ಸಬ್ ಅರ್ಬನ್ ಯೋಜನೆ ದಿ. ಅನಂತ್ ಕುಮಾರ್ ಕನಸಿನ ಕೂಸು: ಯೋಜನೆಗೆ ಅವರ ಹೆಸರಿಡಲು ಮೇಲ್ಮನೆಯಲ್ಲಿ ಬಿಜೆಪಿ ಸದಸ್ಯರ ಒತ್ತಾಯ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 21, 2022 | 4:44 PM

ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಬೆಂಗಳೂರು ಉಪನಗರ ರೈಲು ಯೋಜನೆಯನ್ನು 2026ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಸಬ್ ಅರ್ಬನ್ ಯೋಜನೆ ದಿ. ಅನಂತ್ ಕುಮಾರ್ ಕನಸಿನ ಕೂಸು: ಯೋಜನೆಗೆ ಅವರ ಹೆಸರಿಡಲು ಮೇಲ್ಮನೆಯಲ್ಲಿ ಬಿಜೆಪಿ ಸದಸ್ಯರ ಒತ್ತಾಯ
ದಿ.ಅನಂತಕುಮಾರ್
Follow us on

ಬೆಂಗಳೂರು: ಸಬ್ ಅರ್ಬನ್ ಯೋಜನೆ (sub urban rail project) ಈ ಹಿಂದೆ ಕೇಂದ್ರ ಸಚಿವರಾಗಿದ್ದ, ಕನ್ನಡಿಗ ದಿವಂಗತ ಅನಂತ್ ಕುಮಾರ್ ಅವರ ಕನಸಿನ ಕೂಸು. ಈ ಯೋಜನೆಗೆ ಅವರ ಹೆಸರಿಡಿ ಎಂದು ವಿಧಾನಪರಿಷತ್​​ನಲ್ಲಿ ಬಿಜೆಪಿ ಸದಸ್ಯರಾದ ಗೋಪಿನಾಥ್​​, ಎನ್​.ರವಿಕುಮಾರ್​ ಒತ್ತಾಯ ಮಾಡಿದರು. ಬಿಜೆಪಿ ಸದಸ್ಯರ ಮನವಿಗೆ ಸಭಾಪತಿ ಮಲ್ಕಾಪುರೆ ಧ್ವನಿಗೂಡಿಸಿದ್ದು, ಸಂಪುಟದಲ್ಲಿ ಚರ್ಚೆ ಮಾಡಿ ಅಂತಿಮ ನಿರ್ಣಯ ಕೈಗೊಳ್ಳುತ್ತೇವೆ ಎಂದು ವಿಧಾನ ಪರಿಷತ್​​ನಲ್ಲಿ ವಸತಿ ಸಚಿವ ವಿ.ಸೋಮಣ್ಣ ಸ್ಪಷ್ಟನೆ ನೀಡಿದರು. ನಾನು ಬಿಜೆಪಿ ಪಕ್ಷಕ್ಕೆ ಸೇರಲು ದಿ.ಅನಂತಕುಮಾರ್ ಕಾರಣ. ಹೆಚ್.ಎನ್.ಅನಂತ್ ಕುಮಾರ್ ಬಲಗೈ ಭಂಟ ಆರ್​​.ಅಶೋಕ್. ಅವರ ಹೆಸರು ಬಳಸಿಕೊಂಡು ಆರ್.ಅಶೋಕ್ ಮೇಲಕ್ಕೇರಿದ್ದು. ನಾನು ಉಳಿದವರೆಲ್ಲ 4, 5ನೇ ಸ್ಥಾನದಲ್ಲಿ ಎಂದು ವಿ.ಸೋಮಣ್ಣ ಹೇಳಿದರು. ದಿ.ಅನಂತಕುಮಾರ್ ಕೊನೆ ದಿನಗಳಲ್ಲಿ ಯಾರಿಗೂ ಸಿಗಲಿಲ್ಲ. ಕೊನೆ ದಿನಗಳಲ್ಲಿ ಆರ್.ಅಶೋಕನಿಗೂ ಅನಂತಕುಮಾರ್ ಸಿಗಲಿಲ್ಲ. ಸಿಕ್ಕಿದ್ರೇನಪ್ಪ ಆರ್.ಅಶೋಕ ಎಂದು ವಸತಿ ಸಚಿವ ವಿ.ಸೋಮಣ್ಣ ಕೇಳಿದರು.

ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಬೆಂಗಳೂರು ಉಪನಗರ ರೈಲು ಯೋಜನೆಯನ್ನು 2026ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಮಾರ್ಗದ ಸಿವಿಲ್‌ ಕಾಮಗಾರಿಯನ್ನು ಮಾರ್ಚ್‌ ಅಂತ್ಯದಿಂದ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ವಸತಿ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ ಈ ಹಿಂದೆಯೇ ಹೇಳಿದ್ದರು.

ಏನಿದು ಯೋಜನೆ?

ಸಬ್ ಅರ್ಬನ್ ಯೋಜನೆ ಇದು 20 ಸಾವಿರ ಕೋಟಿ ರೂಪಾಯಿ ಯೋಜನೆಯಾಗಿದ್ದು, ಕೇಂದ್ರ-ರಾಜ್ಯ ಸರ್ಕಾರಗಳು ಜಂಟಿ ಸಹಭಾಗಿತ್ವದಲ್ಲಿ ಯೋಜನೆ ಜಾರಿಗೊಳಿಸಿದೆ. ಬೆಂಗಳೂರು ನಗರ, ಸುತ್ತಮುತ್ತಲ ನಗರ, ಪಟ್ಟಣಗಳಿಗೆ ಸಬ್ ಅರ್ಬನ್ ರೈಲು ಯೋಜನೆಯಡಿ ರೈಲು ಸಂಪರ್ಕ ಕಲ್ಪಿಸಲಾಗಿದೆ. ಸಬ್ ಅರ್ಬನ್ ರೈಲು ಯೋಜನೆಯಿಂದ ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆಗೆ ಸ್ಪಲ್ಪ ಮಟ್ಟಿಗೆ ಮುಕ್ತಿ ಸಿಗಲಿದೆ.

ಮೆಜೆಸ್ಟಿಕ್, ದೇವನಹಳ್ಳಿ, ನೆಲಮಂಗಲ, ಬೈಯಪ್ಪನಹಳ್ಳಿ, ಚಿಕ್ಕಬಾಣಾವಾರ, ಕೆಂಗೇರಿ, ಕಂಟೋನ್ಮೆಂಟ್, ವೈಟ್ ಫೀಲ್ಡ್‌, ರಾಜನಕುಂಟೆ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಸಬ್ ಅರ್ಬನ್ ರೈಲುಗಳು ಸಂಚರಿಸಲಿದ್ದು, ಸಬ್ ಆರ್ಬನ್ ರೈಲಿಗೆ ನಾಲ್ಕು ಕಾರಿಡಾರ್​ಗಳೂ ಇರಲಿವೆ. ಸುಮಾರು 148 ಕಿಮೀ ಮಾರ್ಗದಲ್ಲಿ ಸಬ್ ಅರ್ಬನ್ ರೈಲುಗಳು ಸಂಚರಿಸಲಿವೆ. ಇದರಿಂದ ಬೆಂಗಳೂರಿನ ರಸ್ತೆಗಳ ಮೇಲಿನ ವಾಹನ ದಟ್ಟಣೆ ಕಡಿಮೆಯಾಗುವ ನಿರೀಕ್ಷೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 4:34 pm, Wed, 21 September 22