AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

6 ತಿಂಗಳಾದರೂ ಸಿಎಂ ಬಿಎಸ್‌ ಯಡಿಯೂರಪ್ಪರನ್ನು ಮುಂದುವರಿಸಿ, ಮಠಾಧೀಶರ ಮಾತಿಗೆ ಬೆಲೆ ಕೊಡಿ -ನಿಡುಮಾಮಿಡಿ ಸ್ವಾಮೀಜಿ ಮನವಿ

ವಯಸ್ಸಿನ ವಿಚಾರ, ಪಕ್ಷದ ವಿಚಾರ ನಾನು ಒಪ್ಪುತ್ತೇನೆ. ತಮಿಳುನಾಡಿನಲ್ಲಿ 75 ಮೀರಿದ ವ್ಯಕ್ತಿಯನ್ನು ಸಿಎಂ ಎಂದು ಬಿಂಬಿಸಿ ಚುನಾವಣೆ ಎದುರಿಸಿತ್ತು. ಪಕ್ಷ ಒಂದೊಂದು ಕಡೆ ಒಂದೊಂದು ನಿಯಮ ಪಾಲಿಸಬಾರದು. 6 ತಿಂಗಳಾದರೂ ಸಿಎಂ ಬಿಎಸ್‌ವೈರನ್ನು ಮುಂದುವರಿಸಿ. ಮಠಾಧೀಶರ ಮಾತಿಗೆ ಬೆಲೆ ಕೊಡಿ ಎಂದು ನಿಡುಮಾಮಿಡಿ ಸ್ವಾಮೀಜಿಗಳು ಮನವಿ ಮಾಡಿಕೊಂಡಿದ್ದಾರೆ.

6 ತಿಂಗಳಾದರೂ ಸಿಎಂ ಬಿಎಸ್‌ ಯಡಿಯೂರಪ್ಪರನ್ನು ಮುಂದುವರಿಸಿ, ಮಠಾಧೀಶರ ಮಾತಿಗೆ ಬೆಲೆ ಕೊಡಿ -ನಿಡುಮಾಮಿಡಿ ಸ್ವಾಮೀಜಿ ಮನವಿ
ನಿಡುಮಾಮಿಡಿ ಸ್ವಾಮೀಜಿ
TV9 Web
| Updated By: ಆಯೇಷಾ ಬಾನು|

Updated on: Jul 25, 2021 | 11:53 AM

Share

ಬೆಂಗಳೂರು: ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡುವ ಸಾಧ್ಯತೆ‌ ಹಿನ್ನೆಲೆಯಲ್ಲಿ ಇಂದು 50ಕ್ಕೂ ಹೆಚ್ಚು ಸ್ವಾಮೀಜಿಗಳ ನೇತೃತ್ವದಲ್ಲಿ ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್ನಲ್ಲಿ ಬೃಹತ್ ಸಮಾವೇಶ ಕೈಗೊಳ್ಳಲಾಗಿದೆ. ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಿಂದ ಸ್ವಾಮೀಜಿಗಳು ಬಂದಿದ್ದಾರೆ. ಸದ್ಯ ರಾಜ್ಯ ರಾಜಕೀಯದಲ್ಲಿ ಎದ್ದಿರುವ ಬಿರುಗಾಳಿಯನ್ನು ನಿಯಂತ್ರಿಸಲು ಸ್ವಾಮೀಜಿಗಳು ಹರ ಸಾಹಸ ಪಡುತ್ತಿದ್ದಾರೆ. ಯಡಿಯೂರಪ್ಪರನ್ನ ಕೆಳಗಿಳಿಸೋ ನಿರ್ಧಾರಕ್ಕೆ ಹಲವು ಮಠಾಧೀಶರು ಕೆಂಡಕಾರಿದ್ದಾರೆ. ಈ ಬಗ್ಗೆ ಇಂದು ನಿಡುಮಾಮಿಡಿ ಸ್ವಾಮೀಜಿ ಸುದ್ದಿಗೋಷ್ಠಿ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಬಿಎಸ್‌ ಯಡಿಯೂರಪ್ಪ ಸರ್ವ ಸಮುದಾಯಗಳ ಸದ್ಭಾವನೆ ಪಡೆದು‌ ಸಿಎಂ ಆಗಿದ್ದಾರೆ. ಬಿಜೆಪಿ ಸರ್ಕಾರವನ್ನು ಕಷ್ಟಪಟ್ಟು ಕಟ್ಟಿದ್ದಾರೆ. ಆದ್ರೆ ಅವರನ್ನು ಅವಧಿಪೂರ್ವದಲ್ಲಿಯೇ ಕೆಳಗೆ ಇಳಿಸಲಿದ್ದಾರೆ‌ ಎಂಬ ವದಂತಿ ಇದೆ. ಸಿಎಂ ಸ್ಥಾನದಿಂದ ಹೈಕಮಾಂಡ್ ಕೆಳಗಿಳಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿಗಳು ತಮ್ಮ ನಿಲುವನ್ನು ತಿಳಿಸಲು ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಬಿಎಸ್‌ವೈ ಕೇವಲ ಲಿಂಗಾಯತ ನಾಯಕರಾಗಲಿಲ್ಲ. ಸರ್ವ ಜನಾಂಗದ ಪ್ರೀತಿ ವಿಶ್ವಾಸ ಗಳಿಸಿದ್ರು. ಸರ್ಕಾರದ ರಚನೆಯ ಸಂದರ್ಭದಲ್ಲಿ ಅಪಕೀರ್ತಿಗೂ ಒಳಗಾದ್ರು. ಅತ್ಯಂತ ದಕ್ಷತೆ, ಕ್ರಿಯಾಶೀಲರಾಗಿ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ನೆರೆ, ಬರ ಬಂದಾಗ ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದರು.

