ತಮಿಳುನಾಡಿಗೆ ಕಾವೇರಿ ಹರಿಬಿಟ್ಟು ಕುಸಿಯುತ್ತಿದೆ KRS ಡ್ಯಾಂ ನೀರಿನ ಮಟ್ಟ, ನೀರು ಉಳಿಸಿಕೊಳ್ಳುವಂತೆ ಕಾವೇರಿ ನೀರಾವರಿ ನಿಗಮಕ್ಕೆ BWSSB ಪತ್ರ 

| Updated By: ಆಯೇಷಾ ಬಾನು

Updated on: Sep 11, 2023 | 7:37 AM

ಬೆಂಗಳೂರಿನ ಜನತೆಗೆ ಕುಡಿಯುವ ನೀರು ಉಳಿಸುವಂತೆ ಬೆಂಗಳೂರು ಜಲಮಂಡಳಿ ಕಾವೇರಿ ನೀರಾವರಿ ನಿಗಮಕ್ಕೆ ಪತ್ರ ಮೂಲಕ ಮನವಿ ಮಾಡಿದೆ. ಯಾಕಂದ್ರೆ ಕಾವೇರಿ ವಿವಾದದಿಂದ ಜಲಮಂಡಳಿಗೆ ಟೆನ್ಷನ್ ಶುರುವಾಗಿದ್ದು, ಬೆಂಗಳೂರಿಗೆ ಹೇಗಪ್ಪಾ ನೀರು ಪೂರೈಕೆ ಮಾಡೋದು ಅನ್ನೋ ಚಿಂತೆ ಕಾಡತೊಡಗಿದೆ. ಈಗಾಗಲೆ ದಾಸರಹಳ್ಳಿ, ಪೀಣ್ಯ ಭಾಗದಲ್ಲಿ ವಾರಕ್ಕೊಮ್ಮೆ‌ ಕಾವೇರಿ ನೀರು ಸಪ್ಲೈ ಮಾಡಲಾಗುತ್ತಿದೆ.

ತಮಿಳುನಾಡಿಗೆ ಕಾವೇರಿ ಹರಿಬಿಟ್ಟು ಕುಸಿಯುತ್ತಿದೆ KRS ಡ್ಯಾಂ ನೀರಿನ ಮಟ್ಟ, ನೀರು ಉಳಿಸಿಕೊಳ್ಳುವಂತೆ ಕಾವೇರಿ ನೀರಾವರಿ ನಿಗಮಕ್ಕೆ BWSSB ಪತ್ರ 
ಕೆಆರ್​ಎಸ್ ಡ್ಯಾಂ
Follow us on

ಬೆಂಗಳೂರು, ಸೆ.11: ಪ್ರತಿ ಮಳೆಗಾಲಕ್ಕೂ ಈ ಹಿಂದಿನಿಂದ ಕಾವೇರಿ ನೀರಿನ ವಿಚಾರಕ್ಕೆ ತಮಿಳುನಾಡು ಕ್ಯಾತೆ ತಗಿತಾನೆ ಬಂದಿದೆ(Cauvery Water Dispute). ಅಗತ್ಯಕ್ಕೆ ತಕ್ಕಷ್ಟೂ ನೀರು ಬಿಟ್ಟರು ಇನ್ನೂ ನೀರು ಬೇಕು ಅನ್ನೋ ದುರಾಸೆ ಮಾತ್ರ ತಮಿಳುನಾಡು ಸರ್ಕಾರ(Tamil Nadu) ಬಿಡೋದಿಲ್ಲ. ಈ ಬಾರಿ ರಾಜ್ಯದಲ್ಲಿ ವಾಡಿಕೆ ಮಳೆ ಬಾರದಿದ್ರು ಕಾವೇರಿ ಜಲಾಶಯದಲ್ಲಿ ನೀರಿನ ಶೇಕರಣೆ ಪ್ರಮಾಣ ಈ ಸಲ ಬಾರಿ ಕಡಿಮೆ ಇದ್ರು, ಸುಪ್ರೀಂಕೋರ್ಟ್ ಆದೇಶದಂತೆ ಕಾವೇರಿ ಪ್ರಾಧಿಕಾರ ನೀರು ಬಿಡುತ್ತಿದೆ. ಹೀಗೆ ತಮಿಳುನಾಡಿಗೆ ದಿನಾಲೂ ನೀರು ಬಿಡುತ್ತಿದ್ದರೆ, ಇನ್ನೂ ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ನೀರು ಹೇಗೆ ಅನ್ನೋ ಪ್ರಶ್ನೆ ಎದುರಾಗಿದೆ.

