ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ಭೇಟಿಯಾದ ತಮಿಳುನಾಡು ಸಚಿವ ಶೇಖರ್ ಬಾಬು ಪುತ್ರಿ; ಪೊಲೀಸ್ ರಕ್ಷಣೆಗೆ ಮನವಿ

| Updated By: preethi shettigar

Updated on: Mar 09, 2022 | 7:04 PM

ಈ ಪ್ರಕರಣದ ವಿಚಾರವಾಗಿ ಸದ್ಯ ಗೃಹ ಸಚಿವರು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್​ ಜತೆ ಮಾತನಾಡಿದ್ದಾರೆ. ಬಳಿಕ ಬೆಂಗಳೂರು ಪೊಲೀಸ್ ಆಯುಕ್ತರನ್ನು ಭೇಟಿ ಮಾಡುವಂತೆ ಜಯ ಕಲ್ಯಾಣಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚಿಸಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ಭೇಟಿಯಾದ ತಮಿಳುನಾಡು ಸಚಿವ ಶೇಖರ್ ಬಾಬು ಪುತ್ರಿ; ಪೊಲೀಸ್ ರಕ್ಷಣೆಗೆ ಮನವಿ
ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ಭೇಟಿಯಾದ ತಮಿಳುನಾಡು ಸಚಿವ ಶೇಖರ್ ಬಾಬು ಪುತ್ರಿ
Follow us on

ಬೆಂಗಳೂರು: ತಮಿಳುನಾಡು ಸಚಿವ ಶೇಖರ್ ಬಾಬು (Sekar Babu) ಅವರ ಮಗಳು ಜಯ ಕಲ್ಯಾಣಿ ಕಳೆದ ವರ್ಷ ತಮಿಳುನಾಡಿನಿಂದ ನಾಪತ್ತೆಯಾಗಿದ್ದರು. ಈ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ನಿಜಾಂಶ ಬಯಲಾಗಿದೆ. ಹಗರಿ ಬೊಮ್ಮನಹಳ್ಳಿ ಮೂಲದ ಸತೀಶ್ ಎಂಬ ಯುವಕನನ್ನು ಪ್ರೀತಿಸಿದ್ದ ಜಯ ಕಲ್ಯಾಣಿ (Jaya Kalyani) ಇತ್ತೀಚೆಗಷ್ಟೇ ತನ್ನ ಪ್ರಿಯಕರನನ್ನು ಮದುವೆಯಾಗಿದ್ದರು(Marriage). ಆದರೆ ತನ್ನ ಮದುವೆಗೆ ತಂದೆಯೇ ವಿಲನ್​ ಆಗಿದ್ದಾರೆ ಎಂದಿರುವ ಪುತ್ರಿ, ತನ್ನ ತಂದೆಯಿಂದ ತನಗೆ ರಕ್ಷಣೆ ಕೊಡಿಸಬೇಕೆಂದು ಬೆಂಗಳೂರು ಕಮಿಷನರ್​ ಕಚೇರಿಗೆ ಭೇಟಿ ನೀಡಿದ್ದರು. ಈಗ ಮತ್ತೆ ತನ್ನ ತಂದೆಯಿಂದ ಜೀವ ಬೆದರಿಕೆ ಇರುವ ಕಾರಣ ರಕ್ಷಣೆ ನೀಡುವಂತೆ ಮನವಿ ಮಾಡಿದ ಜಯ ಕಲ್ಯಾಣಿ, ಬೆಂಗಳೂರಿನ ಜಯಮಹಲ್​ನಲ್ಲಿರುವ ಗೃಹ ಸಚಿವರ ಸರ್ಕಾರಿ ನಿವಾಸದಲ್ಲಿ ಆರಗ ಜ್ಞಾನೇಂದ್ರರನ್ನು ಭೇಟಿಯಾಗಿದ್ದಾರೆ. ಸದ್ಯ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ರಕ್ಷಣೆ ನೀಡುವ ಭರವಸೆ ನೀಡಿದ್ದಾರೆ.

ಈ ಪ್ರಕರಣದ ವಿಚಾರವಾಗಿ ಸದ್ಯ ಗೃಹ ಸಚಿವರು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್​ ಜತೆ ಮಾತನಾಡಿದ್ದಾರೆ. ಬಳಿಕ ಬೆಂಗಳೂರು ಪೊಲೀಸ್ ಆಯುಕ್ತರನ್ನು ಭೇಟಿ ಮಾಡುವಂತೆ ಜಯ ಕಲ್ಯಾಣಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚಿಸಿದ್ದಾರೆ.

ತಮಿಳುನಾಡು ಸರ್ಕಾರದ ಮುಜರಾಯಿ ಇಲಾಖೆ ಸಚಿವರ ಮಗಳು ತಮ್ಮ ಪ್ರಿಯಕರನನ್ನು ಮದುವೆಯಾಗಿದ್ದು, ತಮಗೆ ತಮ್ಮ ತಂದೆ ಸಚಿವ ಶೇಖರ್ ಬಾಬು ಅವರಿಂದ ಜೀವ ಬೆದರಿಕೆ ಇದೆ, ತಮಗೆ ರಕ್ಷಣೆ ನೀಡಿ ಎಂದು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ. ನನ್ನ ತಂದೆ ಸಚಿವರಾಗಿರುವುದರಿಂದ ನಮಗೆ ತಮಿಳುನಾಡು ಸರ್ಕಾರದಿಂದ ಯಾವುದೇ ಸಹಾಯ ಸಿಗುವುದಿಲ್ಲ. ಹೀಗಾಗಿ, ಕರ್ನಾಟಕ ಪೊಲೀಸರ ಬಳಿ ರಕ್ಷಣೆಗಾಗಿ ಮನವಿ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.

