AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 50ರೂ.ಗಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ: ಸ್ನೇಹಿತನಿಂದಲೇ ಸ್ನೇಹಿತನಿಗೆ ಚಾಕುವಿನಿಂದ ಇರಿದು ಎಸ್ಕೇಪ್

ಕೇವಲ 50ರೂಪಾಯಿಗಾಗಿ ಶಿವಮಾಧು ಎಂಬ 24 ವರ್ಷದ ಯುವಕನನ್ನ ಆತನ ಸ್ನೇಹಿತನೇ ಆದ ಶಾಂತಕುಮಾರ್ ಚಾಕುವಿನಿಂದ ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ.

ಕೇವಲ 50ರೂ.ಗಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ: ಸ್ನೇಹಿತನಿಂದಲೇ ಸ್ನೇಹಿತನಿಗೆ ಚಾಕುವಿನಿಂದ ಇರಿದು ಎಸ್ಕೇಪ್
ಸ್ನೇಹಿತನಿಂದಲೇ ಸ್ನೇಹಿತನಿಗೆ ಚಾಕುವಿನಿಂದ ಇರಿದು ಎಸ್ಕೇಪ್
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Jun 22, 2022 | 8:07 AM

Share

ಬೆಂಗಳೂರು: ಅವರಿಬ್ಬರು ಫ್ರೆಂಡ್ಸ್. ಕ್ರಿಕೆಟ್ ಆಡಿ ಬಂದೋರು ಸೈಬರ್ ಸೆಂಟರ್ (Cyber ​​Center)​ಗೆ ಅಂತಾ ಹೋಗಿದ್ದರು. ಸೈಬರ್ ಸೆಂಟರಲ್ಲಿ ಅವ್ರಿಬ್ಬರ ಮಧ್ಯೆ ಕೇವಲ 50ರೂಪಾಯಿಗಾಗಿ ಶುರುವಾದ ಜಗಳ ಕೊಲೆ (Murder) ಯಲ್ಲಿ ಅಂತ್ಯವಾಗಿರುವಂತ ಘಟನೆ ನಗರದ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುರಬರಹಳ್ಳಿ ಸರ್ಕಲ್ ಬಳಿ ನಡೆದಿದೆ. ಕೇವಲ 50ರೂಪಾಯಿಗಾಗಿ ಶಿವಮಾದು ಎಂಬ 24 ವರ್ಷದ ಯುವಕನನ್ನ ಆತನ ಸ್ನೇಹಿತನೇ ಆದ ಶಾಂತಕುಮಾರ್ ಚಾಕುವಿನಿಂದ ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಅಂದ ಹಾಗೆ ಕೊಲೆಯಾದ ಶಿವಮಾಧು ಮತ್ತು ಆರೋಪಿ ಶಾಂತಕುಮಾರ್ ಇಬ್ಬರೂ ಸ್ನೇಹಿತರು. ಚಿಕ್ಕಂದಿನಿಂದ ಆಡಿ ಬೆಳೆದೋರು. ಇದೇ ಕುರಬರಹಳ್ಳಿ ಸರ್ಕಲ್ ಬಳಿ ಹುಟ್ಟಿ ಬೆಳೆದೋರು ಕೆಲ ವರ್ಷಗಳ ಹಿಂದೆ ಲಗ್ಗೆರೆ ಬ್ರಿಡ್ಜ್ ಬಳಿ ಶಿಫ್ಟ್ ಆಗಿದ್ದರು. ಆದರು ಹಳೆ ಅಡ್ಡ ಅಂತಾ ಆಗಾಗ ಈ ಏರಿಯಾ ಕಡೆ ಬರುತ್ತಿದ್ದರು. ಆರೋಪಿ ಜೊಮ್ಯಾಟೋ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರೆ, ಮೃತ ಶಿವಮಾದು ಆಟೋ ಡ್ರೈವರ್ ಆಗಿದ್ದ. ಎಂದಿನಂತೆ ಕುರಬರಹಳ್ಳಿ ಸರ್ಕಲ್ ಕಡೆ ಬಂದಿದ್ದ ಶಿವಮಾದು ಶಾಂತಕುಮಾರ್ ಮತ್ತು ಸ್ನೇಹಿತರು ಸರೌಂಡಿಂಗ್​ನಲ್ಲಿರೋ ಗ್ರೌಂಡ್​ವೊಂದಕ್ಕೆ ಕ್ರಿಕೆಟ್ ಆಡಲು ಹೋಗಿದ್ದಾರೆ.