ಹೌದು ಮೈಸೂರು, ಮಂಡ್ಯ ಹಾಗೂ ಬೆಂಗಳೂರಿನಲ್ಲಿ ವಾಸಿಸುವ ಜನರು ಪ್ರತಿನಿತ್ಯ ಬಳಕೆ ಮಾಡೋದು ಕಾವೇರಿ ನೀರು, ಸಮರ್ಪಕವಾಗಿ ಮಳೆ ಆಗದ ಹಿನ್ನಲೆ ಕೆ‌ಆರ್‌ಎಸ್ ಡ್ಯಾಂ ಭರ್ತಿಯಾಗಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ಕಾವೇರಿ ನಿಗಮ ಪ್ರತಿನಿತ್ಯ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ಸ್ ನೀರು ಹರಿ ಬಿಡುತ್ತಿದೆ. ಇಷ್ಟು ನೀರನ್ನ ಬಿಡುತ್ತಿರುವುದರಿಂದ ದಿನದಿಂದ ದಿನಕ್ಕೆ ಕೆ‌ಆರ್‌ಎಸ್ ಡ್ಯಾಂನ ನೀರು ಕಡಿಮೆ ಆಗುತ್ತಿದೆ. ಹೀಗೆ ಕಾವೇರಿ ನದಿಯಲ್ಲಿ ದಿನೇ ದಿನೇ ನೀರಿನ ಮಟ್ಟ ಕುಸಿಯುತ್ತಿದ್ದರೆ ಮುಂದಿನ ದಿನಗಳಲ್ಲಿ  ಬೆಂಗಳೂರು ನಿವಾಸಿಗಳಿಗೆ ಜಲಮಂಡಳಿಯವರು ನೀರು ಎಲ್ಲಿಂದ ತರುತ್ತಾರೆ. ಮೊದಲೆ ಒಂದು ದಿನ ಬಿಟ್ಟು ಒಂದು ದಿನ ನೀರು ಬಿಡುತ್ತಾರೆ. ಕೆಲವೊಂದು ಕಡೆ ವಾರಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಈಗಾಗಲೇ ಬೋರ್ ವೆಲ್ ಗಳಲ್ಲೂ ನೀರು ಬಿಡುತ್ತಿಲ್ಲ ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ನೀರಿಗೆ ಅಭಾವ ಕಾಡಲಿದೆ. ಈ ಬಗ್ಗೆ BWSSB ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಅಂತ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: ಮನೆ ಮನೆಗೆ ಬರಲಿದೆ ಕ್ಲಿನಿಕ್, ಉಚಿತ ಔಷಧಿ; ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ಸಿದ್ದರಾಮಯ್ಯ ಸರ್ಕಾರ ಪ್ಲಾನ್

ನೀರು ಉಳಿಸಿಕೊಳ್ಳುವಂತೆ ಕಾವೇರಿ ನೀರಾವರಿ ನಿಗಮಕ್ಕೆ BWSSBಯಿಂದ ಪತ್ರ

ಬೆಂಗಳೂರಿನ ಜನತೆಗೆ ಕುಡಿಯುವ ನೀರು ಉಳಿಸುವಂತೆ ಬೆಂಗಳೂರು ಜಲಮಂಡಳಿ ಕಾವೇರಿ ನೀರಾವರಿ ನಿಗಮಕ್ಕೆ ಪತ್ರ ಮೂಲಕ ಮನವಿ ಮಾಡಿದೆ. ಯಾಕಂದ್ರೆ ಕಾವೇರಿ ವಿವಾದದಿಂದ ಜಲಮಂಡಳಿಗೆ ಟೆನ್ಷನ್ ಶುರುವಾಗಿದ್ದು, ಬೆಂಗಳೂರಿಗೆ ಹೇಗಪ್ಪಾ ನೀರು ಪೂರೈಕೆ ಮಾಡೋದು ಅನ್ನೋ ಚಿಂತೆ ಕಾಡತೊಡಗಿದೆ. ಈಗಾಗಲೆ ದಾಸರಹಳ್ಳಿ, ಪೀಣ್ಯ ಭಾಗದಲ್ಲಿ ವಾರಕ್ಕೊಮ್ಮೆ‌ ಕಾವೇರಿ ನೀರು ಸಪ್ಲೈ ಮಾಡಲಾಗುತ್ತಿದೆ. ಇಷ್ಟು ದಿನ ಕಣ್ಣು ಮುಚ್ಚಿ ಕುಳಿತಿದ್ದ BWSSB ಎಚ್ಚೆತ್ತುಕೊಂಡು ಕಾವೇರಿ ನಿಗಮಕ್ಕೆ ಪತ್ರ ಬರೆದಿದ್ದು ಪ್ರತಿ ತಿಂಗಳು 2 ಟಿಎಂಸಿ ನೀರು ಬೇಕಾಗುತ್ತೆ ಹೀಗಾಗಿ‌ ನೀರು ಉಳಿಸಿಕೊಳ್ಳಿ ಅಂತ ಪತ್ರದ ಮೂಲಕ ಮನವಿ ಮಾಡಿದೆ.

ಒಟ್ಟಿನಲ್ಲಿ ಮಳೆಗಾಲದಲ್ಲೆ ಬೆಂಗಳೂರಿಗರಿಗೆ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಇಂತಹ ಸಮಯದಲ್ಲಿ ತಮಿಳುನಾಡಿಗೆ ನೀರು ಹರಿ ಬಿಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಮಳೆ ಆಗದಿದ್ದರೆ ಹೇಗೆ ಅನ್ನೋ ಪ್ರಶ್ನೆ ಎದುರಾಗಿದೆ. ಹೀಗಿರುವಾಗ ಇಷ್ಟು ದಿನ ಕಣ್ಣು ಮುಚ್ಚಿ ಕುಳಿತಿದ್ದ BWSSB ಅಧಿಕಾರಿಗಳು ಇದೀಗಲಾದರು ಎಚ್ಚೆತ್ತುಕೊಂಡು ನೀರು ಉಳಿಸಿಕೊಳ್ಳುವಂತೆ ಕಾವೇರಿ ನಿಗಮಕ್ಕೆ ಪತ್ರ ಬರೆದಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