ತಮಿಳುನಾಡು ಮುಜರಾಯಿ ಇಲಾಖೆ ಸಚಿವ ಶೇಖರ್​ ಬಾಬು ಅವರ ಮಗಳು ಜಯಕಲ್ಯಾಣಿ ಹಾಗೂ ಸತೀಶ್ ಕುಮಾರ್ ಕಳೆದ 6 ವರ್ಷದಿಂದ ಪ್ರೀತಿಸುತ್ತಿದ್ದರು. ಅವರ ಪ್ರೀತಿಗೆ ಮನೆಯವರು ಒಪ್ಪದ ಕಾರಣ 6 ತಿಂಗಳ ಹಿಂದೆ ಅವರಿಬ್ಬರೂ ಓಡಿಹೋಗಲು ನಿರ್ಧರಿಸಿದ್ದರು. ಆದರೆ, ಅವರ ತಂದೆ ಸಚಿವ ಶೇಖರ್ ಬಾಬು ತಮ್ಮ ಅಧಿಕಾರ ಬಳಸಿ ಪುಣೆಯಲ್ಲಿ ಅವರಿಬ್ಬರನ್ನು ಪತ್ತೆ ಹಚ್ಚಿ, ತಮ್ಮ ಮಗಳನ್ನು ವಾಪಾಸ್ ಕರೆತಂದಿದ್ದರು.

ಇದಾದ ಬಳಿಕ 2 ತಿಂಗಳು ಕಾಲ ಪ್ರಿಯಕರ ಸತೀಶ್​ ಕುಮಾರ್​ನನ್ನು ಗೃಹ ಬಂಧನದಲ್ಲಿ ಇರಿಸಿದ್ದರು. ಈ ಪ್ರಕರಣದ ಕುರಿತಾಗಿ ಸತೀಶ್ ಕುಮಾರ್​ ಅವರ ಕುಟುಂಬದ ಸದಸ್ಯರಿಗೂ ತೊಂದರೆ ನೀಡಲಾಗಿದೆ ಎಂದು ಜಯ ಕಲ್ಯಾಣಿ ತಮ್ಮ ತಂದೆಯ ವಿರುದ್ಧ ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ ಗೃಹಬಂಧನದಲ್ಲಿದ್ದ ಅವರು ಕಳೆದ ಮೂರು ದಿನಗಳ ಹಿಂದೆ ಮನೆ ಬಿಟ್ಟು ಓಡಿ ಹೋಗಿದ್ದರು. ನಂತರ ಕರ್ನಾಟಕದಲ್ಲಿ ಮದುವೆಯಾಗಿದ್ದರು.

ಅವರಿಬ್ಬರು ಹಾಲಸ್ವಾಮಿ ಮಠದಲ್ಲಿ ಹಿಂದೂ ಧರ್ಮದ ಅನುಸಾರ ಮದುವೆ ಆಗಿದ್ದಾರೆ. ಈಗಾಗಲೇ ಮಗಳು ನಾಪತ್ತೆಯಾದ ಹಿನ್ನಲೆಯಲ್ಲಿ ಸತೀಶ್​ ಕುಮಾರ್​​ ಅವರ ಸಂಬಂಧಿಕರನ್ನು ಅಕ್ರಮವಾಗಿ ಬಂಧಿಸಲಾಗಿದೆ. ನಮಗೆ ಪ್ರಾಣ ರಕ್ಷಣೆ ಬೇಕು ಎಂದು ಸಂಪರ್ಕಿಸಿದ ಹಿನ್ನೆಲೆಯಲ್ಲಿ ಪೊಲೀಸರ ಮುಂದೆ ಕರೆತರಲಾಗಿದೆ ಎಂದಿದ್ದಾರೆ. ತಮಿಳುನಾಡು ಮುಜರಾಯಿ ಸಚಿವರ ಮಗಳು ಜಯ ಕಲ್ಯಾಣಿ ಎಂಬಿಬಿಎಸ್​ ಪದವೀಧರೆಯಾಗಿದ್ದಾರೆ. ಸತೀಶ್​​ ಕುಮಾರ್​ ಡಿಪ್ಲೋಮಾ ಓದಿದ್ದು, ಚೆನ್ನೈನಲ್ಲಿ ಉದ್ಯಮಿಯಾಗಿದ್ದಾರೆ.

ಇದನ್ನೂ ಓದಿ:

ನಮ್ಮ ರಾಜ್ಯ ವಿದೇಶಿಗರ ಪಾಲಿಗೆ ಧರ್ಮಛತ್ರ ಅಲ್ಲ: ವಿಧಾನ ಪರಿಷತ್​ನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ

ಮೃತ ನವೀನ್ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ; ಮೃತದೇಹ ತರಿಸುವ ಬಗ್ಗೆ ಮೋದಿಗೆ ಪತ್ರ ಬರೆಯುವುದಾಗಿ ಹೇಳಿಕೆ

Published On - 7:03 pm, Wed, 9 March 22