ಬೆಂಗಳೂರಿನಲ್ಲಿ ವಾಹನಗಳ ಟೋಯಿಂಗ್ ಸ್ಥಗಿತ ಪ್ರಶ್ನಿಸಿ ರಿಟ್: ಸರ್ಕಾರದ ವಿಳಂಬ ನೀತಿಗೆ ಹೈಕೋರ್ಟ್​ ತರಾಟೆ

ನಗರದಲ್ಲಿ ವಾಹನಗಳಿಗೆ ಟೋಯಿಂಗ್ ಮಾಡುವುದನ್ನು ಸರ್ಕಾರ ಸ್ಥಗಿತಗೊಳಿಸಿದ ಹಿನ್ನೆಲೆ ಟೋಯಿಂಗ್ ವಾಹನ ಮಾಲೀಕರು, ಕಾರ್ಮಿಕರ ಸಂಘ ಹೈಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಸಿದೆ.

ಬೆಂಗಳೂರಿನಲ್ಲಿ ವಾಹನಗಳ ಟೋಯಿಂಗ್ ಸ್ಥಗಿತ ಪ್ರಶ್ನಿಸಿ ರಿಟ್: ಸರ್ಕಾರದ ವಿಳಂಬ ನೀತಿಗೆ ಹೈಕೋರ್ಟ್​ ತರಾಟೆ
ಕರ್ನಾಟಕ ಉಚ್ಚ ನ್ಯಾಯಾಲಯ
Edited By:

Updated on: Sep 14, 2022 | 9:34 PM

ಬೆಂಗಳೂರು: ನಗರದಲ್ಲಿ ವಾಹನಗಳಿಗೆ ಟೋಯಿಂಗ್ (Towing) ಮಾಡುವುದನ್ನು ಸರ್ಕಾರ ಸ್ಥಗಿತಗೊಳಿಸಿದ ಹಿನ್ನೆಲೆ ಟೋಯಿಂಗ್ ವಾಹನ ಮಾಲೀಕರು, ಕಾರ್ಮಿಕರ ಸಂಘ ಹೈಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಸಿದೆ. ಆಂಧ್ರಪ್ರದೇಶ, ತೆಲಂಗಾಣ ಮಾದರಿಯ ಟೋಯಿಂಗ್ ಬೇಕು ಎಂದು ಹೈಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಸಿದೆ. ಸಂಘದ ಮನವಿ ಕುರಿತು ತೀರ್ಮಾನ ಕೈಗೊಳ್ಳಲು ಸರ್ಕಾರ ವಿಳಂಬ ಮಾಡುತ್ತಿರುವುದಕ್ಕೆ ಹೈಕೋರ್ಟ್​ ತರಾಟೆಗೆ ತೆಗೆದುಕೊಂಡಿದೆ.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ 6 ವಾರಗಳಲ್ಲಿ ಸಂಘದ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಸಂವಿಧಾನ ಬಯಸಿದ್ದ ಕಲ್ಯಾಣ ರಾಜ್ಯ ಸಾಕಾರಗೊಂಡಿಲ್ಲ. ಸರ್ಕಾರದ ನಡೆಯನ್ನು ಕಂಡು ಹೈಕೋರ್ಟ್ ಡಿ.ವಿ.ಗುಂಡಪ್ಪನವರ ಮಂಕುತಿಮ್ಮನ ಕಗ್ಗ ಉಲ್ಲೇಖಿಸಿದೆ.

‘ಸರ್ಕಾರ ಹರಿಗೋಲು, ತೆರಸುಳಿಗಳತ್ತಿತ್ತ’ ‘ಸುರೆ ಕುಡಿದವರು ಕೆಲರು ಹುಟ್ಟು ಹಾಕುವರು’ ‘ಬಿರುಗಾಳಿ ಬೀಸುವುದು, ಜನರೆದ್ದು ಕುಣಿಯುವುದು’ ‘ಉರುಳದಿಹದಚ್ಚರಿಯೋ ಮಂಕುತಿಮ್ಮ’ ಎಂದು ನ್ಯಾ.ಕೃಷ್ಣ ಎಸ್.ದೀಕ್ಷಿತ್ ಡಿ.ವಿ.ಜಿಯವರ ಸಾಹಿತ್ಯ ಉಲ್ಲೇಖಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:34 pm, Wed, 14 September 22