ಯಡಿಯೂರಪ್ಪ ಕೈಬಿಟ್ಟರೆ 6 ತಿಂಗಳಲ್ಲಿ ಸರ್ಕಾರ ಪತನ ಗ್ಯಾರಂಟಿ, ಬಿಜೆಪಿಗೆ ದೊಡ್ಡ ಪೆಟ್ಟು: ಮುರುಘಾ ಮಠದ ಸ್ವಾಮೀಜಿ ಎಚ್ಚರಿಕೆ

ಯಡಿಯೂರಪ್ಪ ಸಮರ್ಥ ಆಡಳಿತಗಾರ. ಇನ್ನೊಬ್ಬರ ಮನಸ್ಸು ನೋಯಿಸದ ವ್ಯಕ್ತಿ. ಅಂಥವರನ್ನು ಅವಧಿಗೆ ಮುನ್ನ ಬದಲಾಯಿಸುವುದು ಒಳ್ಳೆಯ ಸುದ್ದಿ ಅಲ್ಲ. ಕೇಂದ್ರದವರು ಯಾರೂ ಬಾಯಿ ಬಿಟ್ಟು ಬದಲಿಸುವ ವಿಚಾರ ಹೇಳಿಲ್ಲ.

ಯಡಿಯೂರಪ್ಪ ಕೈಬಿಟ್ಟರೆ 6 ತಿಂಗಳಲ್ಲಿ ಸರ್ಕಾರ ಪತನ ಗ್ಯಾರಂಟಿ, ಬಿಜೆಪಿಗೆ ದೊಡ್ಡ ಪೆಟ್ಟು: ಮುರುಘಾ ಮಠದ ಸ್ವಾಮೀಜಿ ಎಚ್ಚರಿಕೆ
ಮುರುಘಾ ಮಠದ ಸ್ವಾಮೀಜಿ
Follow us
TV9 Web
| Updated By: sandhya thejappa

Updated on:Jul 21, 2021 | 1:09 PM

ಧಾರವಾಡ: ರಾಜ್ಯಕ್ಕೆ ಯಡಿಯೂರಪ್ಪನಂತಹ ಮುಖ್ಯಮಂತ್ರಿ ಸಿಗುವುದು ಕಷ್ಟ. ಬಿಎಸ್​ವೈ ಉಳಿಸಿಕೊಳ್ಳಲು ಪ್ರಯತ್ನ ಮಾಡಲೇಬೇಕು. ಯಡಿಯೂರಪ್ಪರನ್ನ ಕೈಬಿಟ್ಟರೆ 6 ತಿಂಗಳಲ್ಲಿ ಸರ್ಕಾರ ಪತನವಾಗುತ್ತದೆ. ಯಾವುದೇ ಪಕ್ಷದ ಸರ್ಕಾರ ಬಂದರೂ ಸರ್ಕಾರ ಪತನವಾಗುತ್ತದೆ. ಸಿಎಂ ಬದಲಿಸಿದರೆ ಬಿಜೆಪಿಗೆ ದೊಡ್ಡ ಪೆಟ್ಟು ಬೀಳುತ್ತದೆ. ಕರ್ನಾಟಕದಲ್ಲಿ ಬಿಜೆಪಿಗೆ ಯಡಿಯೂರಪ್ಪ ಅಡಿಪಾಯವಿದ್ದಂತೆ. ಇಂಥವರನ್ನು ಅವಧಿಗೆ ಮುನ್ನ ಬದಲಿಸುವುದು ಸರಿಯಲ್ಲ ಅಂತ ಧಾರವಾಡದ ಮುರುಘಾ ಮಠದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಯಡಿಯೂರಪ್ಪ ಸಮರ್ಥ ಆಡಳಿತಗಾರ. ಇನ್ನೊಬ್ಬರ ಮನಸ್ಸು ನೋಯಿಸದ ವ್ಯಕ್ತಿ. ಅಂಥವರನ್ನು ಅವಧಿಗೆ ಮುನ್ನ ಬದಲಾಯಿಸುವುದು ಒಳ್ಳೆಯ ಸುದ್ದಿ ಅಲ್ಲ. ಕೇಂದ್ರದವರು ಯಾರೂ ಬಾಯಿ ಬಿಟ್ಟು ಬದಲಿಸುವ ವಿಚಾರ ಹೇಳಿಲ್ಲ. ಇದೊಂದು ಗಾಳಿ ಸುದ್ದಿ ಅಷ್ಟೇ. ಈ ಸುದ್ದಿ ತಿಳಿದು ಬದಲಾವಣೆ ಮಾಡಿದರೆ ಬಿಜೆಪಿ ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತದೆ. ಹಾಗಾಗಿ ಆ ಹುಚ್ಚಿಗೆ ಹೋಗಬಾರದು ಅಂತ ಸ್ವಾಮೀಜಿ ಹೇಳಿದರು.

ಲಿಂಗಾಯತರು ಬೆಳೆಯುವುದು ಕೆಲವರಿಗೆ ಅಸಮಾಧಾನ ಇದೆ. ಲಿಂಗಾಯತರು ಶಾಸಕರು ಮುಂದುವರಿಯಬಾರದು ಅಂತ ಕೆಲವರಿಗೆ ಇದೆ. ಲಿಂಗಾಯತರು ಸಿಎಂ ಆಗಬಾರದೆಂಬ ಅಸಮಾಧಾನವೂ ಕೆಲವರಿಗೆ ಇದೆ. ಇದಕ್ಕಾಗಿಯೇ ಒಳಗೊಳಗೆ ಅಸಮಾಧಾನದ ಹೊಗೆ ಇದೆ. ಇದಕ್ಕೆ ಕೆಲವರು ಕಿಡಿ ಹಾಕುತ್ತಿದ್ದಾರೆ. ಕೇಂದ್ರದವರು ಅದನ್ನು ಲೆಕ್ಕಿಸಬಾರದು. ವಿರೇಂದ್ರ ಪಾಟೀಲರಿಗೆ ಆದಂತೆ ಬಿಎಸ್​ವೈಗೆ ಆಗಬಾರದು ಎಂದು ಸ್ವಾಮೀಜಿ ತಿಳಿಸಿದರು.

ಪ್ರಾಣಕ್ಕೆ ಪ್ರಾಣ ಕೊಟ್ಟು ಬಿಜೆಪಿ ಬೆಳೆಸಿದವರು. ಅವರಿಂದಲೇ ದಕ್ಷಿಣ ಭಾರತದಲ್ಲಿ ಬಿಜೆಪಿ ಇದೆ. ಹೀಗಾಗಿ ಅವರನ್ನು ಬದಲಿಸುವುದಿಲ್ಲ. ಈ ಬೆಳವಣಿಗೆಗಳ ಬಗ್ಗೆ ಬಿಎಸ್​ವೈ ನೋವು ಮಾಡಿಕೊಂಡಿದ್ದಾರೆ. ಇಷ್ಟೇಲ್ಲ ಮಾಡಿ ಕಾದಾಟ ತಪ್ಪಿಲ್ಲ ಅಂತ ಬೇಸರ ಆಗಿದೆ. ಒಬ್ಬರೂ ನಮ್ಮ ಶ್ರಮ ಅರ್ಥ ಮಾಡಿಕೊಂಡಿಲ್ಲವೆಂಬ ವೇದನೆ ಆಗಿದೆ. ಊರಿಗೆ ಉಪಕಾರ ಮಾಡಬಾರದು, ಹೆಣಕ್ಕೆ ಶೃಂಗಾರ ಮಾಡಬಾರದು ಅನ್ನೋ ಹಾಗೆ ಅವರಿಗೆ ಆಗಿದೆ ಅಂತ ಮುರಘಾ ಮಠದ ಸ್ವಾಮೀಜಿ ಹೇಳಿಕೆ ನೀಡಿದರು.

ಬಿಜೆಪಿಗೆ ನಷ್ಟ ವಿಜಯಪುರ: ನಿನ್ನೆ ಹಲವಾರು ಮಠಾಧೀಶರು ಸಿಎಂ ಭೇಟಿ ಮಾಡಿ ಬೆಂಬಲಿಸಿದ್ದಾರೆ. ವಿಜಯಪುರ ಹಾಗೂ ಸುತ್ತಮುತ್ತ ಜಿಲ್ಲೆಗಳ ಮಠಾಧೀಶರು ಯಡಿಯೂರಪ್ಪಗೆ ಬೆಂಬಲಿಸುತ್ತೇವೆ. ಸುಮಾರು 80 ರಿಂದ 90 ಮಠಾಧೀಶರು ತೆರಳಿ ಆಶೀರ್ವಾದ ಮಾಡುತ್ತೇವೆ. ಯಡಿಯೂರಪ್ಪ ಪರವಾಗಿ ಮಠಾಧೀಶರು ನಡೆಸುವ ಸಮಾವೇಶಕ್ಕೆ ತೆರಳುತ್ತೇವೆ. ಒಂದು ವೇಳೆ ಯಡಿಯೂರಪ್ಪರನ್ನು ಬದಲಾವಣೆ ಮಾಡಿದರೆ ಬಿಜೆಪಿಗೆ ನಷ್ಟವಾಗುತ್ತದೆ ಎಂದು ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

2013 ರಲ್ಲಿ ಆದಂತೆ ಬಿಜೆಪಿಗೆ ಹಿನ್ನಡೆಯಾಗುತ್ತದೆ ಎಂದು ಭವಿಷ್ಯ ನುಡಿದ ಸ್ವಾಮೀಜಿ, ಬಿಎಸ್​ವೈ ಬದಲಾವಣೆ ಮಾಡಬಾರದು. ಬಿಎಸ್​ವೈ ಹೊರತಾಗಿ ಲಿಂಗಾಯತ ನಾಯಕರಿದ್ದಾರೆ, ಆದರೆ ಇವರಷ್ಟು ಹಿರಿಯರಲ್ಲ. ಯಡಿಯೂರಪ್ಪ ಈಗ ರಾಜನಾಗಿದ್ದಾರೆ. ಅವರನ್ನು ಕೆಳಗಿಳಿಸಿ ಬೇರೆಯವರನ್ನು ರಾಜನನ್ನಾಗಿಸುವುದು ಸರಿಯಲ್ಲ ಅಂತ ಹೇಳಿದರು.

ಇದನ್ನೂ ಓದಿ

ವೀರಶೈವ ಸಮುದಾಯದವರಿಗೇ ಸಿಎಂ ಹುದ್ದೆ ನೀಡಬೇಕು; ಹೋರಾಟದ ಎಚ್ಚರಿಕೆ ನೀಡಿದ ಕೊಳದ ಮಠದ ಡಾ.ಶಾಂತವೀರ ಸ್ವಾಮೀಜಿ

ಸರ್ಕಾರಕ್ಕೆ ಪೂರ್ಣ ಸ್ವಾತಂತ್ರ್ಯವಿದ್ದರೆ ಉತ್ತಮ ಆಡಳಿತ ಸಾಧ್ಯ; ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

(murugha math Swamiji warned that BJP would be troubled if Yediyurappa is removed from CM post)

Published On - 12:50 pm, Wed, 21 July 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್