ಮತ್ತೆ ಹೋರ್ಡಿಂಗ್, ಜಾಹೀರಾತು ಆರ್ಭಟ ಶುರು; ಏಜೆನ್ಸಿಗಳ ಲಾಬಿಗೆ ಮಣಿದ ರಾಜ್ಯ ಸರ್ಕಾರ

| Updated By: preethi shettigar

Updated on: Jul 28, 2021 | 2:54 PM

ಜಾಹೀರಾತು ಏಜೆನ್ಸಿಗಳ ಲಾಬಿಗೆ ಮಣಿದ ರಾಜ್ಯ ಸರ್ಕಾರ. ಬೆಂಗಳೂರಿನ ಅಂದಕ್ಕೆ ಧಕ್ಕೆ ತರುತ್ತಿದ್ದ ಜಾಹೀರಾತಿಗೆ ಮತ್ತೆ ಅನುಮತಿ ನೀಡಿದೆ.

ಮತ್ತೆ ಹೋರ್ಡಿಂಗ್, ಜಾಹೀರಾತು ಆರ್ಭಟ ಶುರು; ಏಜೆನ್ಸಿಗಳ ಲಾಬಿಗೆ ಮಣಿದ ರಾಜ್ಯ ಸರ್ಕಾರ
ಸಂಗ್ರಹ ಚಿತ್ರ
Follow us on

ಬೆಂಗಳೂರು: ನಗರದಲ್ಲಿನ ಹೋರ್ಡಿಂಗ್, ಜಾಹೀರಾತು, ಬ್ಯಾನರ್​, ಗೋಡೆಗಳ ಮೇಲಿನ ಬರಹಗಳನ್ನು ಸಂಪೂರ್ಣ ಬ್ಯಾನ್​ ಮಾಡಲು ಈ ಹಿಂದೆ ಹೈಕೋರ್ಟ್ ಅಧಿಸೂಚನೆ ನೀಡಿತ್ತು. ಆದರೆ ಈಗ ಮತ್ತೆ ಏಜೆನ್ಸಿಗಳ ಲಾಬಿಗೆ ಮಣಿದ ರಾಜ್ಯ ಸರ್ಕಾರ ಹೋರ್ಡಿಂಗ್ ಹಾಗೂ ಜಾಹೀರಾತಿಗೆ( Advertisement) ಅವಕಾಶ ನೀಡಿದೆ. ಬಿಬಿಎಂಪಿ (BBMP ಜಾಹೀರಾತು ನಿಯಮ ಜಾರಿಗೆ ಅಧಿಸೂಚನೆ ನೀಡಿದ್ದು, ನಗರಾಭಿವೃದ್ಧಿ ಇಲಾಖೆ ಅಧಿಕೃತವಾಗಿ ಸೂಚನೆ ಪ್ರಕಟ ಮಾಡಿದೆ. ಜಾಹೀರಾತು ಏಜೆನ್ಸಿಗಳ ಲಾಬಿಗೆ ಮಣಿದ ರಾಜ್ಯ ಸರ್ಕಾರ. ಬೆಂಗಳೂರಿನ ಅಂದಕ್ಕೆ ಧಕ್ಕೆ ತರುತ್ತಿದ್ದ ಜಾಹೀರಾತಿಗೆ ಮತ್ತೆ ಅನುಮತಿ ನೀಡಿದೆ.

ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಕಣ್ಣು ಕುಕ್ಕಲಿದೆ ಜಾಹೀರಾತುಗಳು
ಬಿಬಿಎಂಪಿ ನೂತನ ಕಾಯ್ದೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಬ್ಯಾನ್ ಆಗಿದ್ದ ಜಾಹೀರಾತು ಫಲಕಗಳನ್ನು ಹಾಕಲು ಅನುಮತಿ ನೀಡಲಾಗಿದೆ. ಈ ಬಗ್ಗೆ ಸ್ಪಷ್ಟನೆ ಕೋರಿ BBMP, ಸರ್ಕಾರಕ್ಕೆ ಪತ್ರ ಬರೆದಿದೆ.ಬಿಬಿಎಂಪಿ ಜಾಹೀರಾತು ಬೈಲಾ ಪ್ರಕಾರ ಜಾಹೀರಾತು ಫಲಕಗಳನ್ನು ಹಾಕಲು ಅನುಮತಿ ಇಲ್ಲ. ಹೀಗಾಗಿ ಸಿಲಿಕಾನ್ ಸಿಟಿಯ ಅಂದ ಕಾಪಾಡಲು ಈ ಹಿಂದೆ ಎಲ್ಲೆಂದರಲ್ಲಿ ಜಾಹೀರಾತು ಫಲಕಗಳನ್ನು ಅಂಟಿಸುವಂತಿಲ್ಲ ಎಂದು ಬಿಬಿಎಂಪಿ ತಿಳಿಸಿದ್ದು ಜಾಹೀರಾತು ಫಲಕ ಅಂಟಿಸುವುದನ್ನು ಬ್ಯಾನ್ ಮಾಡಿತ್ತು. ಆದರೆ ಈಗ ಬಿಬಿಎಂಪಿಯ ನೂತನ ಕಾಯ್ದೆ ಜಾರಿಯಾಗಿದ್ದು ಇದರ ಪ್ರಕಾರ ಬ್ಯಾನ್ ಆಗಿದ್ದ ಜಾಹೀರಾತು ಫಲಕಗಳನ್ನು ಹಾಕಲು ಅನುಮತಿ ಇದೆ.

ಬಿಬಿಎಂಪಿ ಆಯುಕ್ತರ ಅನುಮತಿ ಮೇಲೆ ಜಾಹಿರಾತು ಫಲಕ ಹಾಕಲು ಸರ್ಕಾರ ಗ್ರಿನ್ ಸಿಗ್ನಲ್ ನೀಡಿದೆ. ಹೀಗಾಗಿ ಈ ನಿರ್ಧಾರ ಈಗ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ. ಆದ ಕಾರಣ ಜಾಹೀರಾತು ಹಾಕುವುದಕ್ಕೆ ಅನುಮತಿ ನೀಡಬೇಕಾ? ಬೇಡವಾ? ಎಂಬುವುದರ ಬಗ್ಗೆ ಸ್ಪಷ್ಟನೆ ಕೋರಿ ಸರ್ಕಾರಕ್ಕೆ ಬಿಬಿಎಂಪಿ ಪತ್ರ ಬರೆದಿದೆ.
ಇದನ್ನೂ ಓದಿ:
ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಕಣ್ಣು ಕುಕ್ಕಲಿದೆ ಜಾಹೀರಾತುಗಳು

ಚುನಾವಣೆಯ ಸಮಯದಲ್ಲಿ ಬಳಸುವ ಹ್ಯಾಶ್​ಟ್ಯಾಗ್​ಗಳನ್ನು ರಾಜಕೀಯ ಜಾಹಿರಾತುಗಳಾಗಿ ಪರಿಗಣಿಸಬೇಕು: ವರದಿ