ಬೆಂಗಳೂರಿನಲ್ಲಿ ಸದ್ದಿಲ್ಲದೇ ತಲೆ ಎತ್ತಿದ ನಕಲಿ ನೋಟ್ ದಂಧೆ; ಇನ್ಸ್ಟಾಗ್ರಾಮ್ ಮೂಲಕ ವ್ಯವಹಾರ, ಮೂವರ ಬಂಧನ

ಕಾಟನ್ ಪೇಟೆ ಪೊಲೀಸರು ಮೂವರು ನಕಲಿ ನೋಟ್ ದಂಧೆಕೋರರನ್ನು ಬಂಧಿಸಿದ್ದಾರೆ. ಬಂಧಿತರು ಬಿಹಾರ್ ನಿಂದ ಐನೂರು ಮುಖಬೆಲೆಯ ಗರಿಗರಿ ನಕಲಿ ನೋಟು ತರಿಸಿಕೊಂಡು ಕಾಳಸಂತೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿ ದಂಧೆ ನಡೆಸುತಿದ್ದದ್ದು ಬಯಲಾಗಿದೆ.

ಬೆಂಗಳೂರಿನಲ್ಲಿ ಸದ್ದಿಲ್ಲದೇ ತಲೆ ಎತ್ತಿದ ನಕಲಿ ನೋಟ್ ದಂಧೆ;  ಇನ್ಸ್ಟಾಗ್ರಾಮ್ ಮೂಲಕ ವ್ಯವಹಾರ, ಮೂವರ ಬಂಧನ
ನಕಲಿ ನೋಟು
Follow us
TV9 Web
| Updated By: ಆಯೇಷಾ ಬಾನು

Updated on: Aug 01, 2023 | 10:12 AM

ಬೆಂಗಳೂರು, ಆ.01: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಕಲಿ ನೋಟ್​ಗಳ ದಂಧೆ(Fake Notes) ಶುರುವಾಗಿದೆ. ಕೆಲ ತಿಂಗಳ ಹಿಂದೆ ಅಮೆಜಾನ್ ಪ್ರೈಮ್​ನಲ್ಲಿ ರಿಲೀಸ್ ಆದ ಫರ್ಜಿ(Farzi) ಎಂಬ ಸಿರೀಸ್​ನಲ್ಲಿ ನಕಲಿ ನೋಟುಗಳ ದಂಧೆ ಬಗ್ಗೆ ಕುತೂಹಲ ಮೂಡಿಸುವ ಸಂಗತಿಗಳನ್ನು ಬಿಚ್ಚಿಡಲಾಗಿದೆ. ಈಗ ಬೆಂಗಳೂರಿನಲ್ಲೂ ನಕಲಿ ನೋಟುಗಳ ಚಲನೆ ನಡೆಯುತ್ತಿದೆ. ಉತ್ತರ ಭಾರತದಿಂದ ಬರುವ ಈ ನೋಟುಗಳು ಸದ್ದಿಲ್ಲದೇ ಮಾರಾಟವಾಗುತಿದ್ದು, ನಕಲಿ ನೋಟುಗಳ ಹಾವಳಿ ಹೆಚ್ಚಾಗುತ್ತಿದೆ.

ಇತ್ತೀಚೆಗೆ ತಲಘಟ್ಟಪುರ ಠಾಣಾ ವ್ಯಾಪ್ತಿಯ ಜಾಗವೊಂದರಲ್ಲಿ ಎರಡು ಸಾವಿರದ ಗರಿಗರಿ ನೋಟುಗಳು ಬ್ಯಾಗ್ ನಲ್ಲಿ ಪತ್ತೆಯಾಗಿದ್ದವು. ಇದನ್ನು ಕಂಡ ಪೊಲೀಸರೇ ಒಂದು ಕ್ಷಣ ಅಸಲಿ ನೋಟ್ ಅಂತ ದಂಗಾಗಿದ್ದರು. ಬಳಿಕ ಅದನ್ನು ಪರಿಶೀಲಿಸಿದಾಗ ಅದು ಅಸಲಿ ಅಲ್ಲ ನಕಲಿ ಅನ್ನೊದು ಗೊತ್ತಾಗಿತ್ತು. ಆದ್ರೆ ಇದು ಬಂದಿದೆಲ್ಲಿಂದ? ಯಾರು ತಂದು ಹಾಕಿದರೂ ಅನ್ನೊ ಯೋಚನೆ ಮಾಡುವ ಹಂತದಲ್ಲಿರುವಾಗಲೇ ಇತ್ತ ಕಾಟನ್ ಪೇಟೆ ಪೊಲೀಸರು ಮೂವರು ನಕಲಿ ನೋಟ್ ದಂಧೆಕೋರರನ್ನು ಬಂಧಿಸಿದ್ದಾರೆ. ಆದ್ರೆ ತಲಘಟ್ಟಪುರದಲ್ಲಿ ಸಿಕ್ಕ ನೋಟಿಗೂ ಈ ಆರೋಪಿಗಳಿಗೂ ಯಾವುದೇ ಸಂಬಂಧವಿಲ್ಲ.