ಇದನ್ನೂ ಓದಿ: Thalapathy Vijay Birthday; ‘ದಳಪತಿ’ ವಿಜಯ್​ ಹುಟ್ಟುಹಬ್ಬ: ಕಾಲಿವುಡ್ ಸ್ಟಾರ್​ ನಟನ ಕೈಯಲ್ಲಿವೆ ಇಂಟರೆಸ್ಟಿಂಗ್​ ಸಿನಿಮಾಗಳು

ಕ್ರಿಕೆಟ್ ಆಡಿ ಬಂದವರೇ ಏನೋ ಕೆಲಸಕ್ಕೆ ರಾತ್ರಿ 8-8.30ರ ಸುಮಾರಿಗೆ ಸರ್ಕಲ್ ಬಳಿ ಇರೋ ಸೈಬರ್ ಸೆಂಟರ್​ವೊಂದಕ್ಕೆ ಹೋಗಿದ್ದಾರೆ. ಈ ವೇಳೆ ಶಾಂತಕುಮಾರ್ ಜೋಬಿಂದ ಶಿವಮಾದು 50ರೂಪಾಯಿ ತೆಗೆದಿದ್ದಾನೆ. ಯಾಕೋ 50ರೂಪಾಯಿ ತಗೊಂಡ್ ಕೊಡು ಅಂತಾ ಕೇಳಿದ್ದ ಶಾಂತಕುಮಾರ್​ಗೆ ಶಿವಮಾದು ಕೊಡಲ್ಲ ಎಂದಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಜಗಳವಾಗಿದ್ದು ಜೊತೆಯಲ್ಲೇ ತಂದಿದ್ದ ಚಾಕು ತಗೊಂಡು ಆರೋಪಿ ಶಾಂತಕುಮಾರ್ ಶಿವಮಾಧು ಎದೆಗೆ ಚುಚ್ಚಿ ಎಸ್ಕೇಪ್ ಆಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಿದ್ದಿದ್ದ ಶಿವಮಾದುನನ್ನ ಸ್ನೇಹಿತರು ಸ್ಥಳೀಯ ಆಸ್ಪತ್ರೆಗೆ ಸೇರಿಸಿದರು. ಅಷ್ಟರಲ್ಲೇ ಸಾವನ್ನಪ್ಪಿದ್ದಾನೆ.

ಈಗಾಗಲೇ ಘಟನಾ ಸ್ಥಳಕ್ಕೆ ಬಂದು ಬಸವೇಶ್ವರ ನಗರ ಪೊಲೀಸರು ಪರಿಶಿಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ಫುಟೇಜ್ ಆಧರಿಸಿ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಇಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಯಾಕೆ ಚಾಕು ಕ್ಯಾರಿ ಮಾಡ್ತಿದ್ದ..? ಈ ರೀತಿ ಡೆಲಿವರಿ ಬಾಯ್​ಗಳು ಚಾಕು ಕ್ಯಾರಿ ಮಾಡಿದರೆ ಆರ್ಡರ್ ಮಾಡೋರಿಗೆ ಅದೆಷ್ಟು ಸೇಫ್ಟಿ ಅನ್ನೋ ಪ್ರಶ್ನೆ ಮತ್ತು ಆತಂಕ ಸದ್ಯ ಮೂಡುತ್ತಿದೆ. ಎಲ್ಲವೂ ತನಿಖೆ ನಂತರವೇ ಹೊರ ಬರಬೇಕಿದೆ.

ವರದಿ: ಪ್ರಜ್ವಲ್ ಟಿವಿ 9

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 8:03 am, Wed, 22 June 22