ಇದು ರಾಜ್ಯ ರಾಜಕಾರಣದ ಸ್ಫೋಟಕ ಸುದ್ದಿ: ವಿಪಕ್ಷಗಳಿಂದ ಸಚಿವರ ಸ್ಟಿಂಗ್​​ ಆಪರೇಷನ್​​; ಸಿಎಂರಿಂದಲೇ ಮಂತ್ರಿಗಳಿಗೆ ಮಾಹಿತಿ

ಸಚಿವರ ಮೇಲೆ ಖಾಸಗಿ ಏಜೆನ್ಸಿಗಳ ಮೂಲಕ ವಿಪಕ್ಷಗಳು ಸ್ಟಿಂಗ್ ಆಪರೇಷನ್ ನಡೆಸುತ್ತಿವೆ ಎಂದು ಸಂಪುಟ ಸಭೆಯಲ್ಲಿ ಸಿಎಂ ಎಚ್ಚರಿಕೆ ನೀಡಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಸಂಚಲನ ಮೂಡಿಸಿದೆ. ಸುಮಾರು 50-52 ಅಜೆಂಡಾಗಳನ್ನು ಇಟ್ಟುಕೊಂಡು ನಿನ್ನೆ ಕ್ಯಾಬಿನೆಟ್​​ ಸಭೆ ನಡೆದಿತ್ತು. ಈ ವೇಳೆ ಮಂತ್ರಿಗಳ ಮೇಲೆ ನಡೆಯುತ್ತಿರುವ ಸ್ಟಿಂಗ್​​ ಆಪರೇಷನ್​​ ಬಗ್ಗೆ ಸಿಎಂ ಡಿಕೆಶಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಇದು ರಾಜ್ಯ ರಾಜಕಾರಣದ ಸ್ಫೋಟಕ ಸುದ್ದಿ: ವಿಪಕ್ಷಗಳಿಂದ ಸಚಿವರ ಸ್ಟಿಂಗ್​​ ಆಪರೇಷನ್​​; ಸಿಎಂರಿಂದಲೇ ಮಂತ್ರಿಗಳಿಗೆ ಮಾಹಿತಿ
ಸಿಎಂ ಡಿಕೆ ಶಿವಕುಮಾರ್​​
Edited By:

Updated on: Oct 07, 2026 | 12:59 PM

ಬೆಂಗಳೂರು, ಅಕ್ಟೋಬರ್​​ 07: ಸಿಎಂ ಡಿಕೆ ಶಿವಕುಮಾರ್​​ ನೇತೃತ್ವದಲ್ಲಿ ನಿನ್ನೆ (ಅ.6) ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಸ್ಫೋಟಕ ಮಾಹಿತಿಯೊಂದರ ಬಗ್ಗೆ ಬಿಸಿ ಬಿಸಿ ಚರ್ಚೆಯಾಗಿದೆ. ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್​​ ನಡೆಯುತ್ತಿದ್ದು, ಎಲ್ಲರೂ ಎಚ್ಚರದಿಂದಿರಿ ಎಂದು ಮುಖ್ಯಮಂತ್ರಿಗಳು ಹೇಳಿದ್ದು ಕೇಳಿ ಮಂತ್ರಿಗಳು ಥಂಡಾ ಹೊಡೆದಿದ್ದಾರೆ. ಇದು ಬಿಜೆಪಿ, JDS ಸ್ಟ್ರಾಟಜಿ ಎಂದು ಡಿಕೆಶಿ ತಿಳಿಸಿದ್ದು, ಖಾಸಗಿ ಏಜೆನ್ಸಿಗಳಿಂದ ಯಾರ ಮೇಲೆ ಸ್ಟಿಂಗ್ ನಡೆಯುತ್ತಿದೆ ಎಂಬ ಲಿಸ್ಟ್ ಸಹ ಅವರು ಬಹಿರಂಗಪಡಿಸಿದ್ದಾರೆ. ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಸಚಿವರನ್ನು ಸಿಎಂ ಅಲರ್ಟ್ ಮಾಡಿದ್ದು, ಎಲ್ಲೆಲ್ಲಿ ಓಡಾಡ್ತೀರಿ ಮತ್ತು ಯಾರನ್ನು ಭೇಟಿ ಮಾಡ್ತೀರಾ ಎಚ್ಚರದಿಂದ ಇರಿ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

‘ಪ್ರತಿಯೊಬ್ಬ ಸಚಿವರೂ ಎಚ್ಚರಿದಿಂದ ಇರಿ’

