ರವೀಂದ್ರ ಶ್ರೀಕಂಠಯ್ಯಗೆ ಟ್ರೀಟ್​ಮೆಂಟ್​ ಅಗತ್ಯವಿದೆ; ಸಂಸದೆ ಸುಮಲತಾ ವಾಗ್ದಾಳಿ

| Updated By: sandhya thejappa

Updated on: Aug 19, 2021 | 11:55 AM

ಅಂಬರೀಶ್ ದಾರಿಯಲ್ಲಿ ನಾನು ರಾಜಕೀಯ ಮಾಡುತ್ತಿದ್ದೇನೆ. ಇವರು ಭ್ರಷ್ಟಾಚಾರಕ್ಕೆ ರಾಯಭಾರಿಗಳಾಗಿದ್ದಾರೆ. ಯಾವುದೇ ಸಭೆಗೆ ಇವರು ಬಂದಿರಲಿಲ್ಲ, ನಿನ್ನೆ ಸಭೆಗೆ ಬಂದಿದ್ದಾರೆ.

ರವೀಂದ್ರ ಶ್ರೀಕಂಠಯ್ಯಗೆ ಟ್ರೀಟ್​ಮೆಂಟ್​ ಅಗತ್ಯವಿದೆ; ಸಂಸದೆ ಸುಮಲತಾ ವಾಗ್ದಾಳಿ
ಸಂಸದೆ ಸುಮಲತಾ
Follow us on

ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಸುತ್ತ ಗೂಂಡಾಗಳು, ಫ್ರಾಡ್ಗಳಿದ್ದಾರೆ ಎಂದು ಹೇಳಿಕೆ ನೀಡಿದ್ದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ (Ravindra Srikantaiah) ವಿರುದ್ಧ ಸುಮಲತಾ ವಾಗ್ದಾಳಿ ನಡೆಸಿದ್ದಾರೆ. ಅವರ ಮಾತು ಹೊಸದೇನಲ್ಲ. ಅಕ್ರಮ ಗಣಿಗಾರಿಕೆ ನಿಂತಾಗಿನಿಂದ ತೊಂದರೆಯಾಗುತ್ತಿದೆ. ಅಭಿವೃದ್ದಿ, ಕೊರೊನಾ ಬಗ್ಗೆ ಅವರಿಗೆ ಆಸಕ್ತಿ ಇಲ್ಲ. ಅವರಿಗೆ ಟ್ರೀಟ್​ಮೆಂಟ್ ಅವಶ್ಯಕತೆ ಇದೆ. ಟ್ರೀಟ್​ಮೆಂಟ್ ನಂತರ ಶಾಸಕರಾಗಿ ಮುಂದುವರೆಯಲಿ ಅಂತ ಸಂಸದೆ ಸುಮಲತಾ ಅಂಬರೀಶ್ ವಾಗ್ದಾಳಿ ನಡೆಸಿದ್ದಾರೆ.

ಅಂಬರೀಶ್ ದಾರಿಯಲ್ಲಿ ನಾನು ರಾಜಕೀಯ ಮಾಡುತ್ತಿದ್ದೇನೆ. ಇವರು ಭ್ರಷ್ಟಾಚಾರಕ್ಕೆ ರಾಯಭಾರಿಗಳಾಗಿದ್ದಾರೆ. ಯಾವುದೇ ಸಭೆಗೆ ಇವರು ಬಂದಿರಲಿಲ್ಲ, ನಿನ್ನೆ ಸಭೆಗೆ ಬಂದಿದ್ದಾರೆ ಎಂದು ತಿಳಿಸಿದ ಸುಮಲತಾ, ಆಪ್ತ ಕಾರ್ಯದರ್ಶಿ ನಯವಂಚಕ್ಕೆ ಎಂಬ ಹೇಳಿಕೆ ವಿಚಾರಕ್ಕೂ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ರವೀಂದ್ರ ಶ್ರೀಕಂಠಯ್ಯ ಹೇಳಿದ ಮಾತ್ರಕ್ಕೆ ನಿಜ ಆಗಲ್ಲ. ಮಹಾತ್ಮ ಗಾಂಧಿಯಂತವರು ಹೇಳಿದ್ದರೆ ನಂಬಬಹುದು. ಇಂತವರ ಮಾತನ್ನ ಹೇಗೆ ಸೀರಿಯಸ್ ಆಗಿ ತೆಗೆದುಕೊಳ್ಳುವುದಕ್ಕೆ ಆಗುತ್ತೆ ಎಂದು ಹೇಳಿಕೆ ನೀಡಿದ್ದಾರೆ.

