ಪರಿಷ್ಕರಣೆಗೊಂಡ ಪುಸ್ತಕಗಳನ್ನ ಹಿಂಪಡೆಯುವಂತೆ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದ ಹೆಚ್.ಡಿ.ದೇವೇಗೌಡ
ಮರು ಪರಿಷ್ಕರಣೆಗೆ ನೇಮಿಸಿದ ಅಧ್ಯಕ್ಷರು ನಾಡಗೀತೆಗೆ ಅಪಮಾನ ಮಾಡಿದ್ದಾರೆ. ಇದು ರಾಷ್ಟ್ರಕವಿ ಕುವೆಂಪು ಅವರಿಗೆ ಮಾಡಿದ ಅವಮಾನ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನೂ ಹಂಗಿಸಿದ್ದಾರೆ. ಇಂತಹ ವ್ಯಕ್ತಿಯ ಅಧ್ಯಕ್ಷತೆಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ್ದು ಸರಿಯಲ್ಲ.
ಬೆಂಗಳೂರು: ರಾಜ್ಯದಲ್ಲಿ ಕಿಚ್ಚಿನಂತೆ ಹೆಚ್ಚುತ್ತಿರುವ ಪಠ್ಯ ಪುಸ್ತಕ ಪರಿಷ್ಕರಣೆ(Text Book Revision) ವಿವಾದ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿಗೆ(Basavaraj Bommai) ಹೆಚ್.ಡಿ.ದೇವೇಗೌಡ(HD DeveGowda) ಪತ್ರ ಬರೆದು ಪರಿಷ್ಕರಣೆಗೊಂಡ ಪುಸ್ತಕಗಳನ್ನ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ.
ಮರು ಪರಿಷ್ಕರಣೆಗೆ ನೇಮಿಸಿದ ಅಧ್ಯಕ್ಷರು ನಾಡಗೀತೆಗೆ ಅಪಮಾನ ಮಾಡಿದ್ದಾರೆ. ಇದು ರಾಷ್ಟ್ರಕವಿ ಕುವೆಂಪು ಅವರಿಗೆ ಮಾಡಿದ ಅವಮಾನ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನೂ ಹಂಗಿಸಿದ್ದಾರೆ. ಇಂತಹ ವ್ಯಕ್ತಿಯ ಅಧ್ಯಕ್ಷತೆಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ್ದು ಸರಿಯಲ್ಲ. ಕುವೆಂಪು ಭಾವಚಿತ್ರ ಮತ್ತು ಬಸವಣ್ಣನವರ ಆಶಯವುಳ್ಳ ಭಾಗವನ್ನು ಕೈ ಬಿಡಲಾಗಿದೆ. ಸಿದ್ಧಗಂಗೆ ಮತ್ತು ಆದಿಚುಂಚನಗಿರಿ ಶ್ರೀಗಳ ಸೇವೆಯ ವಿವರಗಳನ್ನು ತೆಗೆಯಲಾಗಿದೆ. ಅಂಬೇಡ್ಕರ್ ಅವರಿಗೆ ‘ಸಂವಿಧಾನ ಶಿಲ್ಪಿ’ ಎಂದಿದ್ದ ವಿಶೇಷಣವನ್ನು ತೆಗೆಯಲಾಗಿದೆ. ಅಕ್ಕ, ಕನಕ, ಪುರಂದರ, ಶರೀಫ ಅವರಂತಹ ಮಹಾನ್ ದಾರ್ಶನಿಕ ಸಂತರ ಪಠ್ಯಗಳನ್ನೇ ತೆಗೆಯಲಾಗಿದೆ. ಕೆಂಪೇಗೌಡ, ಸುರಪುರ ನಾಯಕರ ವಿಷಯಗಳನ್ನು ಕಡಿತಗೊಳಿಸಲಾಗಿದೆ. ಡಾ.ಅಂಬೇಡ್ಕರ್ ಮತ್ತು ಕುವೆಂಪು ಅವರು ಸಾರಿದ ಸಾಮಾಜಿಕ ನ್ಯಾಯ, ಸಮಾನತೆ, ಜಾತ್ಯತೀತತೆ ಮತ್ತು ವಿಶ್ವಮಾನವತ್ವದ ಪರಿಕಲ್ಪನೆಗಳನ್ನು ಕಡೆಗಣಿಸಿರುವುದು ಮನ ಪರಿಷ್ಕರಣೆಯಲ್ಲಿ ಎದ್ದು ಕಾಣುತ್ತದೆ’ ಪಠ್ಯ ಪರಿಷ್ಕರಣೆಯಲ್ಲಿ ಇಂತಹ ಅನೇಕ ತಪ್ಪುಗಳು ಇವೆ. ಇದನ್ನೂ ಓದಿ: Crime News ಕಾಲ್ ಕನ್ವರ್ಟ್ ಅಡ್ಡೆಗಳ ಮೇಲೆ ಸೇನೆಯ ಸದರ್ನ್ ಕಮಾಂಡ್, ಸಿಸಿಬಿ ಪೊಲೀಸರ ಜಂಟಿ ದಾಳಿ, 2144 ಡಿವೈಸ್ ಜಪ್ತಿ
ಕೂಡಲೇ ಇದನ್ನು ಹಿಂಪಡೆದು ಹಿಂದೆ ಇದ್ದ ಬರಗೂರು ರಾಮಚಂದ್ರಪ್ಪರವರ ನೇತೃತ್ವದ 27 ಸಮಿತಿಗಳು ಪರಿಷ್ಕರಿಸಿದ ಪಠ್ಯಪುಸ್ತಕಗಳನ್ನೇ ಈ ವರ್ಷ ಮುಂದುವರೆಸುವುದು ಸೂಕ್ತ. ತಮಗೆ ಕಳುಹಿಸುತ್ತಿರುವ “ವಿಶ್ವಮಾನವ ಕುವೆಂಪು ಹೋರಾಟ ಸಮಿತಿ”ಯ ಹಕ್ಕೊತ್ತಾಯ ಪತ್ರದ ಅಂಶಗಳನ್ನು ನಾನು ಕೂಡ ಬೆಂಬಲಿಸುತ್ತಾ, ಈ ವಿಷಯವಾಗಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಶಿಸುತ್ತೇನೆ’ ಎಂದು ಪತ್ರದ ಮೂಲಕ ಸಿಎಂ ಬೊಮ್ಮಾಯಿಗೆ ದೇವೇಗೌಡರು ಮನವಿ ಮಾಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:33 pm, Tue, 21 June 22