AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Thalapathy Vijay Birthday; ‘ದಳಪತಿ’ ವಿಜಯ್​ ಹುಟ್ಟುಹಬ್ಬ: ಕಾಲಿವುಡ್ ಸ್ಟಾರ್​ ನಟನ ಕೈಯಲ್ಲಿವೆ ಇಂಟರೆಸ್ಟಿಂಗ್​ ಸಿನಿಮಾಗಳು

Happy Birthday Thalapathy Vijay: ದಳಪತಿ ವಿಜಯ್​ ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈ ಪ್ರಾಜೆಕ್ಟ್​ಗಳ ಮೇಲೆ ಅಭಿಮಾನಿಗಳು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Thalapathy Vijay Birthday; ‘ದಳಪತಿ’ ವಿಜಯ್​ ಹುಟ್ಟುಹಬ್ಬ: ಕಾಲಿವುಡ್ ಸ್ಟಾರ್​ ನಟನ ಕೈಯಲ್ಲಿವೆ ಇಂಟರೆಸ್ಟಿಂಗ್​ ಸಿನಿಮಾಗಳು
ದಳಪತಿ ವಿಜಯ್
TV9 Web
| Edited By: |

Updated on: Jun 22, 2022 | 7:34 AM

Share

ದಕ್ಷಿಣ ಭಾರತದ ಖ್ಯಾತ ನಟ ‘ದಳಪತಿ’ ವಿಜಯ್​ (Thalapathy Vijay) ಅವರ ಅಭಿಮಾನಿಗಳಿಗೆ ಜೂನ್​ 22 ಎಂದರೆ ಹಬ್ಬವೇ ಸರಿ. ಯಾಕೆಂದರೆ, ಇಂದು ವಿಜಯ್ ಹುಟ್ಟುಹಬ್ಬ (Thalapathy Vijay Birthday). ಕಾಲಿವುಡ್​ನ ಈ ಸ್ಟಾರ್​ ನಟನಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಒಂದಕ್ಕಿಂತ ಒಂದು ಭಿನ್ನ ಸಿನಿಮಾಗಳ ಮೂಲಕ ಅವರು ಜನರನ್ನು ರಂಜಿಸಿದ್ದಾರೆ. 48ನೇ ವಸಂತಕ್ಕೆ ಕಾಲಿಟ್ಟಿರುವ ದಳಪತಿ ವಿಜಯ್​ ಅವರಿಗೆ ಎಲ್ಲೆಡೆಯಿಂದ ಹುಟ್ಟುಹಬ್ಬದ ಶುಭಾಶಯಗಳು ಹರಿದುಬರುತ್ತಿವೆ. ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ವಿಶ್​ ಮಾಡುತ್ತಿದ್ದಾರೆ. ವಿಜಯ್​ ನಟಿಸಲಿರುವ ಮುಂದಿನ ಸಿನಿಮಾಗಳ ಬಗ್ಗೆ ಸಿನಿಪ್ರಿಯರಿಗೆ ಸಖತ್​ ನಿರೀಕ್ಷೆ ಇದೆ. ಆ ಬಗ್ಗೆ ಫ್ಯಾನ್ಸ್​ ಚರ್ಚೆ ಮಾಡುತ್ತಿದ್ದಾರೆ. ವಿಜಯ್​ ಅವರ ಸಿನಿಮಾಗಳ ಕುರಿತು ಬರ್ತ್​ಡೇ ಪ್ರಯುಕ್ತ ಅಪ್​ಡೇಟ್​ ಸಿಗುತ್ತಿದೆ.

2022ರ ಏಪ್ರಿಲ್​ 13ರಂದು ವಿಜಯ್​ ನಟನೆಯ ‘ಬೀಸ್ಟ್​’ ಸಿನಿಮಾ ತೆರೆಕಂಡಿತು. ಆದರೆ ಈ ಚಿತ್ರಕ್ಕೆ ನಿರೀಕ್ಷಿತ ಮಟ್ಟದ ಕಲೆಕ್ಷನ್​ ಆಗಲಿಲ್ಲ. ಬಾಕ್ಸ್​ ಆಫೀಸ್​ನಲ್ಲಿ ಬಹುಕೋಟಿ ರೂಪಾಯಿ ಕಮಾಯಿ ಮಾಡಿದರೂ ಕೂಡ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಹವಾ ಮುಂದೆ ‘ಬೀಸ್ಟ್​’ ಸದ್ದು ಕೇಳಿಸಲೇ ಇಲ್ಲ. ಅಲ್ಲದೇ ಈ ಚಿತ್ರದಲ್ಲಿ ಇರುವುದು ನೀರಸವಾದ ಕಥೆ ಎಂಬ ನೆಗೆಟಿವ್​ ವಿಮರ್ಶೆ ಕೂಡ ಕೇಳಿಬಂತು. ಹಾಗಾಗಿ ಮುಂಬರುವ ಸಿನಿಮಾಗಳ ಮೂಲಕ ಗೆಲ್ಲುವ ಅನಿವಾರ್ಯತೆ ವಿಜಯ್​ ಅವರಿಗೆ ಇದೆ.

