ಮೋದಿ ಬಂದ್ಮೇಲೆ ಬಿಜೆಪಿಯವರು ಯಾರೂ ತಪ್ಪೇ ಮಾಡಿಲ್ವಾ? ಬಿಜೆಪಿ ವಿರುದ್ಧ ಜಮೀರ್​ ಅಹ್ಮದ್​ ಖಾನ್ ಕಿಡಿ

ರಾಹುಲ್ ಗಾಂಧಿ ಇಡಿ ವಿಚಾರಣೆ ಖಂಡಿಸಿ ಪ್ರತಿಭಟನೆ ಮಾಡಿ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದು, ದಿಢೀರ್ ರಸ್ತೆ ತಡೆದು ಪ್ರತಿಭಟನೆಗೆ ಮುಂದಾದ ಶಾಸಕ ಜಮೀರ್ ಖಾನ್​ನನ್ನು ಪೊಲೀಸರು ವಶಕ್ಕೆ ಪಡೆದರು.

ಮೋದಿ ಬಂದ್ಮೇಲೆ ಬಿಜೆಪಿಯವರು ಯಾರೂ ತಪ್ಪೇ ಮಾಡಿಲ್ವಾ? ಬಿಜೆಪಿ ವಿರುದ್ಧ ಜಮೀರ್​ ಅಹ್ಮದ್​ ಖಾನ್ ಕಿಡಿ
ಜಮೀರ್​ ಅಹ್ಮದ್​ ಖಾನ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jun 22, 2022 | 1:52 PM

ಬೆಂಗಳೂರು: ನಮ್ಮ ನಾಯಕರನ್ನು ಟಾರ್ಗೆಟ್ (Target) ಮಾಡಿ ವಿಚಾರಣೆ ಮಾಡುತ್ತಿದ್ದಾರೆ. ಮೋದಿ ಬಂದ್ಮೇಲೆ ಬಿಜೆಪಿಯವರು ಯಾರೂ ತಪ್ಪೇ ಮಾಡಿಲ್ವಾ ಎಂದು ನಗರದಲ್ಲಿ ರಾಹುಲ್ ಗಾಂಧಿ ವಿಚಾರವಾಗಿ ಜಮೀರ್​ ಅಹ್ಮದ್​ ಖಾನ್ ಬಿಜೆಪಿ ವಿರುದ್ಧ ಕಿಡಿಕಾರಿದರು. ಬಿಜೆಪಿಯವರು ಯಾರೂ ತಪ್ಪೇ ಮಾಡಿಲ್ವಾ? ಡಿ.ಕೆ.ಶಿವಕುಮಾರ್, ಜಾರ್ಜ್, ನನ್ನ ಮೇಲೆ ED ದಾಳಿ ಆಯ್ತು. ಕಾಂಗ್ರೆಸ್​ ಪಕ್ಷದವರ ಮೇಲೆ ಮಾತ್ರ ಯಾಕೆ ಇಡಿ ದಾಳಿ? ನಾವು ಮನೆ ಕಟ್ಟೋದೇ ತಪ್ಪಾ ಎಂದು ಜಮೀರ್​ ಅಹ್ಮದ್ ಪ್ರಶ್ನಿಸಿದರು. ಮನೆ ಕಟ್ಟಿದ್ದನ್ನೂ ಬಿಜೆಪಿಯವರಿಗೆ ಸಹಿಸಿಕೊಳ್ಳೋದಕ್ಕಾಗಲ್ವಾ? ಅಷ್ಟರ ಮಟ್ಟಿಗೆ ಬಿಜೆಪಿಯವರು ನಮ್ಮನ್ನು ಟಾರ್ಗೆಟ್ ಮಾಡುತ್ತಾರೆ. ರಾಹುಲ್ ಗಾಂಧಿ ಹೆದರಿಸಬೇಕೆಂದು ಈ ರೀತಿ ಮಾಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Viral Video: ಚಿಕ್ನಿ ಚಮೇಲಿ ಹಾಡಿಗೆ ಕತ್ರಿನಾ ಕೈಫ್ ಅವರಂತೆ ಹೆಜ್ಜೆ ಹಾಕಿದ ವಿದೇಶಿ ವಧು

