5 ಸೆಂ.ಮೀ ಉದ್ದದ ಗಣೇಶ ವಿಗ್ರಹವನ್ನು ನುಂಗಿದ 3 ವರ್ಷದ ಬಾಲಕ
ಆಟವಾಡುತ್ತಿದ್ದ ಬಾಲಕ ತಿಳಿಯದೇ 5 ಸೆಂಟಿ ಮೀಟರ್ ಉದ್ದದ ಗಣೇಶ ವಿಗ್ರಹವನ್ನು ನುಂಗಿದ್ದಾನೆ. ಗಂಟಲು ನೋವು ಮತ್ತು ಎಸೆದಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಹತ್ತಿರದ ಓಲ್ಡ್ ಏರ್ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ಕಳೆದ ಶುಕ್ರವಾರ ದಾಖಲಿಸಲಾಯಿತು.
ಮೂರು ವರ್ಷದ ಬಾಲಕ ಗಣೇಶ ವಿಗ್ರಹವನ್ನು ನುಂಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆಹಾರ ಮತ್ತು ಲಾಲಾರಸವನ್ನು ನುಂಗಲು ಎದೆ ನೋವು ಎಂದು ಹೇಳುತ್ತಿದ್ದ ಬಾಲಕನನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಎಕ್ಸರೆ ಮೂಲಕ ಗಣೇಶ ವಿಗ್ರಹ ಬಾಲಕನ ಎದೆ ಭಾಗದಲ್ಲಿ ಸಿಲುಕೊಂಡಿರುವುದು ತಿಳಿದು ಬಂದಿದೆ.
ಮಗುವಿನ ಹೆಸರು ಬಸವ. ಮೂರು ವರ್ಷದ ಬಾಲಕ. ಆಟವಾಡುತ್ತಿದ್ದ ಬಾಲಕ ತಿಳಿಯದೇ 5 ಸೆಂಟಿ ಮೀಟರ್ ಉದ್ದದ ಗಣೇಶ ವಿಗ್ರಹವನ್ನು ನುಂಗಿದ್ದಾನೆ. ಗಂಟಲು ನೋವು ಮತ್ತು ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಹತ್ತಿರದ ಓಲ್ಡ್ ಏರ್ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ಕಳೆದ ಶುಕ್ರವಾರ ದಾಖಲಿಸಲಾಯಿತು. ಬಾಲಕ ಗಣೇಶ ವಿಗ್ರಹವನ್ನು ನುಂಗಿರುವುದು ತಿಳಿದು ಬಂದಿದೆ.
ಎಂಡಸ್ಕೋಪಿ ವಿಧಾನದ ಮೂಲಕ ವೈದ್ಯರು ವಿಗ್ರಹವನ್ನು ತೆಗೆದಿದ್ದಾರೆ. ಬಾಲಕನಿಗೆ ಯಾವುದೇ ಅಪಾಯವಾಗಿಲ್ಲ ಎಂಬುದು ತಿಳಿದು ಬಂದಿದೆ. ಬಾಲಕ ಸುರಕ್ಷಿತನಾಗಿದ್ದರಿಂದ ಶುಕ್ರವಾರ ಸಂಜೆಯ ವೇಳೆಗೆ ಬಾಲಕನನ್ನು ಡಿಸ್ಚಾರ್ಜ್ ಮಾಡಲಾಗಿದೆ.
ಬಾಲಕ ವಿಗ್ರಹವನ್ನು ನುಂಗಿದ್ದರಿಂದ ಆತನಿಗೆ ನೀರು ಕುಡಿಯಲೂ ಸಾಧ್ಯವಾಗತ್ತಿರಲಿಲ್ಲ. ಎದೆಯ ಭಾಗದಲ್ಲಿ ವಿಗ್ರಹ ಸಿಲುಕಿಕೊಂಡಿತ್ತು. ಇದರಿಂದ ಅನ್ನನಾಳಕ್ಕೆ ತೊಂದರೆಯುಂಟಾಗುತ್ತಿತ್ತು. ಜತೆಗೆ ಬಾಲಕ ಅಪಾಯವನ್ನು ಎದುರಿಸಬೇಕಾಗುವ ಸಂಭವವಿತ್ತು. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಾದ್ದರಿಂದ ಚಿಕಿತ್ಸೆಯ ಮೂಲಕ ಬಾಲಕನಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವೈದ್ಯರಾದ ಡಾ.ಶ್ರೀಕಾತ್ ಕೆ.ಪಿ ಹೇಳಿದ್ದಾರೆ.
ಇದನ್ನೂ ಓದಿ:
ಬಾಲಕಿಯ ಹತ್ಯೆಗೆ ಕಾರಣವಾದ ಜೀನ್ಸ್; ಅಜ್ಜ, ಇಬ್ಬರು ಚಿಕ್ಕಪ್ಪಂದಿರೇ ಆರೋಪಿಗಳು
(Three Years boy swallows lord Ganesha idol in Bangalore)
Published On - 11:43 am, Mon, 26 July 21