ಬಿಎಸ್‌ವೈಗೆ ಸರಿಸಾಟಿಯಿಲ್ಲದ ನಾಯಕ ಸದ್ಯಕ್ಕೆ ಇಲ್ಲ ಸಿಎಂ ಬಿಎಸ್ವೈಗೆ ವಯಸ್ಸು ಮೀರಿದೆ ಎಂದು ಬಿಜೆಪಿ ವರಿಷ್ಠರು ಕೆಳಗಿಳಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಬದಲಾವಣೆ ಅವಶ್ಯಕತೆ ಏನಿದೆ? ಬಿಎಸ್‌ವೈಗೆ ಸರಿಸಾಟಿಯಿಲ್ಲದ ನಾಯಕ ಸದ್ಯಕ್ಕೆ ಇಲ್ಲ. ರಾಜ್ಯದಲ್ಲಿ ಕೊರೊನಾ 3ನೇ ಅಲೆಯ ಬರುವ ಸಾಧ್ಯತೆ ಇದೆ ಜೊತೆಗೆ ನೆರೆ ಪರಿಸ್ಥಿತಿ‌ ಇರುವ ಸಮಯದಲ್ಲಿ ಬದಲಾವಣೆ ಏಕೆ? ಹೀಗಾಗಿ ಸಿಎಂ ಆಗಿ ಬಿಎಸ್‌ವೈರನ್ನು ಮುಂದುವರಿಸಬೇಕು. ಜಾತಿ, ಮತ ಎಲ್ಲವನ್ನೂ ಮೀರಿದ ನಾಯಕ ಬಿಎಸ್‌ವೈ. BJP ವರಿಷ್ಠರು ಮಠಾಧೀಶರ ಮಾತಿಗೆ ಗೌರವ ನೀಡಬೇಕು. ಬಿಜೆಪಿ ವರಿಷ್ಠರು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನಿಡುಮಾಮಿಡಿ ಸ್ವಾಮೀಜಿಗಳು ಬಿಜೆಪಿ ಹೈಕಮಾಂಡ್ಗೆ ಒತ್ತಾಯಿಸಿದ್ದಾರೆ.

ವಯಸ್ಸಿನ ವಿಚಾರ, ಪಕ್ಷದ ವಿಚಾರ ನಾನು ಒಪ್ಪುತ್ತೇನೆ. ತಮಿಳುನಾಡಿನಲ್ಲಿ 75 ಮೀರಿದ ವ್ಯಕ್ತಿಯನ್ನು ಸಿಎಂ ಎಂದು ಬಿಂಬಿಸಿ ಚುನಾವಣೆ ಎದುರಿಸಿತ್ತು. ಪಕ್ಷ ಒಂದೊಂದು ಕಡೆ ಒಂದೊಂದು ನಿಯಮ ಪಾಲಿಸಬಾರದು. 6 ತಿಂಗಳಾದರೂ ಸಿಎಂ ಬಿಎಸ್‌ವೈರನ್ನು ಮುಂದುವರಿಸಿ. ಮಠಾಧೀಶರ ಮಾತಿಗೆ ಬೆಲೆ ಕೊಡಿ ಎಂದು ನಿಡುಮಾಮಿಡಿ ಸ್ವಾಮೀಜಿಗಳು ಮನವಿ ಮಾಡಿಕೊಂಡಿದ್ದು ನಂತರ ನಿಮ್ಮ ಇಚ್ಛೆಯಂತೆ ನಡೆದುಕೊಳ್ಳಿ. ಹಸ್ತಕ್ಷೇಪ ರಹಿತ ಹಾಗೂ ಆರೋಪ ರಹಿತ ಉತ್ತಮ ಆಡಳಿತ ನೆರವೇರಿಸಿ‌ ಎಂದು ಸೂಚಿಸಿದ್ದಾರೆ.

ಮಠಾಧೀಶರ ಮಾತಿಗೆ ಗೌರವ ಕೊಟ್ಟಾಗ ನಿಮಗೂ ಒಳ್ಳೆಯದಾಗುತ್ತೆ. ವೀರಶೈವ ಲಿಂಗಾಯತ ಅನ್ನೋದು ನೂರಾರು ಸಮುದಾಯ ಹಾಗು ಉಪಜಾತಿಗಳ ಧರ್ಮ ಇದು. ಆ ಕಾರಣಕ್ಕೆ ಈ ಧರ್ಮದವರನ್ನೇ ಸಿಎಂ ಮಾಡಿ ಅನ್ನೋದು 2ನೇ ವಿನಂತಿ. ಸಮರ್ಥರು ಅನೇಕರಿದ್ದಾರೆ. ನಿರಾಣಿ, ಬೊಮ್ಮಾಯಿ, ಸೋಮಣ್ಣ, ಮಾಧುಸ್ವಾಮಿ ಇದ್ದಾರೆ ಎಂದು ನಿಡುಮಾಮಿಡಿ ಸ್ವಾಮೀಜಿ ಸುದ್ದಿಗೋಷ್ಠಿ ವೇಳೆ ಮಾತನಾಡಿದ್ರು.

ಇದನ್ನೂ ಓದಿ: ‘ಬಿಜೆಪಿಯೆಂದರೆ ಬ್ಯುಸಿನೆಸ್ ಜನತಾ ಪಾರ್ಟಿ’: ಮಾಜಿ ಶಾಸಕ ಮಧು ಬಂಗಾರಪ್ಪ ಆರೋಪ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