿಭಾಗದ ವ್ಯಾಪ್ತಿಯ ಕನಕಪುರ ಮತ್ತು ಪೆರೇಸಂದ್ರ ಉಪಕೇಂದ್ರ ಈ ಪ್ರದೇಶದಲ್ಲಿ ಪವರ್ ಕಟ್ ಹಾರೋಹಳ್ಳಿಯ ಕೆಲವು ಭಾಗಗಳು, ಸೋಮನಹಳ್ಳಿ – ಟಿ ಕೆ ಹಳ್ಳಿ ಲೈನ್‌ನ 220/66 ಕೆವಿ ಎಸ್‌ಸಿ, ತುಗಣಿ ಮತ್ತು ಅಗ್ರಹಾರ ಫೀಡರ್‌ಗಳು, ಪೆರೇಸಂದ್ರ ಮತ್ತು ಚಿಕ್ಕಬಳ್ಳಾಪುರ.

Published On - 12:35 pm, Fri, 4 November 22