ಸಂಪುಟ ವಿಸ್ತರಣೆಗೆ ಕೇಂದ್ರವೂ ವಿಳಂಬ ಮಾಡಿತು; ಪ್ರವಾಹ ಬಂದು ಎಲ್ಲ ಕಡೆ ಹುಚ್ಚನಂತೆ ಸುತ್ತಾಡಬೇಕಾಯಿತು- ಯಡಿಯೂರಪ್ಪ

TV9 Digital Desk

| Edited By: ಸಾಧು ಶ್ರೀನಾಥ್​

Updated on:Jul 26, 2021 | 12:13 PM

bs yediyurappa: ಕಳೆದ ಎರಡು ವರ್ಷದಲ್ಲಿ ನನಗೆ ಪ್ರತಿಯೊಂದರಲ್ಲೂ ಅಗ್ನಿಪರೀಕ್ಷೆ ಎದುರಾಯಿತು. ಪ್ರವಾಹ ಬಂದು ಎಲ್ಲ ಕಡೆ ಹುಚ್ಚನಂತೆ ಸುತ್ತಾಡಬೇಕಾಯಿತು... ಸಿಎಂ ಯಡಿಯೂರಪ್ಪ ಕಣ್ಣೀರು

ಸಂಪುಟ ವಿಸ್ತರಣೆಗೆ ಕೇಂದ್ರವೂ ವಿಳಂಬ ಮಾಡಿತು; ಪ್ರವಾಹ ಬಂದು ಎಲ್ಲ ಕಡೆ ಹುಚ್ಚನಂತೆ ಸುತ್ತಾಡಬೇಕಾಯಿತು- ಯಡಿಯೂರಪ್ಪ
ಸಂಪುಟ ವಿಸ್ತರಣೆಗೆ ಕೇಂದ್ರವೂ ವಿಳಂಬ ಮಾಡಿತು; ಪ್ರವಾಹ ಬಂದು ಎಲ್ಲ ಕಡೆ ಹುಚ್ಚನಂತೆ ಸುತ್ತಾಡಬೇಕಾಯಿತು- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಎರಡು ವರ್ಷಗಳ ಕಾಲದ ತಮ್ಮ ನೇತೃತ್ವದ ಸರ್ಕಾರದ ಸಾಧನಾ ಸಮಾವೇಶದಲ್ಲಿ ಮಾತನಾಡುವಾಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗದ್ದಿತರಾಗಿದ್ದಾರೆ. ಭಾಷಣದ ವೇಳೆ ಭಾವುಕರಾದ ಸಿಎಂ ಯಡಿಯೂರಪ್ಪ ಕಣ್ಣೀರು ಹಾಕಿದ್ದಾರೆ. ಕಳೆದ ಎರಡು ವರ್ಷದಲ್ಲಿ ನನಗೆ ಪ್ರತಿಯೊಂದರಲ್ಲೂ ಅಗ್ನಿಪರೀಕ್ಷೆ ಎದುರಾಯಿತು. ಪ್ರವಾಹ ಬಂದು ಎಲ್ಲ ಕಡೆ ಹುಚ್ಚನಂತೆ ಸುತ್ತಾಡಬೇಕಾಯಿತು ಎಂದು ತಿಳಿಸಿದ ಯಡಿಯೂರಪ್ಪ ಅವರು ನಡೆದುಕೊಂಡೇ ರಾಜ್ಯಪಾಲರ ಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸುವುದಾಗಿ ಇದೇ ವೇಳೆ ಘೋಷಿಸಿದರು.

