ಬೆಂಗಳೂರು: ಕ್ರಿಸ್ಮಸ್ ಹಬ್ಬ (Christmas) ಇನ್ನೇನು ಒಂದು ದಿನ ಕಳೆದರೆ ಬಂದೇ ಬಿಡುತ್ತದೆ. ಆದರೆ ಹಬ್ಬಕ್ಕೆ ಊರಿಗೆ ಹೋಗುವ ಪ್ರಯಾಣಿಕರಿಗೆ (passengers) ಮಾತ್ರ ಈ ಸುದ್ದಿ ಶಾಕ್ ನೀಡುತ್ತದೆ. ಇದೀಗ ಕ್ರಿಸ್ಮಸ್ ಹಬ್ಭದ ಪ್ರಯುಕ್ತ ಊರುಗಳಿಗೆ ಪ್ರಯಾಣ ಮಾಡುವ ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳುವ ಪರಿಸ್ಥಿತಿ ಬಂದಿದೆ. ಕ್ರಿಸ್ಮಸ್ ಹಬ್ಭದಂದು ಖಾಸಗಿ ಬಸ್ಗಳು (Private bus) ಪ್ರಯಾಣ ದರವನ್ನು ಏಕಾಏಕಿ ಏರಿಸಿವೆ. ಇದು ಸಾಮಾನ್ಯ ದರಕ್ಕಿಂತ ಕೊಂಚ ಹೆಚ್ಚಾಗಿದೆ. ವಿಮಾನ ಪ್ರಯಾಣದಷ್ಟೇ ಖಾಸಗಿ ಬಸ್ಗಳ ಟಿಕೆಟ್ ದರ ಕೂಡ ದುಬಾರಿಯಾಗಿದೆ.
ಕ್ರಿಸ್ಮಸ್ ಹಬ್ಬಕ್ಕೆ ಊರುಗಳತ್ತ ಹೋಗುವವರ ಸಂಖ್ಯೆ ಜಾಸ್ತಿಯಾಗಿದ್ದು, ಎರಡು ದಿನದಿಂದ ಖಾಸಗಿ ಬಸ್ಗಳ ಟಿಕೆಟ್ ದರ ಏರಿಕೆ ಮಾಡಲಾಗಿದೆ. ಸಾಮಾನ್ಯ ದರಕ್ಕೆ ಹೋಲಿಸಿದ್ರೆ ಎರಡರಿಂದ ಮೂರು ಪಟ್ಟು ಹೆಚ್ಚಳ ಮಾಡಲಾಗಿದ್ದು, ಇದರಿಂದ ಟಿಕೆಟ್ ದರ ನೋಡಿ ಪ್ರಯಾಣಿಕರು ಬೆರಗಾಗುತ್ತಿದ್ದಾರೆ, ಜೊತೆಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಖಾಸಗಿ ಬಸ್ಗಳು ಮಾತ್ರವಲ್ಲದೇ ಸರ್ಕಾರಿ ಬಸ್ಗಳಲ್ಲಿ 200 ರೂಪಾಯಿ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ.
ಇದನ್ನೂ ಓದಿ: Covid19 Scare: ಬಿಎಮ್ ಟಿಸಿ ಮತ್ತು ಕೆಎಸ್ಆರ್ ಟಿಸಿ ಬಸ್ ಗಳಲ್ಲಿ ಪ್ರಯಾಣಿಸುವವರು ಮಾಸ್ಕ್ ಧರಿಸುವುದು ಕಡ್ಡಾಯ!