CM DK Shivakumar Warns Ministers Against Secret Sting Operations, Instructs To Be Careful

ಸುಮಾರು 50-52 ಅಜೆಂಡಾಗಳನ್ನು ಇಟ್ಟುಕೊಂಡು ನಿನ್ನೆ ಕ್ಯಾಬಿನೆಟ್​​ ಸಭೆ ನಡೆದಿತ್ತು. ಈ ವೇಳೆ ಮಂತ್ರಿಗಳ ಮೇಲೆ ನಡೆಯುತ್ತಿರುವ ಸ್ಟಿಂಗ್​​ ಆಪರೇಷನ್​​ ಬಗ್ಗೆ ಸಿಎಂ ಡಿಕೆಶಿ ಉಲ್ಲೇಖಿಸಿದ್ದಾರೆ. ವಿಪಕ್ಷಗಳು ಈ ಬಗ್ಗೆ ಕಾರ್ಯನಿರತವಾಗಿದ್ದು, ಹಾಲಿ 4-5 ಸಚಿವರನ್ನು ಬಲೆಗೆ ಬೀಳಿಸುವ ಯತ್ನ ನಡೆದಿದೆ. ಹೀಗಾಗಿ ಪ್ರತಿಯೊಬ್ಬ ಸಚಿವರೂ ಎಚ್ಚರಿದಿಂದ ಇರಬೇಕು. ನೀವು ಆಡುವ ಮಾತುಗಳು, ನಿಮ್ಮ ಚಲನವಲನಗಳು ಎಲ್ಲವೂ ದಾಖಲಾಗುತ್ತಿವೆ. ಸರ್ಕಾರಕ್ಕೆ ಮುಜುಗರ ಉಂಟುಮಾಡಬಲ್ಲ ದಾಖಲೆಗಳನ್ನು ಖಾಸಗಿ ಏಜೆನ್ಸಿಗಳ ಮೂಲಕ ಸಂಗ್ರಹಿಸಲಾಗ್ತಿದ್ದು, ಅದೇ ಮುಂದಿನ ದಿನಗಳಲ್ಲಿ ವಿಪಕ್ಷಕ್ಕೆ ದೊಡ್ಡ ಅಸ್ತ್ರವಾಗಬಹುದು ಎಂದು ಸಿಎಂ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪೊಲೀಸ್ ಕಮಿಷನರೇಟ್‌ಗಳಿಗೆ ಸಚಿವ ಸಂಪುಟ ಅನುಮೋದನೆ

ಸಚಿವರು ಎಚ್ಚರಿಕೆಯಿಂದ ಕೆಲಸ ಮಾಡಬೇಕಿದ್ದು, ನಿಮ್ಮ ಇಲಾಖೆಗಳಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚೆ ವೇಳೆಯೂ ಸೂಕ್ಷ್ಮತೆಯನ್ನು ಕಾಪಾಡಿಕೊಳ್ಳಬೇಕು. ಆಸೆ, ಆಮಿಷಗಳಿಗೆ ಬಲಿಯಾಗಿ ಯಾವುದೇ ವಿಚಾರವನ್ನು ಬಹಿರಂಗಪಡಿಸುವ ಹಂತಕ್ಕೆ ನೀವು ಹೋಗಲೇ ಬಾರದು ಎಂದು ಸಿಎಂ ಡಿಕೆಶಿ ತಿಳಿಸಿದ್ದಾರೆ. ಅಲ್ಲದೆ ಈಗಾಗಲೇ ಸ್ಟಿಂಗ್​​ ಆಪರೇಷನ್​​ಗೆ ಒಳಗಾಗಿದ್ದಾರೆ ಎಂಬ ಅನುಮಾನವಿರುವ ಸಚಿವರುಗಳ ಹೆಸರನ್ನೂ ಅವರು ಬಹಿರಂಗಪಡಿಸಿದ್ದಾರೆ. ಹೀಗಾಗಿ ಈ ಸ್ಟಿಂಗ್ ಆಪರೇಷನ್​​ ವಿಚಾರವೀಗ ಹಲವು ಮಂತ್ರಿಗಳ ಆತಂಕಕ್ಕೂ ಕಾರಣವಾಗಿದೆ. ಸಿಎಂ ಅವರೇ ಖುದ್ದಾಗಿ ಈ ಮಾಹಿತಿ ನೀಡಿರುವ ಕಾರಣ ವಿಚಾರ ಮಹತ್ವ ಪಡೆದುಕೊಂಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:35 pm, Wed, 7 October 26

ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Loading...
Unable to load recommendations.
Follow Us