ನಿಯಂತ್ರಣ ತಪ್ಪಿ ಕೆರೆಗೆ ಕಾರು ಪಲ್ಟಿ: ತಾಯಿ, ಮಗಳು ಸಾವು
ಹಿಡಿತ ತಪ್ಪಿ ಕಾರು ಮಗುಚಿ ಕೆರೆಗೆ ಬಿದ್ದ ಪರಿಣಾಮ ತಾಯಿ ಮತ್ತು ಮಗಳು ಕಾರಿನಲ್ಲಿ ಸಿಲುಕಿ ಮರಣ ಹೊಂದಿರುವ ಘಟನೆ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಸಮೀಪದ ಬಾಳೆಕಾಡು ಬಳಿಯಲ್ಲಿ ನಡೆದಿದೆ.
ಕೊಡಗು: ನಿಯಂತ್ರಣ ತಪ್ಪಿ ಕಾರು ಮಗುಚಿ ಕೆರೆಗೆ ಬಿದ್ದ ಪರಿಣಾಮ ತಾಯಿ ಮತ್ತು ಮಗಳು ಕಾರಿನಲ್ಲಿ ಸಿಲುಕಿ ಮರಣ ಹೊಂದಿರುವ ಘಟನೆ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಸಮೀಪದ ಬಾಳೆಕಾಡು ಬಳಿಯಲ್ಲಿ ನಡೆದಿದೆ.
ಮಡಿಕೇರಿ ಅರಣ್ಯ ಇಲಾಖೆ ಪ್ರಥಮ ದರ್ಜೆ ಸಹಾಯಕ ವೆಂಕಟೇಶ್, ಬಬಿತಾ ಮತ್ತು ಮಗಳು ಪಲ್ಲವಿ ಕಾರಿನಲ್ಲಿ ಸುಂಟಿಕೊಪ್ಪದಿಂದ ಮಡಿಕೇರಿಗೆ ಬರುವ ವೇಳೆ ಅವಗಢ ಸಂಭವಿಸಿದೆ. ಘಟನೆ ಬಳಿಕ ವೆಂಕಟೇಶ್ ಈಜುತ್ತ ದಡ ಸೇರಿದ್ದಾರೆ. ಆದರೆ, ಪತ್ನಿ ಬಬಿತಾ ಮತ್ತು ಮಗಳು ಪಲ್ಲವಿ ಕಾರಿನಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಸುಂಟಿಕೊಪ್ಪ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕ್ರೇನ್ ಬಳಸಿ ಕೆರೆಯಿಂದ ಕಾರನ್ನು ಮೇಲೆತ್ತಲಾಗಿದೆ.
Published On - 9:27 am, Fri, 15 January 21