ಅನಿವಾರ್ಯವಾಗಿ ಜೆಡಿಎಸ್ ಜತೆ ಸರ್ಕಾರ ಮಾಡಿದೆವು. ಜೆಡಿಎಸ್ ಜತೆ ಸೇರಿ ಸಮ್ಮಿಶ್ರ ಸರ್ಕಾರ ಮಾಡಿದೆವು. ಒಪ್ಪಂದ ಮಾಡಿಕೊಂಡು ಸರ್ಕಾರ ರಚನೆ ಮಾಡಿದೆವು. ಒಂದು ವರ್ಷ ಅವರು ಸಿಎಂ, ನಂತರ ನಾನು ಸಿಎಂ. ವರ್ಷ ಕಳೆದ ಬಳಿಕ ಸ್ವಲ್ಪ ಷರತ್ತುಗಳನ್ನು ಹಾಕಿದರು. ತಂದೆ-ಮಕ್ಕಳು ನನಗೆ ಷರತ್ತುಗಳನ್ನು ಹಾಕಿದರು. ಆ ಷರತ್ತಿಗೆ ನಾನು ಒಪ್ಪದೆ ಹೋರಾಟ ಮಾಡಿದೆ. ರಾಜ್ಯಾದ್ಯಂತ ಹೋರಾಟ ಮಾಡಿದ ನೆನೆಪು ಮರೆಯಲಾಗಲ್ಲ. ಆಗ ನಾವು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದೆವು. ನಮ್ಮ ತಪ್ಪಿನಿಂದ ನಮಗೆ ಪೂರ್ಣ ಬೆಂಬಲ ಸಿಗಲಿಲ್ಲ. ಮುಂದಿನ ದಿನಗಳಲ್ಲಿ ಪೂರ್ಣ ಬೆಂಬಲ ಸಿಗುವ ವಿಶ್ವಾಸವಿದೆ. ಮತ್ತೊಮ್ಮೆ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದೇನೆ ಎಂದರು.

2 ವರ್ಷದ ಸಾಧನಾ ಸಮಾವೇಶದಲ್ಲಿ ಸಿಎಂ ಭಾಷಣದ ಸಾರಾಂಶ: 75 ವರ್ಷ ದಾಟಿದವರಿಗೆ ಅಧಿಕಾರ ಕೊಡದಿರಲು ನಿರ್ಧಾರ ಮಾಡಲಾಗಿತ್ತು. ಆದರೆ ನನ್ನ ಮೇಲೆ ಪ್ರೀತಿ ವಾತ್ಸಲ್ಯದಿಂದ ಪ್ರಧಾನಿ ಮೋದಿ, ಅಮಿತ್ ಶಾ ಅವಕಾಶ ಮಾಡಿಕೊಟ್ಟರು. ಮತ್ತೊಮ್ಮೆ ಪ್ರಧಾನಿ ಮೋದಿ ಆಡಳಿತ ಬರಬೇಕು. ಆಗ ಮಾತ್ರ ಭಾರತ ಜಗತ್ತಿನಲ್ಲಿ ಪ್ರಬಲ ರಾಷ್ಟ್ರವಾಗಲಿದೆ. ಇದು ಈ ದೇಶದ ಅಭಿಪ್ರಾಯವಾಗಿದೆ.

ನಾನು ಶಿವಮೊಗ್ಗದಲ್ಲಿ ಸೈಕಲ್‌ನಲ್ಲಿ ಹೋಗಿ ಪಕ್ಷ ಕಟ್ಟಿದ್ದೇನೆ. ನನಗೆ ಕಾರು ಇಲ್ಲದ ಸಂದರ್ಭದಲ್ಲಿ ಸೈಕಲಿನಲ್ಲಿ ಸಂಚಾರ ಮಾಡಿದೆ. ಆದರೆ ಈಗ ದೇಶದಲ್ಲಿ ಪಕ್ಷ ಪ್ರಬಲವಾಗಿ ಬೆಳೆದುನಿಂತಿದೆ. ನಾವೆಲ್ಲಾ ಒಟ್ಟಾಗಿ ಸೇರಿ ಪಕ್ಷವನ್ನು ಬಲಪಡಿಸಿದ್ದೇವೆ. ಇದರ ಪರಿಣಾಮವೇ ನಾವು ಅಧಿಕಾರಕ್ಕೆ ಬಂದಿದ್ದೇವೆ. ನಮ್ಮ ಸಾಧನೆಯನ್ನು ಹೇಳುವುದಕ್ಕೆ ಇಷ್ಟಪಡುವುದಿಲ್ಲ. ಜನರ ಆಶೀರ್ವಾದದಿಂದ ಈ ಸಾಧನೆ ಮಾಡಿದ್ದೇನೆ ಎಂದು ಸಿಎಂ ಬಿಎಸ್‌ವೈ ಹೇಳಿದರು.

(I travelled all over rain affected areas in karnataka like a mad person says chief minister bs yediyurappa)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada