ಬೆಂಗಳೂರು: ವಸತಿ ಸಚಿವ ವಿ.ಸೋಮಣ್ಣ 80% ಕಮಿಷನ್ ಪಡೆಯುತ್ತಾರೆ ಎಂದು ಸಚಿವ ಸೋಮಣ್ಣ(V. Somanna) ವಿರುದ್ಧ ಸಿದ್ದರಾಮಯ್ಯ(Siddaramaiah) ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನ ಗೋವಿಂದರಾಜನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಸೋಮಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಸರ್ಕಾರ 40% ಕಮಿಷನ್ ಪಡೆಯುತ್ತೆ. ಆದ್ರೆ ವಸತಿ ಸಚಿವ ವಿ.ಸೋಮಣ್ಣ 80% ಕಮಿಷನ್ ಪಡೆಯುತ್ತಾರೆ. ಸೋಮಣ್ಣ ಹೆಸರು ಯಾಕಪ್ಪ ಹೇಳ್ತೀರಾ?, ಸುಳ್ಳುಗಾರ ಸೋಮಣ್ಣ. ಸಚಿವ ವಿ.ಸೋಮಣ್ಣ ಬಗ್ಗೆ ಚರ್ಚೆ ಮಾಡದಿರೋದೇ ಒಳ್ಳೆಯದು. ಬಡವರಿಗೆ ಮನೆ ಕಟ್ಟಿಸಿಲ್ಲ, ಆದ್ರೆ ಸೋಮಣ್ಣ 2 ಮನೆ ಕಟ್ಟಿಸ್ತಿದ್ದಾರೆ. ಸೋಮಣ್ಣ ಅಂದ್ರೇನೆ ಬರೀ ಸುಳ್ಳೇ ಎಂದು ಭಾಷಣದಲ್ಲಿ ಸಚಿವ ಸೋಮಣ್ಣ ವಿರುದ್ಧ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಇನ್ನು ಇದೇ ವೇಳೆ ತಮ್ಮ ಭಾಷಣದಲ್ಲಿ ಮಡಿಕೇರಿಯಲ್ಲಿ ಮೊಟ್ಟೆ ಎಸೆದ ಬಗ್ಗೆ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. ಮಳೆಹಾನಿ ಪ್ರದೇಶಕ್ಕೆ ನಾನು ಭೇಟಿ ನೀಡಿದಾಗ ಮೊಟ್ಟೆ ಎಸೆದರು. ಕಪ್ಪು ಬಾವುಟ ಪ್ರದರ್ಶಿಸಿ ಮೊಟ್ಟೆ ಎಸೆದರು. ಇದಕ್ಕೆ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಸಹ ಸಪೋರ್ಟ್ ಮಾಡಿದ್ರು. ಬಿಜೆಪಿಯವರು ಇನ್ನು ಕೆಲ ತಿಂಗಳು ಮಾತ್ರ ಅಧಿಕಾರದಲ್ಲಿರುತ್ತಾರೆ. ಮತ್ತೆ ನಾವು ಅಧಿಕಾರಕ್ಕೆ ಬರುತ್ತೇವೆಂದು ಪೊಲೀಸರಿಗೆ ಹೇಳಿದ್ದೇನೆ. ಒಬ್ಬ ಇನ್ಸ್‌ಪೆಕ್ಟರ್ ವರ್ಗಾವಣೆಯಾಗಲು ಲಂಚ ಕೊಡಬೇಕಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:38 pm, Sun, 28 August 22