ಸಮಾಜದಿಂದ ಬಂದ ಹಣ ಸಮಾಜಕ್ಕೆ ಹೋಗಬೇಕು: ಇನ್ಫೋಸಿಸ್​ನಿಂದ ನಿರ್ಮಾಣವಾದ ನೂತನ ಆಸ್ಪತ್ರೆ ಉದ್ಘಾಟನೆಯಲ್ಲಿ ಸುಧಾ ಮೂರ್ತಿ

| Updated By: ganapathi bhat

Updated on: Nov 17, 2021 | 5:53 PM

Sudha Murty: ನಾನು, ಸುಧಾಮೂರ್ತಿ ಅಕ್ಕ ಒಂದೇ ಕಾಲೇಜಿನಲ್ಲಿ ಓದಿದ್ದು. ಸುಧಾಮೂರ್ತಿ ಅವರು ಟೆಲಿಕೋ ಸಂಸ್ಥೆಯಲ್ಲಿ ಕೆಲಸ ಮಾಡಿದ್ರು. ನಾನು ಕೂಡ ಟೆಲಿಕೋ ಸಂಸ್ಥೆಯಲ್ಲಿ‌ ಕೆಲಸವನ್ನು ಮಾಡಿದ್ದೆ. ಎಲ್ಲೋ ಒಂದು ಕಡೆ ನಾನು ನಮ್ಮಕ್ಕನನ್ನು ಹಿಂಬಾಲಿಸುತ್ತಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸಮಾಜದಿಂದ ಬಂದ ಹಣ ಸಮಾಜಕ್ಕೆ ಹೋಗಬೇಕು: ಇನ್ಫೋಸಿಸ್​ನಿಂದ ನಿರ್ಮಾಣವಾದ ನೂತನ ಆಸ್ಪತ್ರೆ ಉದ್ಘಾಟನೆಯಲ್ಲಿ ಸುಧಾ ಮೂರ್ತಿ
ಸುಧಾ ಮೂರ್ತಿ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಸುಧಾಮೂರ್ತಿ ಅವರು ನನ್ನ ಹಿರಿಯ ಅಕ್ಕ. ನನ್ನ ಆದರ್ಶ ಪುರುಷರು ಅಂದ್ರೆ ನಾರಾಣಯಮೂರ್ತಿ ಅವರು. ಅವರ ಬದುಕು ನಮ್ಮೆಲ್ಲರಿಗೂ ಸ್ಫೂರ್ತಿ. ನಾನು, ಸುಧಾಮೂರ್ತಿ ಅಕ್ಕ ಒಂದೇ ಕಾಲೇಜಿನಲ್ಲಿ ಓದಿದ್ದು. ಸುಧಾಮೂರ್ತಿ ಅವರು ಟೆಲಿಕೋ ಸಂಸ್ಥೆಯಲ್ಲಿ ಕೆಲಸ ಮಾಡಿದ್ರು. ನಾನು ಕೂಡ ಟೆಲಿಕೋ ಸಂಸ್ಥೆಯಲ್ಲಿ‌ ಕೆಲಸವನ್ನು ಮಾಡಿದ್ದೆ. ಎಲ್ಲೋ ಒಂದು ಕಡೆ ನಾನು ನಮ್ಮಕ್ಕನನ್ನು ಹಿಂಬಾಲಿಸುತ್ತಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಇನ್ಫೋಸಿಸ್‌ ಫೌಂಡೇಶನ್‌ನಿಂದ ನೂತನ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ.