ಇದನ್ನೂ ಓದಿ: ನಕಲಿ ನೋಟುಗಳ ಹಾವಳಿ: ಬ್ಯಾಂಕ್ ಮ್ಯಾನೇಜರ್ ವಿರುದ್ಧವೇ ಬೆಂಗಳೂರಿನಲ್ಲಿ ದೂರು ದಾಖಲಿಸಿದ ಆರ್​ಬಿಐ

ಇನ್ನು ಈ ಬಂಧಿತರು ಬಿಹಾರ್ ನಿಂದ ಐನೂರು ಮುಖಬೆಲೆಯ ಗರಿಗರಿ ನಕಲಿ ನೋಟು ತರಿಸಿಕೊಂಡು ಕಾಳಸಂತೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿ ದಂಧೆ ನಡೆಸುತಿದ್ದದ್ದು ಬಯಲಾಗಿದೆ. ಬಂಧಿತರಲ್ಲಿ ತಮಿಳುನಾಡು ಮೂಲದ ಶರವಣ ಪ್ರಮುಖ ಆರೋಪಿಯಾಗಿದ್ದಾನೆ. ಈತ ಇನ್ಟಾಗ್ರಾಂನಲ್ಲಿ ಫೇಕ್ ಕರೆನ್ಸಿ ತಮಿಳುನಾಡು ಹಾಗೂ ಮೋಟೊ ಹ್ಯಾಕರ್ ಎಂಬ ಐಡಿಗಳ ಮೂಲಕ ಅದರಲ್ಲಿ ನಕಲಿ ನೋಟ್ ಗಳ ಮಾರಾಟದ ವ್ಯವಹಾರ ನಡೆಸುತ್ತಿದ್ದ. ಗ್ರಾಹಕರಿಂದ ಐದು ಸಾವಿರ ಅಸಲಿ ನೋಟು ಪಡೆದು 10 ಸಾವಿರ ನಕಲಿ ನೋಟು ನೀಡೊ ಮುಖಾಂತರ ದಂಧೆ ನಡೆಸುತ್ತಿದ್ದರು. ಇನ್ನು ಈತನಿಂದ ಇದೇ ಮಾದರಿ ನಕಲಿ ನೋಟು ಪಡೆದಿದ್ದ ಕೇರಳ ಮೂಲದ ದೇವನ್ ಹಾಗೂ ನಿತಿನ್ ಎಂಬುವವರನ್ನು ಬಂಧಿಸಿದ್ದು, ಬಂಧಿತರಿಂದ 6.53 ಲಕ್ಷ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.

ಶರವಣ ಬಿಹಾರದಿಂದ ಈ ನಕಲಿ ನೋಟು ತರುತಿದ್ದನಂತೆ. ವ್ಯವಸ್ಥಿತ ಜಾಲದೊಂದಿಗೆ ಸಂಪರ್ಕ ಹೊಂದಿದ ಈತ ನಾಲ್ಕು ಲಕ್ಷ ನೀಡಿ ಹತ್ತು ಲಕ್ಷದಂತೆ ನಕಲಿ ನೋಟು ತಂದು ಇಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತಿದ್ದ ಅನ್ನೊದು ತನಿಖೆಯಿಂದ ಬೆಳಕಿಗೆ ಬಂದಿದೆ. ಸದ್ಯ ರಾಜ್ಯದಲ್ಲೂ ಸಹ ವ್ಯವಸ್ಥಿತ ನಕಲಿ ನೋಟಿನ ದಂಧೆ ಶುರುವಾಗಿದ್ದು, ಇದರ ಕಡಿವಾಣ ಹಾಕಬೇಕಾಗಿರೋದು ಅವಶ್ಯಕವಾಗಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?