ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಕಣ್ಣು ಕುಕ್ಕಲಿದೆ ಜಾಹೀರಾತುಗಳು

ಬಿಬಿಎಂಪಿ ಜಾಹೀರಾತು ಬೈಲಾ ಪ್ರಕಾರ ಜಾಹೀರಾತು ಫಲಕಗಳನ್ನು ಹಾಕಲು ಅನುಮತಿ ಇಲ್ಲ. ಹೀಗಾಗಿ ಸಿಲಿಕಾನ್ ಸಿಟಿಯ ಅಂದ ಕಾಪಾಡಲು ಈ ಹಿಂದೆ ಎಲ್ಲೆಂದರಲ್ಲಿ ಜಾಹೀರಾತು ಫಲಕಗಳನ್ನು ಅಂಟಿಸುವಂತಿಲ್ಲ ಎಂದು ಬಿಬಿಎಂಪಿ ತಿಳಿಸಿದ್ದು ಜಾಹೀರಾತು ಫಲಕ ಅಂಟಿಸುವುದನ್ನು ಬ್ಯಾನ್ ಮಾಡಿತ್ತು. ಆದರೆ ಈಗ ಬಿಬಿಎಂಪಿಯ ನೂತನ ಕಾಯ್ದೆ ಜಾರಿಯಾಗಿದ್ದು ಇದರ ಪ್ರಕಾರ ಬ್ಯಾನ್ ಆಗಿದ್ದ ಜಾಹೀರಾತು ಫಲಕಗಳನ್ನು ಹಾಕಲು ಅನುಮತಿ ಇದೆ.

ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಕಣ್ಣು ಕುಕ್ಕಲಿದೆ ಜಾಹೀರಾತುಗಳು
Follow us
| Updated By: ಸಾಧು ಶ್ರೀನಾಥ್​

Updated on: Jan 15, 2021 | 10:27 AM

ಬೆಂಗಳೂರು: ಬಿಬಿಎಂಪಿ ನೂತನ ಕಾಯ್ದೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಬ್ಯಾನ್ ಆಗಿದ್ದ ಜಾಹೀರಾತು ಫಲಕಗಳನ್ನು ಹಾಕಲು ಅನುಮತಿ ನೀಡಲಾಗಿದೆ. ಈ ಬಗ್ಗೆ ಸ್ಪಷ್ಟನೆ ಕೋರಿ BBMP, ಸರ್ಕಾರಕ್ಕೆ ಪತ್ರ ಬರೆದಿದೆ.

ಬಿಬಿಎಂಪಿ ಜಾಹೀರಾತು ಬೈಲಾ ಪ್ರಕಾರ ಜಾಹೀರಾತು ಫಲಕಗಳನ್ನು ಹಾಕಲು ಅನುಮತಿ ಇಲ್ಲ. ಹೀಗಾಗಿ ಸಿಲಿಕಾನ್ ಸಿಟಿಯ ಅಂದ ಕಾಪಾಡಲು ಈ ಹಿಂದೆ ಎಲ್ಲೆಂದರಲ್ಲಿ ಜಾಹೀರಾತು ಫಲಕಗಳನ್ನು ಅಂಟಿಸುವಂತಿಲ್ಲ ಎಂದು ಬಿಬಿಎಂಪಿ ತಿಳಿಸಿದ್ದು ಜಾಹೀರಾತು ಫಲಕ ಅಂಟಿಸುವುದನ್ನು ಬ್ಯಾನ್ ಮಾಡಿತ್ತು. ಆದರೆ ಈಗ ಬಿಬಿಎಂಪಿಯ ನೂತನ ಕಾಯ್ದೆ ಜಾರಿಯಾಗಿದ್ದು ಇದರ ಪ್ರಕಾರ ಬ್ಯಾನ್ ಆಗಿದ್ದ ಜಾಹೀರಾತು ಫಲಕಗಳನ್ನು ಹಾಕಲು ಅನುಮತಿ ಇದೆ.

ಬಿಬಿಎಂಪಿ ಆಯುಕ್ತರ ಅನುಮತಿ ಮೇಲೆ ಜಾಹಿರಾತು ಫಲಕ ಹಾಕಲು ಸರ್ಕಾರ ಗ್ರಿನ್ ಸಿಗ್ನಲ್ ನೀಡಿದೆ. ಹೀಗಾಗಿ ಈ ನಿರ್ಧಾರ ಈಗ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ. ಆದ ಕಾರಣ ಜಾಹೀರಾತು ಹಾಕುವುದಕ್ಕೆ ಅನುಮತಿ ನೀಡಬೇಕಾ? ಬೇಡವಾ? ಎಂಬುವುದರ ಬಗ್ಗೆ ಸ್ಪಷ್ಟನೆ ಕೋರಿ ಸರ್ಕಾರಕ್ಕೆ ಬಿಬಿಎಂಪಿ ಪತ್ರ ಬರೆದಿದೆ.

ಮತ್ತೆ ಫ್ಲೆಕ್ಸ್ ಜಾಹೀರಾತು ದುಸ್ಸಾಹಸಕ್ಕೆ ಕೈ ಹಾಕಿತಾ ಬಿಬಿಎಂಪಿ?