4 ತಿಂಗಳ ಬಳಿಕ ಇಂದಿನಿಂದ ಪದವಿ ಕಾಲೇಜುಗಳು ಆರಂಭ: ಕೊವಿಡ್ ಮಾರ್ಗಸೂಚಿ ಪಾಲನೆಗೇ ಆದ್ಯತೆ

ವಿದ್ಯಾರ್ಥಿಗಳು ಗುಂಪು ಸೇರದಂತೆ ಸೂಚಿಸಿದ್ದು ತರಗತಿಯಲ್ಲಿ ಪಾಠ ಕೇಳುವಾಗ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ಕುಳಿತುಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ.

4 ತಿಂಗಳ ಬಳಿಕ ಇಂದಿನಿಂದ ಪದವಿ ಕಾಲೇಜುಗಳು ಆರಂಭ: ಕೊವಿಡ್ ಮಾರ್ಗಸೂಚಿ ಪಾಲನೆಗೇ ಆದ್ಯತೆ
ಕಾಲೇಜು ಆರಂಭಕ್ಕೆ ಮಾರ್ಗಸೂಚಿ
Follow us
TV9 Web
| Updated By: ಆಯೇಷಾ ಬಾನು

Updated on: Jul 26, 2021 | 9:03 AM

ಬೆಂಗಳೂರು: ರಾಜ್ಯದಲ್ಲಿ 4 ತಿಂಗಳ ಬಳಿಕ ಇಂದಿನಿಂದ ಪದವಿ ಕಾಲೇಜುಗಳ ಭೌತಿಕ ತರಗತಿ ಆರಂಭವಾಗಿದೆ. ಒಂದು ಬೆಂಚ್ಗೆ ಇಬ್ಬರು ವಿದ್ಯಾರ್ಥಿಗಳು ಕೂರಲು ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಗುಂಪು ಸೇರದಂತೆ ಸೂಚಿಸಿದ್ದು ತರಗತಿಯಲ್ಲಿ ಪಾಠ ಕೇಳುವಾಗ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ಕುಳಿತುಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ.

ಕೊವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಎಲ್ಲ ವಿಶ್ವವಿದ್ಯಾಲಯಗಳು, ಕಾಲೇಜುಗಳಿಗೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಸೂಚನೆ ನೀಡಿದ್ದರು. ಅದರಂತೆಯೇ ಕಾಲೇಜುಗಳಲ್ಲಿ ನಿಯಮಗಳನ್ನು ಪಾಲಿಸಲಾಗುತ್ತಿದೆ.

ಕೊರೊನಾ ಮೂರನೇ ಅಲೆ ಆತಂಕದ ನಡುವೆಯೇ ಇಂದಿನಿಂದ ಪದವಿ ಕಾಲೇಜುಗಳು ಪ್ರಾರಂಭವಾಗುತ್ತಿವೆ. ಪದವಿ ಕಾಲೇಜುಗಳ ಜೊತೆ ಎಂಜಿನಿಯರಿಂಗ್, ಡಿಪ್ಲೊಮಾ ತರಗತಿಗಳು ಕೂಡ ಆರಂಭವಾಗುತ್ತಿವೆ. ಮುಂಜಾಗ್ರತಾ ಕ್ರಮಗಳೊಂದಿಗೆ ಕಾಲೇಜು ಪ್ರಾರಂಭಕ್ಕೆ ಶಿಕ್ಷಣ ಇಲಾಖೆ ಸೂಚಿಸಿದೆ. ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮೊದಲನೆಯ ಡೋಸ್ ಲಸಿಕೆ ಕಡ್ಡಾಯವಾಗಿದ್ದು ಈಗಾಗಲೇ ರಾಜ್ಯದಲ್ಲಿ ಶೇಕಡಾ 74ರಷ್ಟು ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ. ಅಧ್ಯಾಪಕ ಮತ್ತು ಸಿಬ್ಬಂದಿ ವರ್ಗಕ್ಕೂ ಲಸಿಕೆ ಹಾಕಲಾಗಿದೆ. ವಿದ್ಯಾರ್ಥಿಗಳು ಕಾಲೇಜಿಗೆ ಬರದಿದ್ದರೂ ಅಧ್ಯಾಪಕರಿಗೆ ಹಾಜರಾತಿ ಕಡ್ಡಾಯ. ಭೌತಿಕ ತರಗತಿಗಳಿಗೆ ವಿದ್ಯಾರ್ಥಿಗಳು ಹಾಜರಾಗದಿದ್ದರೆ. ಆನ್‌ಲೈನ್ ಕ್ಲಾಸ್ ಮೂಲಕ ತರಗತಿಗೆ ಹಾಜರಾಗಬೇಕು. ಆನ್‌ಲೈನ್ ಅಥವಾ ಭೌತಿಕ ತರಗತಿಗೆ ವಿದ್ಯಾರ್ಥಿಗಳು ಹಾಜರಾಗುವುದು ಕಡ್ಡಾಯ.

ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಯಾವೆಲ್ಲ ನಿಯಮ ಪಾಲಿಸಬೇಕು? -ವಿದ್ಯಾರ್ಥಿಗಳು ಕಡ್ಡಾಯವಾಗಿ ಒಂದು ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು -ಲಸಿಕೆ ಹಾಕಿಸದ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶವಿಲ್ಲ -ಯಾವುದೇ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಬರೋದು ಕಡ್ಡಾಯ ಅಲ್ಲ, ವಿದ್ಯಾರ್ಥಿಗಳು ಸ್ವ ಇಚ್ಚೆಯಿಂದ ಕಾಲೇಜಿಗೆ ಬರಬೇಕು -ಕಾಲೇಜು ಪ್ರಾರಂಭ ಆದ್ರೂ ಆನ್ ಲೈನ್ ಕ್ಲಾಸ್ ಮುಂದುವರಿಯಲಿದೆ, ಆನ್ ಲೈನ್/ಆಫ್ ಲೈನ್ ಯಾವುದಾದರೂ ಒಂದಕ್ಕೆ ಹಾಜರಾತಿ ಕಡ್ಡಾಯ -ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗಕ್ಕೆ 2 ಡೋಸ್ ಲಸಿಕೆ ಕಡ್ಡಾಯ -ಪ್ರತಿ ಕಾಲೇಜಿನಲ್ಲೂ ಕಡ್ಡಾಯವಾಗಿ ಕೊರೊನಾ ಮಾರ್ಗಸೂಚಿ ಪಾಲನೆಗೆ ಕ್ರಮವಹಿಸಿಬೇಕು -ಕಾಲೇಜಿಗೆ ಬರೋ ವಿದ್ಯಾರ್ಥಿಗಳಿಗೆ ನಿತ್ಯ ಥರ್ಮಲ್ ಸ್ಕ್ಯಾನಿಂಗ್ ನಡೆಸಬೇಕು -ಕಾಲೇಜು ಆರಂಭ, ನಂತರ ಸ್ಯಾನಿಟೈಸರ್ ಕಡ್ಡಾಯ -ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿಗೆ ಮಾಸ್ಕ್ ಕಡ್ಡಾಯ

ಇದನ್ನೂ ಓದಿ: ಜುಲೈ 26ರಿಂದ ರಾಜ್ಯಾದ್ಯಂತ ಪದವಿ ಕಾಲೇಜುಗಳು ಪುನರಾರಂಭ; ಮಾರ್ಗಸೂಚಿಗಳು ಹೀಗಿವೆ