ಇದನ್ನೂ ಓದಿ: ‘ಕೆಜಿಎಫ್​ 2’ ಎದುರು ‘ಬೀಸ್ಟ್​’ಗೆ ಹಿನ್ನಡೆ; ಚಿತ್ರರಂಗಕ್ಕೆ ದಳಪತಿ ವಿಜಯ್​ ಮಗನ ಎಂಟ್ರಿ ಬಗ್ಗೆ ಟಾಕ್​ ಶುರು

ಇದನ್ನೂ ಓದಿ
Image
‘ಕೆಜಿಎಫ್​ 2’ ಎದುರು ‘ಬೀಸ್ಟ್​’ ಸೋತರೂ ಪಾರ್ಟಿ ಮಾಡಿದ ದಳಪತಿ ವಿಜಯ್; ನಿರ್ದೇಶಕ ಹೇಳಿದ್ದೇನು?
Image
Beast Twitter Review: ‘ಬೀಸ್ಟ್’​ ನೋಡಿ ಡಿಸಾಸ್ಟರ್​ ಎಂದ ಪ್ರೇಕ್ಷಕರು; ದಳಪತಿ ವಿಜಯ್​ ಸಿನಿಮಾ ಹೇಗಿದೆ?
Image
ವಿಜಯ್​ಗೆ ಜೋಡಿ ಆಗಿದ್ದಕ್ಕೆ ರಶ್ಮಿಕಾಗೆ ಎಷ್ಟು ಖುಷಿ ಅಂತ ಮಾತಲ್ಲಿ ಹೇಳೋಕಾಗಲ್ಲ; ಫೋಟೋ ನೋಡಿ ತಿಳಿಯಬೇಕಷ್ಟೇ
Image
ದಳಪತಿ ವಿಜಯ್ 66ನೇ ಚಿತ್ರಕ್ಕೆ ರಶ್ಮಿಕಾ ನಾಯಕಿ; ಬರ್ತ್​ಡೇ ದಿನವೇ ಅಧಿಕೃತವಾಯ್ತು ಸುದ್ದಿ

‘ದಳಪತಿ’ ವಿಜಯ್​ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ 66ನೇ ಸಿನಿಮಾದ ಶೀರ್ಷಿಕೆ ಅನೌನ್ಸ್​ ಆಗಿದೆ. ಜೊತೆಗೆ ಫಸ್ಟ್​ ಲುಕ್​ ಕೂಡ ಬಿಡುಗಡೆ ಆಗಿದೆ. ಈ ಸಿನಿಮಾಗೆ ‘ವಾರಿಸು​’ ಎಂದು ಶೀರ್ಷಿಕೆ ಇಡಲಾಗಿದೆ. 67ನೇ ಚಿತ್ರದಲ್ಲಿ ಅವರು ಖ್ಯಾತ ನಿರ್ದೇಶಕ ಲೋಕೇಶ್​ ಕನಗರಾಜ್​ ಜೊತೆ ಕೈ ಜೋಡಿಸಲಿದ್ದಾರೆ. ‘ವಿಕ್ರಮ್​’ ಸಿನಿಮಾ ಮೂಲಕ ಲೋಕೇಶ್​ ಅವರು ಭರ್ಜರಿ ಖ್ಯಾತಿ ಗಳಿಸಿದ್ದಾರೆ. ಅವರ ಕೆಲಸಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅವರ ಮತ್ತು ವಿಜಯ್​ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಚಿತ್ರದ ಬಗ್ಗೆ ಸಹಜವಾಗಿಯೇ ಕೌತುಕ ನಿರ್ಮಾಣ ಆಗಿದೆ.

ಧೋನಿ ಜತೆ ವಿಜಯ್ ಸಿನಿಮಾ?

ಎಂ.ಎಸ್​. ಧೋನಿ ಅವರು ಸಿನಿಮಾ ನಿರ್ಮಾಣದಲ್ಲಿ ಆಸಕ್ತಿ ತೋರಿಸುತ್ತಿರುವ ಬಗ್ಗೆ ಈಗಾಗಲೇ ವರದಿ ಆಗಿದೆ. ಅವರು ನಿರ್ಮಾಣ ಮಾಡಲಿರುವ ಹೊಸ ಚಿತ್ರದಲ್ಲಿ ದಳಪತಿ ವಿಜಯ್​ ನಟಿಸುತ್ತಾರೆ ಎಂಬ ಗುಸುಗುಸು ಕೂಡ ಕೇಳಿಬಂದಿದೆ. ಆದರೆ ಈ ಬಗ್ಗೆ ಅಧಿಕೃತ ಘೋಷಣೆ ಆಗುವುದು ಬಾಕಿ ಇದೆ. ಇದೇ ಸಿನಿಮಾದಲ್ಲಿ ಧೋನಿ ಅವರು ಅತಿಥಿ ಪಾತ್ರ ಮಾಡುತ್ತಾರೆ ಎಂಬ ಬಗ್ಗೆ ಕೂಡ ಅಂತೆ-ಕಂತೆಗಳು ಹರಿದಾಡುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Web contact
Web contact

TV9 Kannada

Read More
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್