ಜಿಎಸ್​ಟಿ ಮುಖ್ಯ ಅಧಿಕಾರಿ ಹೆಸರಲ್ಲಿ ವಂಚನೆ! ಅಪರಿಚಿತರ ವಿರುದ್ಧ ದೂರು ದಾಖಲು

| Updated By: sandhya thejappa

Updated on: Jun 22, 2022 | 11:20 AM

ಪರಿಶೀಲನೆ ವೇಳೆ ಚೀಫ್ ಕಮಿಷನರ್ ಗಿಫ್ಟ್ ಕಾರ್ಡ್ ಕಳಿಸಿಲ್ಲ ಎಂಬುವುದು ಬೆಳಕಿಗೆ ಬಂದಿದೆ. ಸದ್ಯ ಈ ಬಗ್ಗೆ ಪೂರ್ವ ವಿಭಾಗದ ಸಿಇಎನ್ ಠಾಣೆಯಲ್ಲಿ ರೀನಾ ಶೆಟ್ಟಿ ದೂರು ದಾಖಲಿಸಿದ್ದಾರೆ.

ಜಿಎಸ್​ಟಿ ಮುಖ್ಯ ಅಧಿಕಾರಿ ಹೆಸರಲ್ಲಿ ವಂಚನೆ! ಅಪರಿಚಿತರ ವಿರುದ್ಧ ದೂರು ದಾಖಲು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಜಿಎಸ್​ಟಿ (GST) ಮುಖ್ಯ ಆಯುಕ್ತೆ ರಂಜನಾ ಝಾ ಹೆಸರಿನಲ್ಲಿ ಅಪರಿಚಿತರು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ವಂಚಕರು (Frauds) ನಕಲಿ ವಾಟ್ಸಾಪ್ ಖಾತೆ ಸೃಷ್ಟಿಸಿ ರೀನಾ ಶೆಟ್ಟಿ ಎಂಬುವವರಿಗೆ ಅಮೇಜಾನ್ ಗಿಫ್ಟ್ ಕಾರ್ಡ್ ಕಳಿಸಿದ್ದರು. ತಮ್ಮ ಹಿರಿಯ ಅಧಿಕಾರಿ ಕಳಿಸಿದ್ದಾರೆಂದು ನಂಬಿ ರೀನಾ ಗಿಫ್ಟ್ ಕಾರ್ಡ್ ಸ್ವೀಕರಿಸಿದ್ದರು. ಬಳಿಕ ಅಪರಿಚಿತರು ರೀನಾ ಶೆಟ್ಟಿ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಪರಿಶೀಲನೆ ವೇಳೆ ಚೀಫ್ ಕಮಿಷನರ್ ಗಿಫ್ಟ್ ಕಾರ್ಡ್ ಕಳಿಸಿಲ್ಲ ಎಂಬುವುದು ಬೆಳಕಿಗೆ ಬಂದಿದೆ. ಸದ್ಯ ಈ ಬಗ್ಗೆ ಪೂರ್ವ ವಿಭಾಗದ ಸಿಇಎನ್ ಠಾಣೆಯಲ್ಲಿ ರೀನಾ ಶೆಟ್ಟಿ ದೂರು ದಾಖಲಿಸಿದ್ದಾರೆ.

ಆಪ್​ಗಳ ಮೂಲಕ ವಂಚನೆ:
ಚೀನಿ ಆಪ್​ಗಳ ಮೂಲಕ ಆನ್​ಲೈನ್​ನಲ್ಲಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಕೋಣನ ಕುಂಟೆ ಠಾಣೆ ಪೊಲೀಸರು 19 ಕೋಟಿ ಹಣವನ್ನ ಬ್ಯಾಂಕ್ ಖಾತೆಗಳಿಂದ ಫ್ರೀಜ್ ಮಾಡಿದ್ದಾರೆ. ಪ್ರಕರಣ ಸುಮಾರು ಸಂಬಂಧ 99 ಮಂದಿ ವಿರುದ್ಧ ಚಾರ್ಜ್ ಶೀಟ್ ದಾಖಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕೋಣನ ಕುಂಟೆ ವರ್ಕ್ ಫ್ರಮ್ ಹೋಂ ಕೆಲಸ ಕೊಡಿಸುವ ನೆಪದಲ್ಲಿ investment app ಪರಿಚಯಿಸಿ ಜನರಿಗೆ ಕೋಟಿ ಕೋಟಿ ವಂಚಿಸಿದ್ದಾರೆ.

ಇನ್ನು ಕೀಪ್ ಶೇರರ್ ಆಪ್ ಮೂಲಕ ಸಾವಿರಾರು ಮಂದಿಯನ್ನ ವಂಚಿಸಿದ್ದಾರೆ. 80 ಕೋಟಿಯಷ್ಟು ಹಣವನ್ನ ವರ್ಚುವಲ್ ಕರೆನ್ಸಿ ಆಗಿ ಬದಲಾಯಿಸಿ ವಿವಿಧ ಖಾತೆಗಳ ಮೂಲಕ ಚೀನಾಗೆ ಕಳುಹಿತ್ತಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ
Diganth Manchale: ಸರ್ಜರಿ ಬಳಿಕ ವಾರ್ಡ್​ಗೆ ಶಿಫ್ಟ್​ ಆದ ದಿಗಂತ್​; ಥಂಬ್ಸ್​ ಅಪ್​ ಮೂಲಕ ಸಿಗ್ನಲ್​ ನೀಡಿದ ನಟ​
ಮೈಸೂರು: ಮಗುವಿನ ಶಾಲಾ ಶೂನಲ್ಲಿ ಇತ್ತೊಂದು ಚಿಕ್ಕ ನಾಗರಹಾವು, ಸ್ನೇಕ್ ಶ್ಯಾಮ್ ಅದನ್ನು ಹಿಡಿದೊಯ್ದರು!
Presidential Election: ಎನ್​ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಝಡ್ ಪ್ಲಸ್ ಶ್ರೇಣಿಯ ಭದ್ರತೆ
Political Crisis:ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಸಂಪುಟ ಸಭೆ ಕರೆದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ

ಇದನ್ನೂ ಓದಿ: ಮೈಸೂರು: ಮಗುವಿನ ಶಾಲಾ ಶೂನಲ್ಲಿ ಇತ್ತೊಂದು ಚಿಕ್ಕ ನಾಗರಹಾವು, ಸ್ನೇಕ್ ಶ್ಯಾಮ್ ಅದನ್ನು ಹಿಡಿದೊಯ್ದರು!

ಸರಗಳ್ಳನ ಬಂಧನ:
ತುಮಕೂರು: ಪಾವಗಡ ತಾಲೂಕಿನ ವೈಎನ್ ಹೊಸಕೋಟೆ ಪೊಲೀಸರು ಸರಗಳ್ಳನನ್ನ ಬಂಧಿಸಿದ್ದಾರೆ. ಬಂಧಿತನಿಂದ 4.5 ಲಕ್ಷ ರೂ. ಮೌಲ್ಯದ 3 ಚಿನ್ನದ ಸರ ಹಾಗೂ ಬೈಕ್​ನ ವಶಕ್ಕೆ ಪಡೆದಿದ್ದಾರೆ. ರಾಜು ಬಂಧಿತ ಆರೋಪಿ ಆರೋಪಿ 2021ರಲ್ಲಿ ಶಶಿಕಲಾ ಎನ್ನುವವರ ಕೊರಳಿನಿಂದ ಸರ ಕಿತ್ತುಕೊಂಡು ಪರಾರಿಯಾಗಿದ್ದ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:10 am, Wed, 22 June 22