ಜಿಲ್ಲೆ ಇಂದಿನ ದರ ಹಿಂದಿನ ದರ
ಇನ್ನು ಖಾಸಗಿ ಬಸ್ಗಳ ಟಿಕೆಟ್ ದರ ಏರಿಕೆ ಹಿನ್ನೆಲೆ ಸಾರಿಗೆ ಇಲಾಖೆಯ ಆಡಿಷನಲ್ ಕಮಿಷರ್ ಮಲ್ಲಿಕಾರ್ಜುನ್ರಿಂದ ರೇಸ್ ಕೋರ್ಸ್ ಬಳಿ ಪರಿಶೀಲನೆ ಮಾಡಲಾಗಿದೆ. ಖಾಸಗಿ ಬಸ್ಗಳಲ್ಲದೇ ಸರ್ಕಾರಿ ಬಸ್ಗಳಲ್ಲಿಯೂ ಪರಿಶೀಲನೆ ಮಾಡಲಾಗುತ್ತಿದೆ. ಐರಾವತ, ಅಂಬಾರಿ ಬಸ್ಗಳಲ್ಲಿ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ.
ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೊರೋನಾ ಸೋಂಕು (Coronavirus) ಪ್ರಕರಣಗಳು ಹೆಚ್ಚಾಗುತ್ತಿರುವುದು ಹಾಗೂ ದೇಶದಲ್ಲೂ ಹೊಸ ರೂಪಾಂತರಿ ವೈರಾಣು ಸೋಂಕು ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್ಗಳಲ್ಲಿ (BMTC Bus) ಪ್ರಯಾಣಿಸುವ ಪ್ರಯಾಣಿಕರಿಗೆ ಮಾಸ್ಕ್ (Mask) ಕಡ್ಡಾಯ ಮಾಡಲಾಗಿದೆ.
ಇದನ್ನೂ ಓದಿ: COVID 19: ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಪ್ರಯಾಣಿಸುವವರಿಗೆ ಮಾಸ್ಕ್ ಕಡ್ಡಾಯ: ಇಲ್ಲದಿದ್ದರೆ ನೋ ಎಂಟ್ರಿ…!
ಕೊರೋನಾ ರೂಪಾಂತರಿ ತಳಿ BF.7 ಆತಂಕ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ಗಳ ಕಂಡಕ್ಟರ್, ಡ್ರೈವರ್, ಪ್ರಯಾಣಿಕರಿಗೂ ಮಾಸ್ಕ್ ಕಡ್ಡಾಯ ಮಾಡಿದೆ. ಈ ಸಂಬಂಧ ಶೀಘ್ರವೇ ಬಿಎಂಟಿಸಿ ಗೈಡ್ಲೈನ್ಸ್ ಬಿಡುಗಡೆ ಮಾಡಲಿದೆ. ನಾಳೆಯಿಂದ (ಡಿಸೆಂಬರ್ 24) ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಸಬೇಕಾದರೆ ಮಾಸ್ಕ್ ಕಡ್ಡಾಯವಾಗಿ ಧರಸಬೇಕು. ಒಂದು ವೇಳೆ ಮಾಸ್ಕ್ ಹಾಕಿಲ್ಲ ಅಂದ್ರೆ ಬಸ್ ಹತ್ತುವಂತಿಲ್ಲ.
ಈ ಬಗ್ಗೆ ಸಂಚಾರ ನಿಯಂತ್ರಕರು ಮೆಜೆಸ್ಟಿಕ್, ಬಿಎಂಟಿಸಿ ಬಸ್ ಡ್ರೈವರ್, ಕಂಡಕ್ಟರ್ ಗಳಿಗೂ ಗೈಡ್ಲೈನ್ಸ್ ನೀಡುತ್ತಿದ್ದು, ಮಾಸ್ಕ್ ಧರಿಸುವಂತೆ ಹೇಳುತ್ತಿದ್ದಾರೆ. ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಂಚಾರ ನಿಯಂತ್ರಕರು, ಇಂದು ಮೊದಲನೇ ದಿನವಾದ್ದರಿಂದ ಎಲ್ಲರಿಗೂ ಸೂಚನೆ ನೀಡಿದ್ದೇವೆ. ನಾಳೆ(ಡಿ.24) ಬೆಳಗ್ಗೆ ಮಾಸ್ಕ್ ಹಾಕಿಲ್ಲ ಅಂದ್ರೆ ಗಾಡಿಯೊಳಗೆ(ಬಸ್) ಪ್ರವೇಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:55 pm, Fri, 23 December 22