ಜಯದೇವ ಆಸ್ಪತ್ರೆ ವಿಶ್ವದ 8ನೇ ಅದ್ಭುತ ಅನಿಸುತ್ತೆ. ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳಿಗೂ ಚಿಕಿತ್ಸೆ ನೀಡಲಾಗುತ್ತೆ. ರಾಜ್ಯದ ವಿಭಾಗೀಯ ಕೇಂದ್ರಗಳಲ್ಲಿ ನಿಮ್ಹಾನ್ಸ್​ ಹಾಗೂ ಜಯದೇವದಂತಹ ಆಸ್ಪತ್ರೆ ಪ್ರಾರಂಭಿಸುವ ಯೋಜನೆ ಇದೆ. ಮುಂದೆ ಈ ಯೋಜನೆ ಜಾರಿಗೆ ಬರುವ ನಿರೀಕ್ಷೆ ಇದೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಇದೇ ವೇಳೆ ಆರೋಗ್ಯ ಸಚಿವ ಸುಧಾಕರ್​​ರನ್ನು ಬೊಮ್ಮಾಯಿ ಹಾಡಿ ಹೊಗಳಿದ್ದಾರೆ. ಸುಧಾಕರ್ ಒಬ್ಬ ಡೈನಾಮಿಕ್ ಮಿನಿಸ್ಟರ್. ಕೊವಿಡ್ ಟೈಂನಲ್ಲಿ ಸುಧಾಕರ್ ಒಳ್ಳೆ ಕೆಲಸ ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ಆಸ್ಪತ್ರೆ ವಿಚಾರದಲ್ಲಿ ನನ್ನದು ಏನೂ ಪಾತ್ರವಿಲ್ಲ, ನನ್ದು ಪುಕ್ಕಟ್ಟೆ ಪ್ರಚಾರ. ಆಸ್ಪತ್ರೆ ಕಟ್ಟಿಸಿದ್ದವರು ಅವರು, ಕಟ್ಟಿಸಿಕೊಂಡವರು ಅವರು, ಕೆಲ್ಸ ಮಾಡೋರು ನೀವು. ನಮ್ದು ಕೆಲ್ಸ ಏನು ಇಲ್ಲ, ಬರೀ ಪುಕ್ಕಟ್ಟೆ ಪ್ರಚಾರ ಪಡೆದಿದ್ದೇನೆ ಎಂದು ಹೇಳಿದ್ದಾರೆ. ಆದರೆ ನನ್ನ ಈ ಸ್ಥಾನದ ಒಂದು ಪಾತ್ರವಿದೆ. ಅದು ಒಳ್ಳೆ ಕೆಲಸಕ್ಕೆ ಅಡ್ಡಿ ಮಾಡ್ದೆ ಸುಮ್ಮನೆ ಇದ್ದಿದ್ದು ಎಂದು ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಸಮಾಜದಿಂದ ಬಂದಂತಹ ಹಣ ಸಮಾಜಕ್ಕೆ ಹೋಗಬೇಕು: ಸುಧಾಮೂರ್ತಿ
ಜಯದೇವ ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ ಬೆಡ್ ಅಗತ್ಯವಿತ್ತು. ಚಿಕಿತ್ಸೆಗೆ ಬೆಡ್​ಗಳ ಅವಶ್ಯಕತೆಯಿದೆ ಎಂದು ನನಗೆ ಹೇಳಿದ್ದರು. ಹಾಗಾಗಿ ಜಯದೇವ ಆಸ್ಪತ್ರೆಯಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ. ಸಮಾಜದಿಂದ ಬಂದಂತಹ ಹಣ ಸಮಾಜಕ್ಕೆ ಹೋಗಬೇಕು. ಈ ನಿಟ್ಟಿನಲ್ಲಿ ಇನ್ಫೋಸಿಸ್​ ಫೌಂಡೇಶನ್​ ಕೆಲಸ ಮಾಡುತ್ತಿದೆ ಎಂದು ಇನ್ಫೋಸಿಸ್​ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಹೇಳಿಕೆ ನೀಡಿದ್ದಾರೆ.

ಜಯದೇವ ಆಸ್ಪತ್ರೆ ವಿಭಾಗೀಯಮಟ್ಟದಲ್ಲಿ ತೆರೆಯಲು ಚಿಂತನೆ ನಡೆಸಲಾಗಿದೆ. ಹುಬ್ಬಳ್ಳಿ ಸೇರಿ ಇತರೆ ವಿಭಾಗೀಯ ಮಟ್ಟದಲ್ಲಿ ಆಸ್ಪತ್ರೆ ಆರಂಭ ಮಾಡಬೇಕಿದೆ. 250 ಸರ್ಕಾರಿ ಆಸ್ಪತ್ರೆಗಳನ್ನ ಮೇಲ್ದರ್ಜೆಗೇರಿಸಲು ತೀರ್ಮಾನ ಮಾಡಲಾಗಿದೆ. ರಾಜ್ಯದಲ್ಲಿ ಕೊರೊನಾ 3ನೇ ಅಲೆ ಬಂದಿಲ್ಲ. ಭಾರತದಲ್ಲಿ ಕೊರೊನಾ ಸೋಂಕಿನ 3ನೇ ಅಲೆ ಇನ್ನೂ ಬಂದಿಲ್ಲ. ವಿದೇಶದಲ್ಲಿ 3ನೇ ಅಲೆ ಜಾಸ್ತಿಯಿದೆ, ನೋಡಿದ್ರೆ ಭಯವಾಗುತ್ತೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್​ ಹೇಳಿದ್ದಾರೆ.

ಇನ್ಫೋಸಿಸ್‌ ಫೌಂಡೇಶನ್‌ನಿಂದ ಜಯದೇವ ಆಸ್ಪತ್ರೆಯಲ್ಲಿ ನೂತನ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. 103 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಆಸ್ಪತ್ರೆ ನಿರ್ಮಾಣಗೊಂಡಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ, ಸಚಿವ ಸುಧಾಕರ್​​, ಜಯದೇವ ಆಸ್ಪತ್ರೆ ನಿರ್ದೇಶಕ ಸಿ.ಎನ್ ಮಂಜುನಾಥ್ ಭಾಗಿ ಆಗಿದ್ದಾರೆ. ವರ್ಚುವಲ್ ವಿಧಾನದ ಮೂಲಕ ಇನ್ಫೋಸಿಸ್ ಸಂಸ್ಥಾಪಕ ಹಾಗೂ ಅಧ್ಯಕ್ಷ ಎನ್.ಆರ್ ನಾರಾಯಣ ಮೂರ್ತಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ: ಕೊಡುಗೈ ದಾನಿ ಸುಧಾ ಮೂರ್ತಿ ಹೃದಯ ವೈಶಾಲ್ಯ: ಜಯದೇವ ಆಸ್ಪತ್ರೆ ನೂತನ ಘಟಕ ನಿರ್ಮಾಣದ ಸಂಗತಿಯೇ ರೋಚಕ!

ಇದನ್ನೂ ಓದಿ: ಸದಾ ಬಡವರಿಗಾಗಿ ಮಿಡಿಯುವ ಹೃದಯ ಹೊಂದಿರುವ ಸುಧಾಮೂರ್ತಿಯವರಿಂದ ಹೃದ್ರೋಗಿಗಳಿಗೆ ಮಹೋನ್ನತ ಕೊಡುಗೆ

Published On - 5:51 pm, Wed, 17 November 21