ಶ್ರೀರಂಗಪಟ್ಟಣಕ್ಕೆ ಹೋದರೆ ಎಲ್ಲಾ ಮನೆಯವರು ಇವರ ಬಗ್ಗೆ ಹೇಳುತ್ತಾರೆ. ಮೆಡಿಕಲ್ ಸೀಟ್ ಕೊಡಿಸುವುದಾಗಿ ಆಪ್ತ ಕಾರ್ಯದರ್ಶಿ ವಂಚನೆ ಮಾಡಿರುವ ಬಗ್ಗೆ ಆಧಾರವಿದ್ದರೆ ತೋರಿಸಲಿ. ಇಂತವರು ಒಬ್ಬರಲ್ಲ, ನೂರು ಜನ ಬಂದರೂ ಎದುರಿಸುತ್ತೇನೆ. ದೇವರು ನಮಗೆ ಎಲ್ಲವನ್ನೂ ಕೊಟ್ಟಿದ್ದಾನೆ. ಇದನ್ನ ನಂಬಿಕೊಂಡು ಜೀವನ ಮಾಡುತ್ತಿಲ್ಲ. ನಾವು ರಾಜಕೀಯವನ್ನ ಸೇವೆ ಎಂದು ಮಾಡುತ್ತಿದ್ದೇವೆ ಅಂತ ಸಂಸದೆ ಸುಮಲತಾ ತಿಳಿಸಿದರು.

ರವೀಂದ್ರ ಶ್ರೀಕಂಠಯ್ಯನವರ ಆರೋಪವೇನು?
ಸಂಸದೆ ಸುಮಲತಾ ಸುತ್ತ ಗೂಂಡಾಗಳು, ಫ್ರಾಡ್ಗಳಿದ್ದಾರೆ. ಸುಮಲತಾ ಅಟೆಂಡರ್ ಒಬ್ಬ ಫ್ರಾಡ್, ನಯ ವಂಚಕ. ಮೆಡಿಕಲ್ ಸೀಟ್ ಕೊಡಿಸುವುದಾಗಿ ಜನರಿಗೆ ಪಂಗನಾಮ ಹಾಕಿದ್ದಾನೆ. ಸುಮಲತಾ ಸುತ್ತ ಇರುವವರಿಂದ ಅಧಿಕಾರಿಗಳಿಗೆ ಧಮ್ಕಿ, ಹಣಕ್ಕಾಗಿ ಪೀಡಿಸಿದ್ದಾರೆ. ಸುಮಲತಾಗೆ ಆಪ್ತ ಕಾರ್ಯದರ್ಶಿ ಎಂಬ ಹುದ್ದೆಯೆ ಇಲ್ಲ. ಶ್ರೀನಿವಾಸ್ ಭಟ್ ಎಂಬುವವನನ್ನ ಅನಧಿಕೃತವಾಗಿ ಪಿಎಸ್ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಮಾನಸಿಕವಾಗಿ ಜರ್ಜರಿತವಾಗಿದ್ದಾರೆಂದು ತಿಳಿಸಿದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ, ಸುಮಲತಾ ಅಂಬರೀಶ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ.

‘ಸುಮಲತಾ ಸುತ್ತ ಗೂಂಡಾಗಳು, ಫ್ರಾಡ್​ಗಳಿದ್ದಾರೆ’; ಸುಮಲತಾ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಆಗ್ರಹ

ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣ; ಬಡವ, ಶ್ರೀಮಂತ ಕಾರಣ ಕೊಡುತ್ತಿರುವ ಆರೋಪಿಗಳು

(Sumalatha Ambareesh react to JDS  MLA Ravindra Srikantaiah accused)

Published On - 11:49 am, Thu, 19 August 21