ಬೆಂಗಳೂರಿನಲ್ಲಿ 10 ಕೋಟಿ ರೂ. ಜೆರಾಕ್ಸ್ ನೋಟ್ ಪತ್ತೆ ಪ್ರಕರಣಕ್ಕೆ ಫರ್ಜಿ ಸಿರೀಸ್ ಲಿಂಕ್, ತನಿಖೆ ವೇಳೆ ಹಲವು ಅನುಮಾನ

ತಲಘಟ್ಟಪುರದಲ್ಲಿ 10 ಕೋಟಿ ಮೊತ್ತದ ಜೆರಾಕ್ಸ್ ನೋಟ್ ಪತ್ತೆಯಾಗಿತ್ತು. ಈ ಪ್ರಕರಣ ಸಂಬಂಧ ತನಿಖೆ ಮುಂದುವರೆದಿದ್ದು ನಕಲಿ ನೋಟು ಪತ್ತೆ ಹಿಂದೆ ಬಿದ್ದ ಪೊಲೀಸರಿಗೆ ನಾನಾ ಅನುಮಾನಗಳು ಸುಳಿದಾಡುತ್ತಿವೆ.

ಬೆಂಗಳೂರಿನಲ್ಲಿ 10 ಕೋಟಿ ರೂ. ಜೆರಾಕ್ಸ್ ನೋಟ್ ಪತ್ತೆ ಪ್ರಕರಣಕ್ಕೆ ಫರ್ಜಿ ಸಿರೀಸ್ ಲಿಂಕ್, ತನಿಖೆ ವೇಳೆ ಹಲವು ಅನುಮಾನ
ತಲಘಟ್ಟಪುರದಲ್ಲಿ 10 ಕೋಟಿ ಮೊತ್ತದ ಜೆರಾಕ್ಸ್ ನೋಟ್ ಪತ್ತೆ
Edited By:

Updated on: Aug 04, 2023 | 8:26 AM

ಬೆಂಗಳೂರು, ಆ.04: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಾಗುತ್ತಿದೆ(Fake Notes). ಇತ್ತೀಚೆಗಷ್ಟೇ ತಲಘಟ್ಟಪುರದಲ್ಲಿ 10 ಕೋಟಿ ಮೊತ್ತದ ಜೆರಾಕ್ಸ್ ನೋಟ್ ಪತ್ತೆಯಾಗಿತ್ತು. ಈ ಸಂಬಂಧ ಪೊಲೀಸರು ತನಿಖೆ ನಡೆಸಿ ಮೂವರನ್ನು ಬಂಧಿಸಿದ್ದರು. ಸದ್ಯ ಈ ಪ್ರಕರಣ ಸಂಬಂಧ ತನಿಖೆ ಮುಂದುವರೆದಿದ್ದು ನಕಲಿ ನೋಟು ಪತ್ತೆ ಹಿಂದೆ ಬಿದ್ದ ಪೊಲೀಸರಿಗೆ(Talaghattapura Police) ನಾನಾ ಅನುಮಾನಗಳು ಸುಳಿದಾಡುತ್ತಿವೆ. ವೆಬ್ ಸಿರೀಸ್ ನೋಡಿ ಅದರಿಂದ ಪ್ರಭಾವಿತರಾಗಿ ಹಣ ಜೆರಾಕ್ಸ್ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಕೆಲ ತಿಂಗಳ ಹಿಂದೆ ಅಮೆಜಾನ್ ಪ್ರೈಮ್​ನಲ್ಲಿ ರಿಲೀಸ್ ಆಗಿ ಭಾರೀ ಸದ್ದು ಮಾಡಿದ ಫರ್ಜಿ(Farzi) ಎಂಬ ವೆಬ್ ಸಿರೀಸ್ ನೋಡಿ ಪ್ರಭಾವಿತರಾಗಿ ಈ ಖದೀಮರು ಈ ದಂಧೆಗೆ ಇಳಿದಿರಬಹುದು ಎಂಬ ಅನುಮಾನ ಹುಟ್ಟುಕೊಂಡಿದೆ. 500 ಮುಖಬೆಲೆಯ ಅಸಲಿ ನೋಟನ್ನು ಪಡೆದು 2000 ಮುಖಬೆಲೆ ನಕಲಿ ನೋಟು ಕೊಡುತ್ತಿದ್ದ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆದ್ರೆ ಇತ್ತೀಚೆಗಷ್ಟೇ 2 ಸಾವಿರ ಮುಖಬೆಲೆಯ ನೋಟನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿತ್ತು. ಹೀಗಾಗಿ ದುಷ್ಕರ್ಮಿಗಳು ಅದನ್ನು ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಈ ಆಂಗಲ್​ನಲ್ಲಿ ತಲಘಟ್ಟಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸದ್ದಿಲ್ಲದೇ ತಲೆ ಎತ್ತಿದ ನಕಲಿ ನೋಟ್ ದಂಧೆ; ಇನ್ಸ್ಟಾಗ್ರಾಮ್ ಮೂಲಕ ವ್ಯವಹಾರ, ಮೂವರ ಬಂಧನ

ಪೊಲೀಸರ ತಲೆ ಕೆಡಿಸಿದೆ ಜೆರಾಕ್ಸ್ ಹಣದ ಪಕ್ಕ ಸಿಕ್ಕ ಚೊಂಬು

ಇನ್ನು ಪೊಲೀಸರು ಈ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದು ತನಿಖೆ ವೇಳೆ ಜೆರಾಕ್ಸ್ ಹಣದ ಪಕ್ಕ ಚೊಂಬು ಸಿಕ್ಕಿದೆ. ಒಂದು ವೇಳೆ ರೈಸ್ ಪುಲ್ಲಿಂಗ್ ದಂಧೆಕೋರರು ಈ ದಂಧೆಯನ್ನು ನಡೆಸಿರಬಹುದಾ ಎಂದು ಕೂಡ ಪೊಲೀಸರು ತನಿಖೆ ಮಾಡ್ತಿದ್ದಾರೆ. ಅಥವಾ ಪೊಲೀಸರನ್ನು ಡೈವರ್ಟ್ ಮಾಡಲು ಚೊಂಬು ಇಟ್ಟಿರಬಹದಾ ಎಂಬ ಆಂಗಲ್​ನಲ್ಲೂ ತನಿಖೆ ನಡೆಯುತ್ತಿದೆ. 2000 ಮುಖಬೆಲೆಯ ಜೆರಾಕ್ಸ್ ನೋಟ್ ಪತ್ತೆಗೆ ಅಸಲಿ ಕಾರಣ ಪತ್ತೆ ಹಚ್ಚುವುದು ಪೊಲೀಸರಿಗೂ ತಲೆನೋವಾಗಿದೆ. ಎಲ್ಲಾ ಮಾದರಿಯಲ್ಲೂ ತಲಘಟ್ಟಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