ವಿದ್ಯಾರ್ಥಿಗಳು ಇನ್ನು ಮುಂದೆ ಸಿಇಟಿಗೆ ಅರ್ಜಿ ಹಾಕಲು ಕಷ್ಟ ಪಡುವ ಅಗತ್ಯವಿಲ್ಲ: ಸಚಿವ ಬಿ ಸಿ ನಾಗೇಶ್

ವಿದ್ಯಾರ್ಥಿಗಳು ಇನ್ನು ಮುಂದೆ ಸಿಇಟಿಗೆ ಅರ್ಜಿ ಹಾಕಲು ಕಷ್ಟ ಪಡುವ ಅಗತ್ಯ ಇಲ್ಲ. ಸಿಇಟಿ ಅರ್ಜಿ ಹಾಕುವಾಗ ಸ್ಯಾಟ್ಸ್ ಮಾಹಿತಿಯಿಂದ ಕೆಇಎ ಬೋರ್ಡ್​ಗೆ ಮಾಹಿತಿ ಕೊಡಲಾಗುತ್ತದೆ ಎಂದು ಸಚಿವ ಬಿ.ಸಿ. ನಾಗೇಶ್ ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿಗಳು ಇನ್ನು ಮುಂದೆ ಸಿಇಟಿಗೆ ಅರ್ಜಿ ಹಾಕಲು ಕಷ್ಟ ಪಡುವ ಅಗತ್ಯವಿಲ್ಲ: ಸಚಿವ ಬಿ ಸಿ ನಾಗೇಶ್
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ. ನಾಗೇಶ್
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Nov 25, 2022 | 4:44 PM

ಬೆಂಗಳೂರು: ವಿದ್ಯಾರ್ಥಿಗಳು ಇನ್ನು ಮುಂದೆ ಸಿಇಟಿ (CET) ಗೆ ಅರ್ಜಿ ಹಾಕಲು ಕಷ್ಟ ಪಡುವ ಅಗತ್ಯ ಇಲ್ಲ. ಸಿಇಟಿ ಅರ್ಜಿ ಹಾಕುವಾಗ ಸ್ಯಾಟ್ಸ್ ಮಾಹಿತಿಯಿಂದ ಕೆಇಎ ಬೋರ್ಡ್​ಗೆ ಮಾಹಿತಿ ಕೊಡಲಾಗುತ್ತದೆ. ಇದರ ಬಗ್ಗೆ ಇವತ್ತು ಸಭೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಜಾರಿ ಮಾಡಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ. ನಾಗೇಶ್ ಹೇಳಿದರು. ವಿಕಾಸಸೌಧದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ. ನಾಗೇಶ್ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಟ್ರೈನಿಂಗ್: ಡಾ. ಅಶ್ವಥ್ ನಾರಾಯಣ 

ಡಾ. ಅಶ್ವಥ್ ನಾರಾಯಣ ಮಾತನಾಡಿ, ಎಂಜಿನಿಯರಿಂಗ್ ಸೀಟ್​ಗಳಿಗೆ ಸಿಇಟಿ ಅರ್ಜಿ ಹಾಕುವಾಗ ವಿದ್ಯಾರ್ಥಿಗಳು ತಪ್ಪು ಮಾಹಿತಿಗಳನ್ನು ಹಾಕುತ್ತಿದ್ದರು. ಶಾಲಾ ಶಿಕ್ಷಣ ಇಲಾಖೆಯಲ್ಲಿ ಎಸ್​ಎಸ್ಎಲ್​ಸಿಯಲ್ಲಿ ಇರುವಾಗಲೇ ವಿದ್ಯಾರ್ಥಿಗಳ ಮಾಹಿತಿ ಇರಲಿದೆ. ಹೀಗಾಗಿ ದಾಖಲಾತಿ ಪರಿಶೀಲನೆ, ಅರ್ಜಿ ಸಲ್ಲಿಕೆ ಇದೆಲ್ಲವನ್ನೂ ಇಲಾಖೆಯಿಂದ ನೇರವಾಗಿ ತೆಗೆದುಕೊಳ್ಳಲು ನಿರ್ಧಾರ ಮಾಡಲಾಗಿದೆ. ಶಾಲಾ ಶಿಕ್ಷಣ ಇಲಾಖೆಯ ಸ್ಯಾಟ್ಸ್ ಮಾಹಿತಿಯಿಂದ ನಾವು ಮಾಹಿತಿ ಪಡೆದುಕೊಳ್ಳುತ್ತೇವೆ. ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ‌ಪ್ರಕ್ರಿಯೆ ಮಾಡುತ್ತೇವೆ ಎಂದರು.

ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಟ್ರೈನಿಂಗ್ ಕೊಡಲು ಮಾಸ್ಟರ್ ಟ್ರೈನರ್ಸ್​​ಗಳನ್ನು ನೇಮಕ ಮಾಡಲಾಗುತ್ತದೆ. ಪ್ರತಿ ಜಿಲ್ಲೆಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುತ್ತೇವೆ. ವಿದ್ಯಾರ್ಥಿಗಳಿಗೆ ಅನುಕೂಲ ಆಗಲು ಈ ವ್ಯವಸ್ಥೆ ಮಾಡುತ್ತೇವೆ. ಮುಂದಿನ ವರ್ಷದಿಂದಲೇ ಈ ವ್ಯವಸ್ಥೆ ಜಾರಿ ಮಾಡುತ್ತೇವೆ ಎಂದು ಸಚಿವ ಡಾ. ಅಶ್ವಥ್ ನಾರಾಯಣ ತಿಳಿಸಿದರು.

ಯುಜಿಸಿ ಆದೇಶವನ್ನು ನಾವು ಸ್ವಾಗತ ಮಾಡುತ್ತೇವೆ:

ವಿವಿಗಳು, ಪದವಿ ಕಾಲೇಜುಗಳಲ್ಲಿ ಧ್ಯಾನ ಮಾಡಲು ಯುಜಿಸಿ ಆದೇಶ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಯುಜಿಸಿ ಒಳ್ಳೆಯ ನಿರ್ಧಾರ ಮಾಡಿದೆ. ಯುಜಿಸಿ ಆದೇಶವನ್ನು ನಾವು ಸ್ವಾಗತ ಮಾಡುತ್ತೇವೆ. ಇದನ್ನು ರಾಜ್ಯದಲ್ಲೂ ಜಾರಿ ಮಾಡುತ್ತೇವೆ. ಈಗಾಗಲೇ ಯೋಗವನ್ನು ಪದವಿ ಕಾಲೇಜು, ವಿವಿಗಳಲ್ಲಿ ಕಡ್ಡಾಯ ಮಾಡಲಾಗಿದೆ. ಅದರಂತೆ ಧ್ಯಾನವನ್ನು ಕೂಡ ಅಳವಡಿಕೆ ಮಾಡಿಕೊಳ್ಳುತ್ತೇವೆ ಎಂದು ಡಾ. ಅಶ್ವಥ್ ನಾರಾಯಣ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada