ಬೆಂಗಳೂರು: ತನಗೆ 70 ವರ್ಷವಾಗಿದ್ದರೂ ಪ್ರಧಾನಿ ಮೋದಿ (Narendra Modi), ಅಮಿತ್ ಶಾ (Amit Shah) ಅವಕಾಶ ನೀಡಿದ್ದಾರೆ ಅಂತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa)ಆಗಾಗ ಹೇಳುತ್ತಿರುತ್ತಾರೆ. ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎನ್ನುತ್ತಿದ್ದರು. ಆದರೆ ಮುಂದೆ ಏನು ಎಂಬುದೇ ಈಗ ವಿಚಾರವಾಗಿದೆ. ಯಡಿಯೂರಪ್ಪನವರ ಒಳಗಡೆ ಒಂದಷ್ಟು ಶಕ್ತಿಯಿದೆ. ಅದರಿಂದಲೇ ಅವರು ಎಲ್ಲ ಸಮಸ್ಯೆಗಳಿಂದ ಪಾರಾದರು. ರಾಜ್ಯಕ್ಕೂ ಕೂಡ ಉತ್ತಮವಾದ ಯೋಜನೆ ಕೊಟ್ಟಿದ್ದಾರೆ. ಸಿಎಂ ಬಿಎಸ್ವೈರದ್ದು ಅಭಿವೃದ್ಧಿ ಪರವಾದ ರಾಜಕಾರಣ. ಈ ವೇಳೆ ಒಂದಷ್ಟು ಸಮಸ್ಯೆ ಉಂಟಾಯಿತು. ಇದಕ್ಕೆ ಸೂಕ್ತವಾದ ಪರಿಹಾರ ಕಂಡುಕೊಳ್ಳುತ್ತಾರೆ ಎಂದು ಮುರುಘಾ ಮಠದ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದಲ್ಲಿ ನಾಯಕತ್ವದ ಬಿಕ್ಕಟ್ಟು ಆಗಿದೆ. ಮುಂದಿನ ನಾಯಕರ ಬಗ್ಗೆ ಸ್ಪಷ್ಟತೆ ಕಂಡು ಬರುತ್ತಿಲ್ಲ. ಇದನ್ನು ಎಲ್ಲ ಶಾಸಕರು ನಿರ್ಧಾರ ಮಾಡುತ್ತಾರೆ. ಈಗಿನ ಸಮಸ್ಯೆ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು. ಇದು ಒಂದು ರೀತಿಯ ಬಿಸಿ ತುಪ್ಪವಾಗಿದೆ. ಎಲ್ಲಾ ಜಾತಿಯ ಮಠಾಧೀಶರನ್ನ ಸೇರಿಸಿಕೊಂಡು ಒಂದು ಶಕ್ತಿಯುತವಾದ ಸಂಘಟನೆ ಮಾಡಬೇಕಿದೆ ಅಂತಾ ಮುರುಘಾ ಶ್ರೀಗಳು ಸಭೆಯಲ್ಲಿ ಕರೆ ನೀಡಿದರು.
ಒಂದು ಕಡೆ ಪ್ರಕೃತಿ ವಿಕೋಪ, ಇನ್ನೊಂದು ಕಡೆ ಕೊರೊನಾ ಕೋಪ. ಇವೆರೆಡು ಸೇರಿ ಮಾನವನ ಜೀವನದ ಒಳಗೆ ತಾಪ ಸೃಷ್ಟಿ ಮಾಡಿದೆ. ಪರಿತಾಪವನ್ನು ಸೃಷ್ಟಿ ಮಾಡಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಇದ್ದೇವೆ. ಕೊರೊನಾ ಬಂದ ವೇಳೆ ಮಂದಿರ, ಮಸೀದಿ, ಚರ್ಚ್ಗಳು ಮುಚ್ಚಿ ಹೋದವು. ಅಂಥಹ ಸಂದರ್ಭದಲ್ಲಿ ಮಠಗಳು ಸಹಾಯ ಮಾಡಿದವು. ಹತ್ತಾರು ಜನರಿಗೆ ಆಹಾರ ಕಿಟ್ ವಿತರಿಸಿದ್ದೆವು ಎಂದು ಸ್ವಾಮೀಜಿ ತಿಳಿಸಿದರು.
ಸ್ವಾಮೀಜಿಗಳೆಲ್ಲಾ ಜಾತಿ ವಾದಿಗಳೆಂಬ ಭಾವನೆ ತಾಳಬಾರದು. ಸಂವಿಧಾನದ ಪ್ರಕಾರ ಪಕ್ಷಾತೀತ, ಜಾತ್ಯತೀತ ನಮ್ಮ ನಿಲುವು. ಮಠಾಧೀಶರೆಲ್ಲರೂ ಜಾತಿ ಒಳಗಿದ್ದು ಜಾತಿಯನ್ನು ಮೀರುವ ಕೆಲಸ ಮಾಡುತ್ತೇವೆ. 7 ವರ್ಷಗಳ ಹಿಂದೆ ಅಹಿಂದ ಚಳವಳಿಯನ್ನು ಬೆಂಬಲಿಸಿದ್ದೆವು. ಜಾತಿ ಭೇದ ಮರೆತು ನಾನು ಸಿದ್ದರಾಮಯ್ಯನವರಿಗೆ ಬೆಂಬಲಿಸಿದ್ದೆ. ಮಠಾಧೀಶರಿಗೆ ಅಭಿಮಾನಕ್ಕಿಂತ ಜಾತ್ಯತೀತವೇ ಮುಖ್ಯ. ಇಂದಿನ ಸ್ವಾಮೀಜಿಗಳ ಸಮಾವೇಶ ಒಂದು ದಿನಕ್ಕೆ ಅಲ್ಲ. ಮುಂಬರುವ ದಿನಗಳಲ್ಲಿ ಬಲಿಷ್ಠ ಸಂಘಟನೆ ಮಾಡಬೇಕು ಅಂತ ಮುರುಘಾ ಶ್ರೀ ಹೇಳಿದರು.
ಇದನ್ನೂ ಓದಿ
(Swamiji of Muruga Math says Chief Minister Yediyurappa’s development politics)
Published On - 2:42 pm, Sun, 25 July 21