ಶಾಸಕ ಜಮೀರ್ ಖಾನ್​ ಪೊಲೀಸರ ವಶ

ಬೆಂಗಳೂರಿನಲ್ಲಿ ಕಾಂಗ್ರೆಸ್​ ಕಾರ್ಯಕರ್ತರಿಂದ ರಾಹುಲ್ ಗಾಂಧಿ ಇಡಿ ವಿಚಾರಣೆ ಖಂಡಿಸಿ ಮೈಸೂರು ರಸ್ತೆಯ ಸಿಎಆರ್​ ಮೈದಾನದ​ ಬಳಿ ಪ್ರತಿಭಟನೆ ಮಾಡಿದರು. ಬಿಜೆಪಿ ವಿರುದ್ಧ ಘೋಷಣೆ ಕೂಗಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದು, ದಿಢೀರ್ ರಸ್ತೆ ತಡೆದು ಪ್ರತಿಭಟನೆಗೆ ಮುಂದಾದ ಶಾಸಕ ಜಮೀರ್ ಖಾನ್​ನನ್ನು ಪೊಲೀಸರು ವಶಕ್ಕೆ ಪಡೆದರು. ತ್ರಿಶಂಕು ಪರಿಸ್ಥಿತಿಯಲ್ಲಿರುವ ಚಾಮರಾಜಪೇಟೆ ಮೈದಾನಕ್ಕೆ ಜಮ್ಮೀರ್ ಅಹ್ಮದ್ ಖಾನ್ ಧೀಡೀರ್ ಅಂತಾ ಭೇಟಿ ನೀಡಿದ್ದು, ಬಳಿಕ ಬಿಬಿಎಂಪಿ ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಶ್ರೀನಿವಾಸ್ ಜೊತೆ ನಿನ್ನೆ ಸಭೆ ಮಾಡಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈದ್ಗಾ ಮೈದಾನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಜಮೀರ್ ಅಹಮದ್ ಖಾನ್ ನಾಳೆ ಬಿಡುಗಡೆ ಮಾಡಲಿದ್ದಾರೆ.

ಬಂಧಿಸುವ ಸಾಧ್ಯತೆ

ಕರ್ನಾಟಕ ಪ್ರದೇಶ ಕಾಂಗ್ರೆಸ್ ನಾಯಕರೆಲ್ಲ ಆತಂಕದಲ್ಲಿರುವಂತ್ತಿದ್ದು, ಜಾರಿ ನಿರ್ದೇಶನಾಲಯವು ರಾಹುಲ್ ಗಾಂಧಿಯವರನ್ನು (Rahul Gandhi) ಪುನಃ ವಿಚಾರಣೆಗೆ ಕರೆದಿದೆ ಮತ್ತು ದೆಹಲಿಯಿಂದ ಲಭ್ಯವಾಗುತ್ತಿರುವ ಮೂಲಗಳ ಪ್ರಕಾರ ಅವರನ್ನು ಬಂಧಿಸುವ ಸಾಧ್ಯತೆಯಿದೆ. ಸಿದ್ದರಾಮಯ್ಯ ಸೇರಿದಂತೆ ಹಲವಾರು ಕೆಪಿಸಿಸಿ ನಾಯಕರು ಎಐಸಿಸಿ ಕಚೇರಿಯಲ್ಲಿ ಜಮಾಯಿಸಿದ್ದಾರೆ. ಡಿಕೆ ಶಿವಕುಮಾರ್ (DK Shivakumar) ಅವರು ಕೂಡ ಅವಸರದಲ್ಲಿ ಎಐಸಿಸಿ ಕಚೇರಿ ಕಡೆ ಹೋಗುತ್ತಿರುವುದನ್ನು ನೋಡಿದರೆ ದೊಡ್ಡ ಸಂಗತಿಯೊಂದು ನಡೆಯಲಿದೆಯೇನೋ ಎಂಬ ಅನುಮಾನ ಮೂಡುತ್ತದೆ. ಶಿವಕುಮಾರ ಮುಖದಲ್ಲಿ ಆತಂಕ ಸ್ಪಷ್ಟವಾಗಿ ಕಾಣುತ್ತಿದೆ.

ರಾಜದ್ಯ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 1:45 pm, Wed, 22 June 22

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