ನನ್ನ ವಾಸ್ತವ್ಯ ಏನಿದ್ರೂ ನನ್ನ ಜಮೀನಿನಲ್ಲಿ, ಇನ್ಮುಂದೆ ತಾಜ್ ವೆಸ್ಟ್ ಎಂಡ್ ಹೋಟೆಲ್ ಗೆ ಹೋಗುವುದಿಲ್ಲ ಎಂದ ಹೆಚ್ಡಿ ಕುಮಾರಸ್ವಾಮಿ

ಇವರೇನು ರೈತರ ಮಕ್ಕಳಾ, ಮಣ್ಣಿನ ಮಕ್ಕಳಾ ಎಂದು ಹೇಳ್ತಾರೆ. ಒಂದೇ ವರ್ಷದಲ್ಲಿ 4.30 ಲಕ್ಷ ಮೌಲ್ಯದ ಬಾಳೆ ಬೆಳೆದಿದ್ದೇನೆ. 4.30 ಲಕ್ಷ ರೂ. ಮೌಲ್ಯದ ಬಾಳೆ ಬೆಳೆದು ಬಿಲ್ ಪಡೆದಿದ್ದೇನೆ. ಈಗ ಅದೇ ಜಮೀನಿನಲ್ಲಿ ವಾಸ ಮಾಡುತ್ತಿದ್ದೇನೆ. ಈಗ ವೆಸ್ಟೆಂಡ್ ಹೋಟೆಲ್ನಲ್ಲಿಲ್ಲ ಮುಂದಕ್ಕೂ ಇರುವುದಿಲ್ಲ....

ನನ್ನ ವಾಸ್ತವ್ಯ ಏನಿದ್ರೂ ನನ್ನ ಜಮೀನಿನಲ್ಲಿ, ಇನ್ಮುಂದೆ ತಾಜ್ ವೆಸ್ಟ್ ಎಂಡ್ ಹೋಟೆಲ್ ಗೆ ಹೋಗುವುದಿಲ್ಲ ಎಂದ ಹೆಚ್ಡಿ ಕುಮಾರಸ್ವಾಮಿ
ಹೆಚ್ಡಿ ಕುಮಾರಸ್ವಾಮಿ
Follow us
TV9 Web
| Updated By: ಆಯೇಷಾ ಬಾನು

Updated on:Mar 09, 2022 | 6:01 PM

ಬೆಂಗಳೂರು: ಇನ್ಮುಂದೆ ನನ್ನ ವಾಸ್ತವ್ಯ ಏನಿದ್ದರೂ ಜಮೀನಿನಲ್ಲಿ, ತಾಜ್ ವೆಸ್ಟ್ ಎಂಡ್ ಹೋಟೆಲ್ಗೆ(Taj West End Hotel) ಹೋಗುವುದಿಲ್ಲ. ಕೆಲಸ ಇದ್ದರೆ ಮಾತ್ರ ಬೆಂಗಳೂರಿಗೆ ಬರುತ್ತೇನೆ ಎಂದು ವಿಧಾನಸಭೆಯಲ್ಲಿ ಜೆಡಿಎಲ್ಪಿ ನಾಯಕ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ನನ್ನ ಕರ್ಮಭೂಮಿ, ವಾಸ್ತವ್ಯ ಏನಿದ್ರೂ ಕೇತಗಾನಹಳ್ಳಿಯಲ್ಲಿ. ನಾನು 1984-85ರಲ್ಲಿ 4.50 ಲಕ್ಷ ಹಣ ಕೊಟ್ಟು ಜಮೀನು ಖರೀದಿಸಿದ್ದೆ. ರಾಜಕೀಯಕ್ಕೆ ಬರುವುದಕ್ಕೂ ಮೊದಲು ಖರೀದಿಸಿದ್ದ ಜಮೀನಿನ ಮೇಲೆ ಸುಮ್ಮನೆ ಕೇಸ್ ಹಾಕಿದ್ದರು. ನಾನು ಭೂಮಿ ದಾನ ಮಾಡೋಣ ಅಂತಿದ್ದೆ ಎಂದು ಹೆಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಇವರೇನು ರೈತರ ಮಕ್ಕಳಾ, ಮಣ್ಣಿನ ಮಕ್ಕಳಾ ಎಂದು ಹೇಳ್ತಾರೆ. ಒಂದೇ ವರ್ಷದಲ್ಲಿ 4.30 ಲಕ್ಷ ಮೌಲ್ಯದ ಬಾಳೆ ಬೆಳೆದಿದ್ದೇನೆ. 4.30 ಲಕ್ಷ ರೂ. ಮೌಲ್ಯದ ಬಾಳೆ ಬೆಳೆದು ಬಿಲ್ ಪಡೆದಿದ್ದೇನೆ. ಈಗ ಅದೇ ಜಮೀನಿನಲ್ಲಿ ವಾಸ ಮಾಡುತ್ತಿದ್ದೇನೆ. ಈಗ ವೆಸ್ಟೆಂಡ್ ಹೋಟೆಲ್ನಲ್ಲಿಲ್ಲ ಮುಂದಕ್ಕೂ ಇರುವುದಿಲ್ಲ. ಇನ್ನೇನಿದ್ದರೂ ನನ್ನ ವಾಸ್ತವ್ಯ ನನ್ನ ಜಮೀನಿನಲ್ಲಿಯೇ ಎಂದರು. ಇನ್ನು ಈ ವೇಳೆ ಸಚಿವ ಜೆ.ಸಿ.ಮಾಧುಸ್ವಾಮಿ, ಹೆಚ್ಡಿ ಕುಮಾರಸ್ವಾಮಿ ಕಾಲೆಳೆದಿದ್ದಾರೆ. ಆ ವೆಸ್ಟೆಂಡ್ನವನಿಗೆ ಹೇಳಿ ರೈತರ ಮಕ್ಕಳಿಗೆ ರಿಯಾಯಿತಿ ಕೊಡಿಸಿ ಎಂದು ಸಚಿವ ಮಾಧುಸ್ವಾಮಿ ಕಾಲೆಳೆದಿದ್ದಾರೆ. ಆದರೆ ನಮಗೇನು ರಿಯಾಯಿತಿ ಕೊಟ್ಟಿಲ್ಲ. ನನ್ನದೊಬ್ಬನದ್ದೇ ಪ್ರಚಾರ ಬಂದಿದ್ದು, ಬೇರೆಯವರು ಹೋಗ್ತಾರೆ ಎಂದು ಕುಮಾರಸ್ವಾಮಿ ಹೇಳಿದ್ರು.

ನಿವೃತ್ತ ಐಎಎಸ್ ಅಧಿಕಾರಿ ಬರೆದ ಪುಸ್ತಕದ ಬಗ್ಗೆ HDK ಉಲ್ಲೇಖ ಇನ್ನು ಸಿಬಿಐ ಮೇಲೆ ನಂಬಿಕೆ ಹೊರಟು ಹೋಯ್ತು ಎಂದು ವಿಧಾನಸಭೆಯಲ್ಲಿ ಚರ್ಚೆ ವೇಳೆ ಹೆಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ವೇಳೆ ನಿವೃತ್ತ ಐಎಎಸ್ ಅಧಿಕಾರಿ ಬರೆದ ಪುಸ್ತಕWho owns CBI? ನೇಕೆಡ್ ಟ್ರೂಥ್ ಪುಸ್ತಕದ ಬಗ್ಗೆ ಉಲ್ಲೇಖ ಮಾಡಿದ್ರು. ಸಿಬಿಐಯನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ರಾಮನಗರ ಪ್ರಾಧಿಕಾರದಲ್ಲಿ 16 ಕೋಟಿ ಎಫ್ಡಿ ಇಟ್ಟಿದ್ದೇವೆ. ಠೇವಣಿ ಇಟ್ಟಿದ್ದೇವೆ ಎಂದು 16 ಕೋಟಿ ಲಪಟಾಯಿಸಲಾಗಿದೆ. ಈ ಪ್ರಕರಣ ಉಲ್ಲೇಖಿಸಿ ಸಿಬಿಐ ಬಗ್ಗೆ ಕುಮಾರಸ್ವಾಮಿ ಪ್ರಸ್ತಾಪ ಮಾಡಿದ್ರು.

ಬಜೆಟ್ ಮೇಲೆ ಚರ್ಚೆ ಮುಂದುವರಿಸಿದ ಕುಮಾರಸ್ವಾಮಿ, ತಮಿಳುನಾಡು ನೀರಿನ ವಿಚಾರದಲ್ಲಿ ನಮ್ಮ ಮೇಲೆ ಗದಾ ಪ್ರಹಾರ ಮಾಡುತ್ತಿದೆ. ನಾವೇನೇ ಪಾದಯಾತ್ರೆ ಮಾಡಿದ್ರೂ, ಹೊರಗೆ ಜಾತ್ರೆ ಮಾಡಿದ್ರೂ ಕಾನೂನಾತ್ಮಕವಾಗಿಯೇ ಫೈಟ್ ಮಾಡಬೇಕು. ತಮಿಳುನಾಡು ಉದ್ಧಟತನ ತೋರುತ್ತಿದೆ, ನಾವು ಇಷ್ಟು ಕಾಲ ತಾಳ್ಮೆಯಿಂದ ಇದ್ದೇವೆ. ತಮಿಳುನಾಡಿನ ಹಸ್ತಕ್ಷೇಪವನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು.

ಎತ್ತಿನಹೊಳೆಗೆ 3 ಸಾವಿರ ಕೋಟಿ ಅನುದಾನ ನೀಡಲಾಗಿದೆ. 2011-12ರಲ್ಲಿ ಬೊಮ್ಮಾಯಿ ಜಲಸಂಪನ್ಮೂಲ ಸಚಿವರಾಗಿದ್ದಾಗ ಎತ್ತಿನಹೊಳೆ ಯೋಜನೆ ನಿರ್ಧಾರವಾಗಿತ್ತು. 24 ಟಿಎಂಸಿ ನೀರು ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ಹರಿಸುವ ಯೋಜನೆ. ಆಗ 8,323 ಕೋಟಿ ಹಣ ನಿಗದಿ ಮಾಡಲಾಗಿತ್ತು. 2014ಕ್ಕೆ 12,912 ಕೋಟಿ ರೂಪಾಯಿಗೆ ವೆಚ್ಚ ಏರಿತು. ಆಗ ಆಗ ಸಂಸತ್ ಚುನಾವಣೆಗೆ ಒಂದೇ ವರ್ಷದಲ್ಲಿ ನೀರು ತರುತ್ತೇವೆ ಅಂತ ಕಾಂಗ್ರೆಸ್ ಘೋಷಣೆ ಮಾಡಿತ್ತು. ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಅಲ್ಲ, ಕಾಂಗ್ರೆಸ್ ನಡಿಗೆ ಆಂಧ್ರದ ಕಡೆಗೆ ಅಂತ ನಾನು ಆವತ್ತೇ ಹೇಳಿದ್ದೆ. ಎತ್ತಿನ‌ಹೊಳೆಗೆ ಇಟ್ಟಿರುವ 3 ಸಾವಿರ ಕೋಟಿ ಈಗಲಾದರೂ ಸದ್ಬಳಕೆಯಾಗಲಿ. 2012-13ರಲ್ಲಿ ಎತ್ತಿನಹೊಳೆ ಕಾಮಗಾರಿ ಆರಂಭವಾಗಿತ್ತು. ಈಗ ಅದರ ಪರಿಸ್ಥಿತಿ ಏನಾಗಿದೆ ನೋಡಬೇಕು ಎಂದರು.

ಇದನ್ನೂ ಓದಿ: ಬಾಗಲಕೋಟೆ ಹೋಳಿ ಹಬ್ಬ ಉತ್ತೇಜಿಸಲು ರಾಜ್ಯ ಸರ್ಕಾರದಿಂದ 10 ಲಕ್ಷ ರೂಪಾಯಿ ಬಿಡುಗಡೆ; ಈ ಬಾರಿ ಸಂಭ್ರಮಕ್ಕೆ ಮತ್ತಷ್ಟು ಮೆರಗು

ನಟನ ಮಗಳಿಗೂ ತಪ್ಪಿಲ್ಲ ಕಾಸ್ಟಿಂಗ್ ಕೌಚ್​; ಭಯಾನಕ ಸತ್ಯ ಬಿಚ್ಚಿಟ್ಟ ನಟಿ

Published On - 5:59 pm, Wed, 9 March 22